Posts

                                            ( ʼ ತುಷಾರ ʼ ಡಿಸೆಂಬರ್‌ 2023ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ವಿಶೇಷ ಲೇಖನ)              ಪಿ ಎನ್ ಎಸ್ ಘಾಜಿ ó ಮುಳುಗಡೆ ರಹಸ್ಯವಾಗಿ ಉಳಿದ ಜಲಾಂತರ್ಗಾಮಿಯ ಜಲಸಮಾಧಿಯ ಕಥೆ     ( ಈ ಲೇಖನವನ್ನು ಮೊಬೈಲ್ ನಲ್ಲಿ ಓದುವವರ ಗಮನಕ್ಕೆ: ಘಾಜಿ  ಅನ್ನುವುದನ್ನು ನಾನು ಸರಿಯಾಗಿ ಟೈಪ್ ಮಾಡಿರುತ್ತೇನೆ. ನೀವು ಇದನ್ನು ಕಂಪ್ಯೂಟರ್ ನಲ್ಲಿ ತೆರೆದು ಓದಿದರೆ ಇದು ಸ್ಪಷ್ಟವಾಗುತ್ತದೆ. ಆದರೆ ಯಾವುದೋ ತಾಂತ್ರಿಕ ಕಾರಣದಿಂದ, ಅದು ಮೊಬೈಲ್ ನಲ್ಲಿ ಗಾಜಿಂ ಎಂದು ಬದಲಾಗುತ್ತಿದೆ ಎಂಬುದನ್ನು ದಯವಿಟ್ಟು ಗಮನಿಸಿ.) ಇಸವಿ 2003. ಬಂಗಾಳ ಕೊಲ್ಲಿಯಲ್ಲಿ ವಿಶಾಖಪಟ್ಟಣಂ ಬಂದರಿನ ಸಮೀಪ ಕಡಲಿನಡಿಯ ಶಾಂತತೆಯನ್ನು ಕದಡುವ ಚಟುವಟಿಕೆಯೊಂದು ನಡೆಯುತ್ತಿದೆ . ಆ ಕಡಲಿನಡಿಯಲ್ಲಿ , ಮೂತಿಯ ಭಾಗ ಸಿಡಿದು ಹೋಗಿದ್ದ , ತನ್ನ ಪಾಡಿಗೆ ತಾನು ಸೋತು ಮಲಗಿದ್ದ ಒಂದು ಸಬ್ ‍ ಮೆರೀನ್ ‍ ನ ( ಜಲಾಂತರ್ಗಾಮಿ ) ಅವಶೇಷವನ್ನು ಭಾರತದ ನೌಕಾಪಡೆಯ ನುರಿತ ಮುಳುಗುಗಾರರು , ಒಡೆದು ಒಳನುಗ್ಗಿ ತಡಕಾಡುತ್ತಿದ್ದಾರೆ . ಕೆಲವು ಕುರುಹುಗಳು , ಜೊತೆಯಲ್ಲಿ ಆರು ಯೋಧರ ಶವಗಳು , ಇವಿಷ್ಟರೊಂದಿಗೆ ಅವರು ಅದರಿಂದ ಹೊರಬರುತ್ತಾರೆ . ಮುಂದೆ ಆ ಆರು ಯೋಧರ ಕಳೇಬರಗಳನ್ನು ಭಾರತದ ಸಕಲ ಸೇನಾಪಡೆಯ ಗೌರವಗಳೊಂದಿಗೆ ದಫನ ಮಾಡಲಾಗುತ್ತದೆ . ವಿಶೇಷವೇನೆಂದರೆ ಆ
Recent posts