Skip to main content

 

                 ಸುತ್ತ-ಮುಕ್ತ 


 

  ಇಂಚರದಲಿ ಅಮರತ್ವ ಪಡೆದ ಫೀನಿಕ್ಸ್ ಹಕ್ಕಿಗಳು

 

ಕಾಡಿಲ್ಲದೆ ನಾಡಿಲ್ಲ. ಆದರೆ ಅಮೆಜಾó ನ್ನಲ್ಲಿ ಪ್ರತಿ ನಿಮಿಷ ಒಂದು ಫೂಟ್ಬಾಲ್ ಆಟದ ಮೈದಾನದಷ್ಟು ಮಳೆಕಾಡು ಅಳಿದು ಹೋಗುತ್ತಿದೆಯೆಂದಾದಲ್ಲಿ, ವಿಶ್ವದಾದ್ಯಂತ ನಿತ್ಯ ನಾಶವಾಗುತ್ತಿರುವ ಕಾಡಿನ ಅಳತೆ ಊಹಿಸಿದರೆ ಆತಂಕವಾಗದಿರದು.

 ಸಹಸ್ರಾರು ವರ್ಷಗಳಿಂದ ವನಸಿರಿಯನ್ನು ಸುಡುತ್ತಾ, ಅರಣ್ಯ ನಾಶಕ್ಕೆ ಒಂದು ಕಾರಣವಾಗಿರುವ ವಿಶ್ವವ್ಯಾಪಿ ಕಾಳ್ಗಿಚ್ಚು,  ಮುಂದುವರಿದ ದೇಶಗಳು ಕೂಡಾ  ಮಂಡಿಯೂರುವಂತೆ ಮಾಡಬಲ್ಲದು. ಕ್ಯಾಲಿಫೋರ್ನಿಯದಲಂತೂ ಒಂದು ಋತು ಅನ್ನುವಷ್ಟು ಸರ್ವೇಸಾಮಾನ್ಯವೆನಿಸಿದ ಕಾಳ್ಗಿಚ್ಚು, 2021ರಲ್ಲಿ, ಮೂರು ತಿಂಗಳು ಕಾಡನ್ನು ಧಗಧಗಿಸಿ, 26 ದಶಲಕ್ಷ ಎಕರೆ ವನಸಂಪತ್ತನ್ನು ಸುಟ್ಟು ಹಾಕಿತ್ತು.

ಕಾಳ್ಗಿಚ್ಚುಗಳನ್ನು ಕ್ರೌನ್ ಫೈರ್ಸ್, ಲ್ಯಾಡರ್ ಫೈರ್ಸ್, ಗ್ರೌಂಡ್ ಫೈರ್ಸ್ ಹಾಗೂ ಸರ್ಫೇಸ್ ಫೈರ್ಸ್ ಎಂದು ವಿಂಗಡಿಸಲಾಗಿದೆ. ಬಿರುಗಾಳಿ, ಅತೀ ತಾಪಮಾನ, ಕಡಿಮೆ ತೇವಾಂಶ, ಸಿಡಿಲು, ಭೂಪ್ರದೇಶದ ಗುಣಲಕ್ಷಣ ಮುಂತಾದವು ಕಾಳ್ಗಿಚ್ಚುಗಳು ಹರಡಲು ಕಾರಣವಾದರೂ 80-90% ಕಾಳ್ಗಿಚ್ಚುಗಳ ಹುಟ್ಟಿಗೆ; ಕ್ಯಾಂಪ್ ಫೈರ್ಸ್, ವಿದ್ಯುತ್ ತಂತಿ, ಸಿಗರೇಟ್ ತುಂಡು ಹಾಗೂ ದುಷ್ಕರ್ಮಿಗಳು ಹಚ್ಚುವ ಬೆಂಕಿ ಇತ್ಯಾದಿ ರೂಪದಲ್ಲಿ ಮಾನವನೇ ಕಾರಣ ಅನ್ನುವುದು ಆಘಾತಕಾರಿ. 2015ರಲ್ಲಿ ಇಂಡೋನೇಷ್ಯಾದ ತಾಳೆಎಣ್ಣೆ ಕಂಪನಿಯೊಂದರ ಕೃಷಿ ಭೂಮಿ ವಿಸ್ತರಿಸುವ  ಮಹತ್ವಾಕಾಂಕ್ಷೆ, 18 ದಶಲಕ್ಷ ಅರಣ್ಯ ಭೂಮಿ, ಪಶು ಪಕ್ಷಿಗಳನ್ನು ಸುಟ್ಟು ಹಾಕಿತು, ನೆರೆಯ ರಾಷ್ಟ್ರಗಳಲ್ಲಿ ಕೂಡಾ ಉಸಿರಾಟದ ತೊಂದರೆ, ಅನಾರೋಗ್ಯ ಉಂಟು ಮಾಡಿತು ಹಾಗೂ 19 ಅಗ್ನಿಶಾಮಕ ಸಿಬ್ಬಂದಿಗಳ ಬಲಿ ಪಡೆಯಿತು.

ಆದಾಗ್ಯೂ ಕೆಲವು ವೃಕ್ಷ ಪ್ರಭೇದಗಳು ನಿರಂತರವಾಗಿ ಜೀವಿಸಿರಲು ಕಾಳ್ಗಿಚ್ಚುಗಳು ಅಗತ್ಯ. ಕೆಲವು ರೀತಿಯ ಮರಗಳ ಬೀಜಗಳು ಅವುಗಳ ಶಂಕು ಆಕೃತಿಯ ರಚನೆಗಳಲ್ಲಿ ಸಂರಕ್ಷಿತವಾಗಿರುತ್ತವೆ ಮತ್ತು ಬೆಂಕಿಗೆ ಅವು ಬಿರಿಯುತ್ತವೆ! ನಿಯಮಿತ ಜೀವನ ಚಕ್ರ ಕ್ರಮಿಸಲು ಬೆಂಕಿಯನ್ನು ಅವಲಂಬಿಸುವ ಮರಗಳಿವೆ. ಕೆಲವು ಮರಗಳಿಗೆ ವರ್ಷದಲ್ಲಿ ಕೆಲವೊಮ್ಮೆ, ಇನ್ನು ಕೆಲವಕ್ಕೆ ಶತಮಾನದಲ್ಲಿ ಕೆಲವೊಮ್ಮೆ, ಬಾಳಿ ಬದುಕಲು ಕಾಡಿನ ಬೆಂಕಿ ಅತ್ಯಗತ್ಯ. ಕ್ರಿಮಿ ಕೀಟಗಳನ್ನು ಕೊಲ್ಲುವ, ರೋಗ ರುಜಿನುಗಳನ್ನು ಮಟ್ಟಹಾಕುವ ಕಾಡಿನಬೆಂಕಿ ಅಲ್ಲಿನ ಒಟ್ಟು ಪರಿಸರವನ್ನು ಆರೋಗ್ಯಕರವಾಗಿರಿಸುತ್ತದೆ. ಕಾಡಿನ ಪೊದೆ ಹಾಗೂ ಕುರುಚಲು ಗಿಡಗಳನ್ನು ಅಳಿಸಿ ಹೊಸದಾದ ಹುಲ್ಲು, ಗಿಡಮೂಲಿಕೆಗಳು ಹಾಗೂ ಹೊದರುಗಳಿಗೆ ಎಡೆ ಮಾಡಿ ಕೊಡುವ ಕಾಡಿನ ಬೆಂಕಿ ಮೂಲಕ ಮೃಗಗಳಿಗೆ ಹಾಗೂ ಪಕ್ಷಿಗಳಿಗೆ ಆಹಾರ ಹಾಗೂ ಆಶ್ರಯ ಒದಗಿಸುತ್ತವೆ. ಅವಶೇಷಗಳನ್ನು ನಿವಾಳಿಸಿ ತೆಗೆವ ಬೆಂಕಿ, ಬಿಸಿಲು ನೆಲದ ಮೇಲೆ ಬೀಳಲು ನೆರವಾಗಿ ಸಣ್ಣ ಪುಟ್ಟ ಗಿಡಮರಗಳನ್ನು ಪೋಷಿಸುತ್ತದೆ ಮತ್ತದು ದೊಡ್ಡ ಮರಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ. ಎಲ್ಲಾ ಕಾಡಿನ ಬೆಂಕಿಯನ್ನು ಪೂರ್ತಿ ಹತ್ತಿಕ್ಕುವುದು ಕೂಡಾ, ಅವಶೇಷಗಳು ಹಾಗೂ ಪೊದೆ ಮತ್ತು ಕುರುಚಲಿನ ಅಡ್ಡಾದಿಡ್ಡಿ ಬೆಳವಣಿಗೆಗೆ ಕಾರಣವಾಗಿ, ಕಾಳ್ಗಿಚ್ಚುಗಳ ಹೆಚ್ಚಳಕ್ಕೆ ಇಂಬುಗೊಡುತ್ತಿರುವುದು ವಿಪರ್ಯಾಸವೆನಿಸಿದೆ.

ಕಾಳ್ಗಿಚ್ಚುಗಳ ಮಟ್ಟಿಗೆ, ಆಸ್ಟ್ರೇಲಿಯಾದ್ದು ಕರಾಳ ಇತಿಹಾಸ. ಆದರೆ 2019 ಸೆಪ್ಟೆಂಬರ್ನಿಂದ 2020 ಜನವರಿವೆರೆಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಹಾಗೂ ವಿಕ್ಟೋರಿಯಾ ಪ್ರಾಂತ್ಯಗಳನ್ನು ಹಾಗೂ ಕ್ಯಾಂಗರೂ ದ್ವೀಪವನ್ನು ಕಾಡಿದ ಕಾಳ್ಗಿಚ್ಚು ಮಾಡಿದ ವಿಕೋಪ ಐತಿಹಾಸಿಕ. ಸುಮಾರು 27 ಎಕರೆ ಕಾಡನ್ನು ನಾಶ ಮಾಡಿದ ದಾವನಲ, ಆಸ್ಟ್ರೇಲಿಯಾದ ಸಾಂಸ್ಕøತಿಕ ಲಾಂಛನಗಳಾದ ಕ್ಯಾಂಗರೂಗಳು ಮತ್ತು ಕೊವೋಲಗಳು ಸೇರಿ, 100 ಕೋಟಿ ಪಶು ಪಕ್ಷಿಗಳನ್ನು ಬಲಿ ಪಡೆಯಿತು..

ವಿನಾಶಕಾರಿ ಕಾಳ್ಗಿಚ್ಚಿನ ತರುವಾಯ ಅಲ್ಲಿ ಕಾಡಿಗೆ ಕಾಡೇ ಅಸಹನೀಯ ಮೌನಕ್ಕೆ ಶರಣಾಯಿತು. ಬಾರದ ಲೋಕಕ್ಕೆ ಹಾರಿದ ಹಕ್ಕಿಗಳು, ಜೀವಂತ ಚಿತೆಗೇರಿದ ಪ್ರಾಣಿಗಳು, ವಾಸಾಸ್ಥಳ  ಕಳೆದುಕೊಂಡು ಅಲೆದಾಡುವಂತಾದವು ಲೆಕ್ಕವಿಲ್ಲದಷ್ಟು. ಇಂದು ಅಲ್ಲಿನ 25%ನಷ್ಟು ಪಕ್ಷಿ ಪ್ರಭೇದಗಳು ನಶಿಸಿ ಹೋಗುತ್ತಿರುವ ಜೀವಸಂಕುಲಗಳ ಪಟ್ಟಿಗೆ ಸೇರಿವೆ, ಪ್ರತಿ ಆರರಲ್ಲಿ ಒಂದು ಹಕ್ಕಿ ಅಪಾಯದ ಅಂಚಿನಲ್ಲಿದೆ.

ಇವೆಲ್ಲದರ ನಡುವೇಯೇ, ಸುಮಾರು 50 ಹಕ್ಕಿಗಳ ಇಂಚರವನ್ನು ಧ್ವನಿ ಮುದ್ರಿಸಿಕೊಳ್ಳುವ ಘನ  ಕಾರ್ಯವನ್ನು ಕೈಗೊಳ್ಳಲಾಯಿತು ಅನ್ನುವದು ವಿಶೇಷ. ಮತ್ತು ಆಲ್ಬಮ್, ಆಸ್ಟ್ರೇಲಿಯಾದ ಅರಿಯಾ (ಆಸ್ಟ್ರೇಲಿಯನ್ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಷನ್) ಮ್ಯೂಸಿಕ್ ಚಾರ್ಟ್ಗಳಲ್ಲಿ, ಸದಾ ಜನಪ್ರಿಯವೆನಿಸಿದ ಟೈಲರ್ ಶ್ವಿಫ್ಟ್ನಂಥಾ ದಿಗ್ಗಜಳನ್ನು ತಳ್ಳಿ ಹಾಕಿ, ಟಾಪ್ 5ನಲ್ಲಿ ಸ್ಥಾನ ಗಿಟ್ಟಿಸಿ ಕೊಂಡದ್ದು ಇನ್ನೊಂದು ದಾಖಲೆ.  

ಕೊಕಟೂಗಳ (ಜುಟ್ಟುಳ್ಳ ಗಿಣಿ) ಸಮೂಹಗಾನ, ಬೊವ್ಬರ್ಡ್ಗಳ ಮಣಿನಾದ, ಕಡಲಹಕ್ಕಿಗಳ ಸಿಂಫನಿ, ಬದುಕುಳಿದ ಏಕೈಕ ರಾತ್ರಿಗಿಳಿಯ ಮನವ ಕಾಡುವಂಥ ಆರ್ದ್ರ ಮೊರೆ-ಇವೆಲ್ಲವೂಬರ್ಡ್ ಲೈಫ್ ಆಸ್ಟ್ರೇಲಿಯಾ ನಿರ್ಮಿಸಿದಸಾಂಗ್ಸ್ ಆಫ್ ಡಿಸೆಪೀಯರೆನ್ಸ್ ಶೀರ್ಷಿಕೆಯ ಧ್ವನಿಮುದ್ರಿಕೆಯಲ್ಲಿ ಗೂಡು ಕಟ್ಟಿವೆ.

 ಪಶುಪಕ್ಷಿಗಳ ಸಂಗೀತ, ಚಾರ್ಟ್ಗಳಲ್ಲಿ  ಟಾಪ್ ಅನಿಸಿಕೊಳ್ಳುವುದು ಇದು ಮೊದಲೇನಲ್ಲ. 70 ದಶಕದಲ್ಲಿಸಾಂಗ್ಸ್ ಆಫ್ ಹಂಪ್ ಬ್ಯಾಕ್ ವೇಲ್ ಶೀರ್ಷಿಕೆಯಡಿ   ರೆಕಾರ್ಡ್ ಮಾಡಲಾಗಿದ್ದ ಡುಬ್ಬವುಳ್ಳ ತಿಮಿಂಗಿಲಗಳ ಸುದೀರ್ಘ ಗಾಯನದ ಆಲ್ಬಮ್ ಒಂದು, ಸುಮಾರು ಒಂದು ಲಕ್ಷದಷ್ಟು ಮಾರಾಟವಾಗಿತ್ತು. ಅದಕ್ಕಿಂತಲೂ ಮುಖ್ಯ ಆಲ್ಬಂಸೇವ್ ವೇಲ್ಸ್ ಅಭಿಯಾನಕ್ಕೆ ತಿದಿಯೊತ್ತಿತು ಮತ್ತು ತಿಮಿಂಗಿಲಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬೇಟೆಯಾಡುವುದರ ಮೇಲೆ 10 ವರ್ಷಗಳ ಕಾಲ ವಿಶ್ವವ್ಯಾಪಿ ತಾತ್ಕಾಲಿಕ ತಡೆಯೊಡ್ಡುವಲ್ಲಿ ಯಶಸ್ವಿಯಾಯಿತು.

ಕಣ್ಮರೆಯ ಹಾಡುಗಳುಅರಣ್ಯ ರೋದನವಾಗದೆ, ಅಳಿದುಳಿದ ಪಶು ಪಕ್ಷಿಗಳ ಸಂರಕ್ಷಣೆಗೆ ಪ್ರೇರಣೆಯಾಗಲಿ.

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...