Skip to main content

 

       ದೀರ್ಘಾಯುಷ್ಯ ಸ್ಪರ್ಧೆಯಲ್ಲಿ ಗೆಲ್ಲುವುದು ಆಮೆ!

 

  (ನನ್ನ 'ಸುತ್ತ -ಮುಕ್ತ' ಅಂಕಣ ಮಾಲೆಯಿಂದ)

 

ಪುರಾಣ ಕಾಲದ ಯಯಾತಿಯಷ್ಟು ಅಲ್ಲವಾದರೂ, ಚಿರಯೌವನದ ಬಯಕೆ ಅಷ್ಟಿಷ್ಟು ಎಲ್ಲರಲ್ಲೂ ಇದ್ದೇ ಇರುತ್ತದೆ. ಕೂದಲಿನ ಡೈ, ಮುಖದ ನೆರಿಗೆಗಳನ್ನು ಹೋಗಲಾಡಿಸುವ (ಅತಿಯಾದರೆ ಅಪಾಯಕಾರಿಯಾಗಬಲ್ಲ, ಬ್ಯಾಕ್ಟೀರಿಯಾ ಜನ್ಯ ವಿಷಕಾರಕ ಪದಾರ್ಥ  ಹೊಂದಿರುವ) ಬೊಟೋಕ್ಸ್ನಂತಹಾ ಚುಚ್ಚುಮದ್ದು ಇತ್ಯಾದಿಗಳ ರೂಪದಲ್ಲಿ ಅದು ಪ್ರಕಟವಾಗುತ್ತದೆ. ವೃದ್ಧಾಪ್ಯವನ್ನು ಪ್ರಕೃತಿ ಸಹಜ ಪ್ರಕ್ರಿಯೆ ಎಂದು ತೆಪ್ಪಗೆ ಸ್ವೀಕರಿಸುವವರೂ ಇದ್ದಾರೆ.

ವಯಸ್ಸಾಗುವುದು, ನಿಮ್ಮ ಬರಿಗಣ್ಣಿಗೆ ಕಾಣದ ನಿಮ್ಮ ಕೋಟಿ ಕೋಟಿ ಜೀವಕೋಶಗಳಿಗೆ. ನೀವು ವಿಶ್ರಾಂತಿಯಲ್ಲಿರುವಾಗಲೂ ನಿಮಗೋಸ್ಕರ ದುಡಿಯುವ ನಿಮ್ಮ ಒಡೆತನದ ಕಾರ್ಖಾನೆಗಳಿಗೆ. ಮಾತ್ರವಲ್ಲ ನಿಮ್ಮ ಆಯುಷ್ಯ ನಿಮ್ಮ ಪೂರ್ವಜರ ಬಳುವಳಿ. ಅದರಲ್ಲಿ ನಿಮ್ಮ ಜೀನ್ ಪಾತ್ರ ಗಣನೀಯ.   

ಜೀವಕೋಶಗಳ ಒಂದು ಸಹಜ ಪ್ರಕ್ರಿಯೆ ಸೆಲ್ಯೂಲರ್ ಸಿನಾಸಿನ್ಸ್.   ಕ್ಯಾನ್ಸರ್ ತಗಲದಂತೆ ತಡೆಯುವುದು, ಗಾಯ ಗುಣವಾಗುವಂತೆ ಮಾಡುವುದು ಇದುವೇ. ಹಾಗೆಂದು ಇದು ಪೂರ್ತಿ ವರವೇನೂ ಅಲ್ಲ. ಸಿನಾಸಿನ್ಸ್ಗೆ ಬಲಿಯಾದ ಜೀವಕೋಶಗಳು ಕ್ರಿಯಾಹೀನವಾಗುತ್ತವೆ ಮತ್ತು ಅವುಗಳ ಶೇಖರಣೆ ವೃದ್ಧಾಪ್ಯಕ್ಕೆ ಕಾರಣವಾಗುತ್ತದೆ.

ಆದರೇನಂತೆ ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ವಯಸ್ಸನ್ನು ಮುಂದೂಡುವ ಪ್ರಯತ್ನದಲ್ಲಿ ಫಲ         ನೀಡಬಹುದು. ಆದರೆ ಮಾಲಿನ್ಯ, ಒತ್ತಡದ ವೇಗದ ಜೀವನ,   ಇತ್ಯಾದಿಗಳನ್ನು ಮೀರುವುದು ಸುಲಭವಲ್ಲ. ಎಲ್ಲರೂ ದೀರ್ಘಾಯುಷಿಗಳಾದರೆ ಜನಸಂಖ್ಯೆಯೇ ಆಯುಷ್ಯಕ್ಕೆ ಮುಳುವಾಗಬಹುದು ಕೂಡಾ. 

ದೀರ್ಘಾಯುಷ್ಯವೆಂದರೆ ಇತರರಿಗೆ ಹೊರೆಯಾಗುವುದಲ್ಲ. ವೃದ್ಧಾಪ್ಯದಲ್ಲೂ ನಟ ಬಿಗ್ ಬಿ, ಮೋದೀಜಿ, ಅಗಲಿದ ಖುಶ್ವಂತ್ ಸಿಂಗ್, ಶಿವರಾಮ ಕಾರಂತ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರಂತೆ ಕ್ರಿಯಾಶೀಲವಾಗಿರುವುದು ಎಲ್ಲರ ಆಸೆ.

ಹಲವು ಕಾಲ, ಹರ್ಷದಿಂದ ಬಾಳುವುದರ ಹಿಂದಿರುವ ಜಪಾನೀಸ್ ರಹಸ್ಯ-ಇದುಈಕೆಗೈ ಎಂಬ ಪ್ರಸಿದ್ಧ ಪುಸ್ತಕದ ವಸ್ತು. ಜಪಾನ್ ದ್ವೀಪ ಓಕನಾವದಲ್ಲಿ ಪ್ರತಿ ಸರಾಸರಿ ಒಂದು ಲಕ್ಷದಷ್ಟು ಜನರಲ್ಲಿ ಕಡೇಪಕ್ಷ 25 ಜನರು ದೀರ್ಘಾಯುಷಿಗಳು. ಇದರ ರಹಸ್ಯವನ್ನು ಬಯಲಿಗೆಳೆದ ಪುಸ್ತಕದ ಲೇಖಕದ್ವಯರು, ತಾವು ಕಂಡುಕೊಂಡ ಕಾರಣಗಳನ್ನು 10 ಸೂತ್ರಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಅವುಗಳಲ್ಲಿ ಒಂದು: ಅವಸರದ, ಆತುರದ ಬದುಕು ಬೇಡ. ಸಾವಕಾಶವಾಗಿರಿ. ನಿಧಾನವಾಗಿ ಸಾಗಿ.

ಇನ್ನು ಸೂತ್ರವನ್ನು ಓಕನಾವ ದ್ವೀಪವಾಸಿಗಳು ಮತ್ತು ಅವರಂತಹ ಕೆಲವರು ಅರಿತೋ ಅರಿಯದೆಯೋ ಪಾಲಿಸಿರಬಹುದು. ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವವರು ಮಾನವರಲ್ಲ, ಆಮೆಗಳು. ಅವುಗಳ ನಿಧಾನ ಪ್ರವೃತ್ತಿ ಹಾಗೂ ದೀರ್ಘಾಯುಷ್ಯ ಎರಡೂ ಗುಣಗಳು ಕೇವಲ ಕಾಕತಾಳೀಯವಿರಬಹುದೇನೋ? ನೀತಿಕಥೆಯಲ್ಲಿ ಮಾತ್ರವಲ್ಲ, ಭೂಮಿಯ ಮೇಲೆ (ಭೂಮಿಯಲ್ಲಿ ಅಲ್ಲ) ಬಾಳುವ ಜೀವಿಗಳ ನಡುವಿನ ದೀರ್ಘಾಯುಷ್ಯ ಸ್ಪರ್ಧೆಯಲ್ಲಿ ಕೂಡಾ, ಮೇಲುಗೈ ಸಾಧಿಸುವುದು ಆಮೆಯೇ! ಆಮೆಗಳು 150 ವರ್ಷಗಳಷ್ಟು ಸುದೀರ್ಘ ಕಾಲ ಜೀವನ ನಡೆಸಿದ ಉದಾಹರಣೆಗಳು ಇವೆ. ಸುಮ್ಮನಲ್ಲ, ಅವು ಚೈನೀಸ್ ಸಂಸ್ಕøತಿಯಲ್ಲಿ ದೀರ್ಘಾಯುಷ್ಯದ ಸಂಕೇತ ಅನಿಸಿಕೊಂಡಿರುವುದು.

1777ರಲ್ಲಿ ಬ್ರಿಟೀಷ್ ಅನ್ವೇಷಣಕಾರ ಕ್ಯಾಪ್ಟನ್ ಥಾಮಸ್ ಕುಕ್, ಟುಯಿ ಮಲಿಲ (ಟೊಂಗಾ ರಾಜ) ಎಂದು ಹೆಸರಿಸಲಾದ ಮರಿ ಹೆಣ್ಣಾಮೆಯನ್ನು ಟೊಂಗಾ (ಶಾಂತ ಸಮುದ್ರದ ಒಂದು ದ್ವೀಪಗಳ ಸಮೂಹ ರಾಷ್ಟ್ರ) ರಾಜಮನೆತನಕ್ಕೆ ಉಡುಗೊರೆಯಾಗಿ ನೀಡಿದ್ದನಂತೆ. ಅದು 19 ಮೇ 1969ರವರೆಗೆ (188 ವರ್ಷ) ಬದುಕಿ ಇತಿಹಾಸದ ಪುಟಗಳಲ್ಲಿ ಅಮರವಾಯಿತು. ಸಂರರಕ್ಷಿಸಲಾದ ಅದರ ದೇಹವನ್ನು ಟೋಂಗನ್ ನ್ಯಾಷನಲ್ ಸೆಂಟರ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಗಿನ್ನೆಸ್ ದಾಖಲೆಗಳ ಪ್ರಕಾರ ಇದುವೇ ಅತ್ಯಂತ ದೀರ್ಘ ಕಾಲ ಬಾಳಿದ ಆಮೆ. ಆದರೆ ಪಶ್ಚಿಮ ಬಂಗಾಳದ ಅಲಿಪುರ್ ಮೃಗಾಲಯದಲ್ಲಿ ಆಮೆಯೊಂದು 250 ವರ್ಷ ಬದುಕಿತ್ತು ಎನ್ನಲಾಗುತ್ತದೆ. 23 ಮಾರ್ಚ್ 2006ರಂದು ಸತ್ತ ಆಲ್ಡಬ್ರಾ ದೈತ್ಯ ಆಮೆಯನ್ನು ಲಾರ್ಡ್ ವೆಲೆಸ್ಲಿ, ಅಲಿಪುರ್ ಜೂó ನಿರ್ಮಾಣವಾಗುತ್ತಿದ್ದಾಗಲೇ ನೀಡಿದ್ದನಂತೆ. ಅದು ರಾಬರ್ಟ್ ಕ್ಲೈವ್ ನೆಚ್ಚಿನ ಸಾಕು ಪ್ರಾಣಿಯಾಗಿತ್ತಂತೆ. ಜೂóವಿನ ಅಧಿಕಾರಿಗಳು ಅದರ ಆಯುಷ್ಯ 250 ವರ್ಷ ಅನ್ನುತ್ತಾರಾದರೂ ಅದಕ್ಕೆ ಮನ್ನಣೆ ಇಲ್ಲವಾದುದರಿಂದ ಅದು ಅವಕಾಶ ವಂಚಿತವಾಗಿದೆ. ಅಂದ ಹಾಗೆ ಅದರ ಹೆಸರು-ಅದ್ವೈತ.

ಆದರೆ ಜನವರಿ 12, 2022ರಂದುಇದಕ್ಕೆ 190 ವರ್ಷ ಎಂದು ಗಿನ್ನೆಸ್ ವಿಶ್ವ ದಾಖಲೆಯವರು ಘೋಷಿಸಿದಂದಿನಿಂದ ಜೊನಾಥನ್ ಎಂಬ ಆಲ್ಡಬ್ರಾ ದೈತ್ಯ ಆಮೆ, ಟುಯಿ ಮಲಿಲಳ ದಾಖಲೆಯನ್ನು ಮುರಿದು ಮುಂದೆಧಾವಿಸುತ್ತಿದೆ. 1832ರಲ್ಲಿ, (ವಿಕ್ಟೋರಿಯಾ ರಾಣಿಯ ಕಿರೀಟಧಾರಣೆಗೆ ಮುನ್ನ) ಜನಿಸಿದ್ದ ಜೊನಾಥನ್ ಈಗ ಕುರುಡ, ಆಘ್ರಾಣಿಸುವ ಶಕ್ತಿ ಇಲ್ಲದವ. ದಕ್ಷಿಣ ಅಟ್ಲಾಂಟಿಕ್ ಸಾಗರದ ಸೈಂಟ್ ಹೆಲೆನ್ ದ್ವೀಪವಾಸಿ ಜೊನಾಥನ್ ಈಗಲೂ ಮೇಯಬಲ್ಲ, ತನ್ನ ಸಂಗಾತಿಯನ್ನು ಕೂಡಬಲ್ಲ ಸುಖಜೀವಿ.

ಹಾಗೆಂದು ಸೋಮಾರಿಗಳು ದೀರ್ಘಾಯುಷ್ಯಿಗಳು ಎಂದು ಅರ್ಥವಲ್ಲ. ನೆನಪಿಡಿ, ‘ನಿಮ್ಮನ್ನು ನೀವೇ ನಿವೃತ್ತಿಗೆ ತಳ್ಳಬೇಡಿ, ನಿಮಗೆ ಸಂತೃಪ್ತಿ ತರುವ ಅನ್ಯರಿಗೂ ಉಪಯುಕ್ತವೆನಿಸುವ ಯಾವುದಾದರೂ ಚಟುವಟಿಕೆಗಳಲ್ಲಿ ನಿರತರಾಗಿರಿ ಅನ್ನುವುದು ಕೂಡಾಈಕೆಗೈ ಸೂತ್ರಗಳಲ್ಲಿ ಒಂದು.

ಆಮೆಗಳ ದೀರ್ಘಾಯುಷ್ಯದ ಗುಟ್ಟು ಏನೆಂದು ವಿಸ್ಮಯ ಪಡುವ ವಿಜ್ಞಾನಿಗಳು, ನಿಧಾನ ಸೂತ್ರದ ಆಳಕ್ಕೆ ಇಳಿದರೆ ಉತ್ತಮ.

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾಗಲ್ಲ, ನಿಜವಾಗಿ, ʼಒಂದು ಆಕೃತಿಯ ಒಳಭಾಗಗಳನ್ನು, ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...
        Food for Teeth                                    If you thought millions of people in Mera Bharat( that’s Mahan) grapple with the issue of not knowing from where their next meal would come, you are all wrong-or else you are not watching much of the idiot box as much as the people calculating the TRP suppose you do! Now what is TRP? It is Television Rating Points. That’s someone somewhere is glad to know how much you weigh as a couch-potato. So when you are watching TV someone is ‘watching’ you like the BB (Big Brother).  A cute device called ‘People’s Meter’ might have been attached to your TV. Or to the one in one of your neighbors’ house. This device keeps track of what you watch and how often, how long etc. And that info is accessed by the geniuses who are ...