Skip to main content

Posts

Showing posts from March, 2023
                   ಸುತ್ತ - ಮುಕ್ತ       ಇಂಚರದಲಿ ಅಮರತ್ವ ಪಡೆದ ಫೀನಿಕ್ಸ್ ಹಕ್ಕಿಗಳು   ಕಾಡಿಲ್ಲದೆ ನಾಡಿಲ್ಲ . ಆದರೆ ಅಮೆಜಾ ó ನ್ ‍ ನಲ್ಲಿ ಪ್ರತಿ ನಿಮಿಷ ಒಂದು ಫೂಟ್ಬಾಲ್ ಆಟದ ಮೈದಾನದಷ್ಟು ಮಳೆಕಾಡು ಅಳಿದು ಹೋಗುತ್ತಿದೆಯೆಂದಾದಲ್ಲಿ , ವಿಶ್ವದಾದ್ಯಂತ ನಿತ್ಯ ನಾಶವಾಗುತ್ತಿರುವ ಕಾಡಿನ ಅಳತೆ ಊಹಿಸಿದರೆ ಆತಂಕವಾಗದಿರದು.   ಸಹಸ್ರಾರು ವರ್ಷಗಳಿಂದ ವನಸಿರಿಯನ್ನು ಸುಡುತ್ತಾ , ಅರಣ್ಯ ನಾಶಕ್ಕೆ ಒಂದು ಕಾರಣವಾಗಿರುವ ವಿಶ್ವವ್ಯಾಪಿ ಕಾಳ್ಗಿಚ್ಚು ,   ಮುಂದುವರಿದ ದೇಶಗಳು ಕೂಡಾ   ಮಂಡಿಯೂರುವಂತೆ ಮಾಡಬಲ್ಲದು . ಕ್ಯಾಲಿಫೋರ್ನಿಯದಲಂತೂ ಒಂದು ಋತು ಅನ್ನುವಷ್ಟು ಸರ್ವೇಸಾಮಾನ್ಯವೆನಿಸಿದ ಈ ಕಾಳ್ಗಿಚ್ಚು , 2021 ರಲ್ಲಿ , ಮೂರು ತಿಂಗಳು ಕಾಡನ್ನು ಧಗಧಗಿಸಿ , 26 ದಶಲಕ್ಷ ಎಕರೆ ವನಸಂಪತ್ತನ್ನು ಸುಟ್ಟು ಹಾಕಿತ್ತು . ಕಾಳ್ಗಿಚ್ಚುಗಳನ್ನು ಕ್ರೌನ್ ಫೈರ್ಸ್ , ಲ್ಯಾಡರ್ ಫೈರ್ಸ್ , ಗ್ರೌಂಡ್ ಫೈರ್ಸ್ ಹಾಗೂ ಸರ್ಫೇಸ್ ಫೈರ್ಸ್ ಎಂದು ವಿಂಗಡಿಸಲಾಗಿದೆ . ಬಿರುಗಾಳಿ , ಅತೀ ತಾಪಮಾನ , ಕಡಿಮೆ ತೇವಾಂಶ , ಸಿಡಿಲು , ಭೂಪ್ರದೇಶದ ಗುಣಲಕ್ಷಣ ಮುಂತಾದವು ಕಾಳ್ಗಿಚ್ಚುಗಳು ಹರಡಲು ಕಾರಣವಾದರೂ 80-90% ಕಾಳ್ಗಿಚ್ಚುಗಳ ಹುಟ್ಟಿಗೆ ; ಕ್ಯಾಂಪ್ ಫೈರ್...