( ‘ತರಂಗ-ಯುಗಾದಿ ವಿಶೇಷಾಂಕ 2019’ನಲ್ಲಿ ಪ್ರಕಟವಾದ ಲೇಖನ-ಆಹ್ವಾನದ ಮೇರೆಗೆ ಬರೆದದ್ದು)
‘ಡ್ರೋನ್’ನ ಬೆನ್ನೇರಿ ಬಂತು ಕಲ್ಪನಾ ವಿಲಾಸ. . . '
ಈ ಹಿಂದೆ, ಈ ಡ್ರೋನ್ ಹೀಗಿರಲಿಲ್ಲ. ‘ನಿರಂತರವಾಗಿ ಗುಂಯ್ ಗುಡುವ ಸದ್ದು’ ಎಂಬ ಅರ್ಥದಲ್ಲಿ ( ಮಾತ್ರವಲ್ಲ, ಏಕಾಂಗಿ ಗಂಡು ಜೇನ್ನೊಣ, ಪರಾವಲಂಬಿಯಾಗಿರುವ ಸೋಮಾರಿ. . .ಇತ್ಯಾದಿ ಅರ್ಥಗಳಲ್ಲಿ ಕೂಡಾ) ಅದನ್ನು ಇಂಗ್ಲಿಷ್‍ನಲ್ಲಿ ಬಳಸಲಾಗುತ್ತಿತ್ತು. (ಆಗಸದಲ್ಲಿ ಹಾರುಡುತ್ತಾ ಲೋಹದ ಹಕ್ಕಿ ಮಾಡುವ ಮೆಲ್ಲಗಿನ ಸದ್ದು ಕೂಡಾ ಡ್ರೋನಿಂಗ್). ಅಷ್ಟೆ! ಆದರೆ, ಅದು ಇಂಥದೊಂದು ಅವತಾರ ತಾಳಿ ಕಣ್ಣೆದುರೆ. . . ಅಲ್ಲ ಕಣ್ಣ ಮೇಲೆ. . . ಹಾರಾಡುತ್ತದೆ-ಅದೂ ಈ ಪರಿಯಲ್ಲಿ ಹಾರಾಡುತ್ತದೆ- ಎಂದು ಯಾರು ತಾನೆ ಊಹಿಸಿದ್ದರು? ಈ ಡ್ರೋನ್, ಕೆಲವರ ಪಾಲಿಗೆ ಹವ್ಯಾಸವಾಗಿ, ಕೆಲವರ ಪಾಲಿಗೆ ಉದ್ಯಮವಾಗಿ, (ಅದರ ತಯಾರಿಯನ್ನು ಕಲಿಸುವ ವೀಡಿಯೋವನ್ನು ಯುಟ್ಯೂಬ್‍ನಲ್ಲಿ ಅಪ್ ಲೋಡ್ ಮಾಡಿ ಚೆನ್ನಾಗಿ ಖಮಾಯಿಸುವ ‘ಡ್ರೋಣಾಚರ್ಯರು’ ಕೂಡಾ ಇದ್ದಾರೆ!) ಯುದ್ಧದಲ್ಲಿ, ಶಾಂತಿಯಲ್ಲಿ, ಬಟವಾಡೆಯಲ್ಲಿ, ಕೃಷಿಯಲ್ಲಿ, ‘ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲ?’ ಎಂದು ಸವಾಲು ಹಾಕಿ ಬೆರಗಾಗಿಸುವಷ್ಟು ವ್ಯಾಪಕವಾದದ್ದು ಮಾತ್ರ ಈ ದಶಕದ ಒಂದು ವಿಸ್ಮಯ!
ಅಂದ ಹಾಗೆ ಡ್ರೋನ್‍ನ ನಿಜನಾಮಧೇಯ ಯು ಎ ವಿ (Unmanned Aerial Vehicle). ‘ಮಾವಾವಾ’ (ಮಾನವರಹಿತ ವಾಯು ವಾಹನ). (ಮೊಬೈಲ್ ಅಲ್ಲ, ಸೆಲ್ ಫೋನ್ ಎಂದು ತಿದ್ದುವವರ ನೆನಪಾಯಿತೆ?) ಇದರಲ್ಲಿ ಪೈಲಟ್ ಇರುವುದಿಲ್ಲ. ಹಾಗೆಂದು ಇಲ್ಲವೇ ಇಲ್ಲ ಅನ್ನುವ ಹಾಗೂ ಇಲ್ಲ! ಅದರ ಮೇಲಿರುವುದಿಲ್ಲ ಅಷ್ಟೆ! ಏಕೆಂದರೆ, ನೆಲದಲ್ಲಿ ಇದ್ದುಕೊಂಡು ರಿಮೋಟ್ ಮೂಲಕ ಅದನ್ನು ಯಾರು ನಿಯಂತ್ರಿಸುತ್ತಾರೋ ಅವನೇ/ಳೇ ಅದರ ಪೈಲಟ್!
ಮೊದಮೊದಲು ಯುದ್ಧದಲ್ಲಿ ಪೈಲಟ್‍ಗಳನ್ನು ಕಳೆದುಕೊಳ್ಳುವುದನ್ನು ತಡೆಯಲು ಅಮೆರಿಕಾ ಬಳಕೆಗೆ ತಂದ ಈ ಡ್ರೋನ್, ಅದರ ಆದ್ಯ ಪ್ರವರ್ತಕರ ಕಲ್ಪನೆಗೂ ಮೀರಿ ಇಂದು ಹಲವು ರಂಗಗಳಲ್ಲಿ ಬಳಕೆಯಾಗುತ್ತಿದೆ, ಮುಂದೆ ಬಳಕೆಯಾಗಲಿದೆ. ಅವು ಮೊದಲು ಪುಟ್ಟ ವಿಮಾನಗಳ ರೂಪಲ್ಲಿ ಹಾರಾಡುತ್ತಿದ್ದರೆ, ಇಂದು ದೈತ್ಯ ಹಾರಾಡುವ ಜೇಡನ ಹಾಗೆ ನಾಲ್ಕು ಕಾಲುಗಳಿಗೆ ಚಕ್ರ ಕಟ್ಟಿಸಿಕೊಂಡು ಹಾರಾಡುತ್ತಿವೆ.
ಮುಂದೊಂದು ದಿನ, ನೀವು ನಿಮ್ಮಷ್ಟಕ್ಕೇ ಬೆಳಗಿನ ವಾಕಿಂಗ್ ಮಾಡುತ್ತಿರು ವಾಗ ನಿಮ್ಮ ತಲೆಯ ಮೇಲೆ ಅದೇನೋ ಬಿಸಿ ಬಿಸಿ ಬಿದ್ದಂತಾಗಿ, ನೀವು ಅಸಹ್ಯ ಪಡುತ್ತಿದ್ದಂತೆ ಅದು ಬಾಯಿ ತಲುಪಿದಾಗ ರುಚಿಕರ ಸಾಂಬಾರ್ ಎಂದು ಅರಿವಾದಾಗ ಸ್ವಲ್ಪ ಸಮಾಧನವೆಸೀತು! ನಡೆದದ್ದೇನೆಂದರೆ ಯಾವನೋ ಒಬ್ಬ ಇಡ್ಲಿ ಸಾಂಬಾರನ್ನು ಡ್ರೋನ್ ಮೂಲಕ ಆರ್ಡರ್ ಮಾಡಿದ್ದಾನೆ. ಹೋಟೆಲ್ ಅವಸರದಿಂದ, ಸಾಂಬಾರನ್ನು ಸರಿಯಾಗಿ ಕಟ್ಟದೆ, ಎಲ್ಲವನ್ನೂ ಡ್ರೋನ್ ಮೂಲಕ ಅವನ ವಿಳಾಸಕ್ಕೆ ರವಾನಿಸಿದೆ! ಅಮಾಯಕ ಡ್ರೋನ್ ತನ್ನ ಕರ್ತವ್ಯ ನಿರ್ವಹಿಸಲು ನಿಮ್ಮ ತಲೆ ಮೇಲೆ ಹಾರಾಡಿದೆ. ಆಗ ಸೋರಿಕೆಯಾದ ಸಾಂಬಾರ್ ಅದು!
ಸದ್ಯ ಆ ಡ್ರೋನ್ ನಿಮ್ಮ ತಲೆ ಮೇಲೆ ಬೀಳಲಿಲ್ಲವಲ್ಲಾ ಎಂದು ನೀವು ಸಮಾಧಾನಪಟ್ಟುಕೊಳ್ಳಬೇಕಷ್ಟೆ. ಏಕೆಂದರೆ, 2030ನೆ ಇಸವಿಯಲ್ಲಿ ಭಾರತದ ಇಂದಿನ ಜನಸಂಖ್ಯೆಯಷ್ಟು ಡ್ರೋನ್‍ಗಳು ವಿಶ್ವದೆಲ್ಲೆಡೆ ಹಾರಾಡುತ್ತಿರುತ್ತವೆ ಎಂದು ಅಂದಾಜಿಸಲಾಗಿದೆ. ಆಗ ವಾಹನ ದಟ್ಟಣೆಯ ಸಮಸ್ಯೆ ‘ಇರುವುದಿಲ’್ಲ ! ವಾಹನ ದಟ್ಟಣೆ ನೆತ್ತಿಯ ಮೇಲೆಯೇ ತೂಗುತ್ತಿರುವಾಗ, ನೆಲದ ವಾಹನ ದಟ್ಟಣೆ ಒಂದು ಸಮಸ್ಯೆ ಅನಿಸಲಿಕ್ಕಿಲ್ಲ!
ವಾಕಿಂಗ್ ಮುಗಿಸಿ ಮನೆ ತಲುಪಿದವರ ಮನಸ್ಸು ಬಾಗಿಲ ಬಳಿ ಬಿದ್ದುಕೊಂಡು ತಮಗಾಗಿ ಕಾಯುತ್ತಿರುವ ದಿನಪತ್ರಿಕೆ ಕಂಡಾಗ ಪ್ರಫುಲ್ಲವಾಗದಿರದು. ಅದು ಕೂಡಾ ಡ್ರೋನ್ ಹಾಕಿ ಹೋದದ್ದು. ‘ಹಾವ್ ಅ ನೈಸ್ ಡೇ. . . ನಮಸ್ಕಾರ’ ಎಂಬ ಅದರ ಸುಮಧುರ ಕಂಠದ ಕುಶಲೋಪರಿ ಮಾತ್ರ ಮಿಸ್ ಆಯಿತು ಎಂದು ನೀವು ಬೇಸರಪಡುವಿರಿ. ದಾರಿಯಲ್ಲಿ ಕೊಳ್ಳಲು ಮರೆತುಹೋದ ಅತ್ಯಗತ್ಯ ಔಷಧವನ್ನು ಕೂಡಾ ಅಪರ ವೇಳೆಯಲ್ಲಿ ಮನೆಗೆ ತಲುಪಿಸಬಲ್ಲುದು ಈ ಆಪತ್ಬಾಂಧವ ಡ್ರೋನ್!
ಈ ರೀತಿ ಎಲ್ಲವನ್ನೂ ಮನೆಮನೆಗೆ ತಲುಪಿಸುವ ವಿಷಯದಲ್ಲಿ, ದಿಗ್ಗಜರುಗಳಾದ ವಾಲ್ ಮಾರ್ಟ್ ಹಾಗೂ ಅಮೆಜಾóನ್ ನಡುವೆ ಹಣಾಹಣಿ ಈಗಾಗಲೇ ಶುರುವಾಗಿದೆಯಂತೆ! ಅದೇನೇ ಇದ್ದರೂ ಇವರ ಜಗಳ ಇವರೇ ಇಟ್ಟುಕೊಳ್ಳಲಿ. ಇವರ ಮೇಲೆ ಇರುವ ನಿಷ್ಠೆಯಿಂದ, ‘ಬುದ್ಧಿವಂತ’ ಡ್ರೋನ್‍ಗಳು ಆಗಸದಲ್ಲಿ ಕಚ್ಚಾಟ ಶುರು ಮಾಡಿದರೆ ಗತಿಯೇನು? ಹಾಗಾದಲ್ಲಿ, ನಡೆಯುವಾಗಲೂ ಹೆಲ್ಮೆಟ್ ಧರಿಸುವುದು ಅನಿವಾರ್ಯವಾದೀತು!
ಆದರೆ ಈ ಕಂಪನಿಗಳು, ನೇರವಾಗಿ ಡ್ರೋನ್‍ಗಳನ್ನು ದಾಸ್ತಾನು ಮಳಿಗೆಯಿಂದಲೇ ಹಾರಿಸುವುದಿಲ್ಲ. ಮೊದಲು 500-1000 ಅಡಿಗಳ ಎತ್ತರದಲ್ಲಿ ಒಂದು ಬ್ಲಿಂಪ್ (ವಿಮಾನದಂತೆ ಹಾರಬಲ್ಲ ಭಾರಿ ಗಾತ್ರದ ಬಲೂನ್) ನ್ನು ಹಾರಲು ಬಿಡುವುದು. ಮನೆಮನೆಗೆ ಸಾಮಾನು ತಲುಪಿಸುವುದು, ಅದರಿಂದ ಹೊರಡುವ ಮರಿ ಡ್ರೋನ್‍ಗಳ ಕೆಲಸ.
ಆಂಬುಲೆನ್ಸ್ ಒಂದು ಸೈರನ್ ಮಾಡುತ್ತಾ ಶರವೇಗದಲ್ಲಿ ಸಾಗುವಾಗ, ಅದರ ಮುಂದೆ ಕೆಲವು ಮೀಟರ್‍ಗಳ ಅಂತರದಲ್ಲಿ ಡ್ರೋನ್ ಒಂದು ತಾನು ಕೂಡಾ ಸೈರನ್ ಮಾಡುತ್ತಾ ಸಾಗಿದರೆ ಹೇಗಿರುತ್ತದೆ? ಇದರಿಂದ ಆಂಬುಲೆನ್ಸ್ ಬರುತ್ತಿರುವ ಸೂಚನೆ ದೊರೆತ ಇತರ ವಾಹನಗಳ ಚಾಲಕರು ಹೆಚ್ಚು ಚುರುಕಾಗುತ್ತಾರೆ. ಬದಿಗೆ ಸರಿಯುತ್ತಾರೆ. ಮಾತ್ರವಲ್ಲ, ವಾಹನ ಮತ್ತು ಇನ್ನೇನನ್ನೆಲ್ಲಾ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕ್ ಮಾಡಿದವರು, ಅವನ್ನು ಪಕ್ಕಕ್ಕೆ ಸರಿಸಿ, ಅದಕ್ಕೆ ದಾರಿ ಮಾಡಿಕೊಡುತ್ತಾರೆ. ಹಲವರ ಪ್ರಾಣ ಉಳಿಯುತ್ತದೆ. ಆ ಡ್ರೋನ್ ತನ್ನ ಎದುರಿಗಿರುವ ರಸ್ತೆಯ ಅವಸ್ಥೆಯ ಚಿತ್ರಣವನ್ನು ಆಂಬುಲೆನ್ಸ್ ಚಾಲಕನಿಗೆ ನೀಡುವುದು, ಅತ್ಯಂತ ಸಮೀಪದ ಆಸ್ಪತ್ರೆಯ ಕಡೆಗೆ ದಾರಿತೋರುವುದು ಇತ್ಯಾದಿ ಕೆಲಸವನ್ನೂ ಮಾಡುತ್ತಿರುತ್ತದೆ. ಅಂಗಾಂಗಳ ಕಸಿ ಮಾಡುವ ಸಂದರ್ಭದಲ್ಲೂ ಕೂಡಾ, ಅವುಗಳನ್ನು ದಾನಿಯ ದೇಹದಿಂದ ಅಗತ್ಯವಿರುವ ದೇಹಕ್ಕೆ ತುರ್ತಾಗಿ ರವಾನಿಸುವಾಗ ಡ್ರೋನ್‍ಗಳನ್ನು ಈ ರೀತಿ ಬಳಸಬಹುದು. ಇದರಿಂದ ಆಂಬುಲೆನ್ಸ್‍ಗಳಿಗೆ ಯಮನನ್ನು ಅಕ್ಷರಶಃ ಹಿಂದಿಕ್ಕುವುದು ಸಾಧ್ಯವಾಗಬಹುದು! ( ಇವನ್ನೆಲ್ಲಾ ಸ್ವತ: ಡ್ರೋನ್ ಮಾಡಬಹುದು. ಆದರೆ ಅಷ್ಟೊಂದು ಸಿಬ್ಬಂದಿಯ, ಸಲಕರಣೆಗಳ ಭಾರ ಹೊರುವುದು ಸದ್ಯ ದುಸ್ಸಾಧ್ಯ)
ಮನುಷ್ಯ ಪ್ರಯಾಣಿಸುವಂತಹಾ ‘ಡ್ರೋನ್’ ಗಳು ಕೂಡಾ ಬರಲಿವೆ. ಹಾಗಿದ್ದಲ್ಲಿ ಅದು ಡ್ರೋನ್ ಹೇಗಾಗುತ್ತದೆ ಅನ್ನುವಿರಾ? ಕ್ಷಮಿಸಿ! ಡ್ರೋನ್ ನಿರ್ವಚನದಲ್ಲಿ ಮಾನವರಹಿತ ಅನ್ನುವುದು ಪೈಲಟ್ ರಹಿತ ಅನ್ನುವ ಅರ್ಥದಲ್ಲಿ ಮಾರಾಯರೇ! ಪ್ರಯಾಣಿಕ ರಹಿತ ಎಂಬ ಅರ್ಥದಲ್ಲಿ ಅಲ್ಲವಲ್ಲ?
ಚೈನಾದ ಎಹಾಂಗ್ ಕಾರ್ಪ್ ಇಂಥಹಾ ಹಾರಾಡುವ ಟ್ಯಾಕ್ಸಿಗಳ ಪರೀಕ್ಷಾರ್ಥ ಹಾರಾಟವನ್ನು ಈಗಾಗಲೇ 1000 ಬಾರಿ ಯಶಸ್ವಿಯಾಗಿ ನಡೆಸಿದೆಯಂತೆ. ವೊಲೋಕಾಪ್ಟರ್ ಈ ಸಾಹಸಕ್ಕೆ ಕೈ ಹಾಕಿದ ಇನ್ನೊಂದು ಕಂಪನಿ. ಇದನ್ನು ಆಗಸದಲ್ಲಿ ಪೂರ್ತಿ ಪ್ರಯಾಣಕ್ಕೆ (ಸದ್ಯ) ಬಳಸದಿದ್ದರೂ, ವಿಮಾನ ನಿಲ್ದಾಣದ ವರೆಗಿನ ಪ್ರಯಾಣಕ್ಕೆ ಬಳಸುವ ಸಾಧ್ಯತೆಗಳಿವೆ. ಇದರಲ್ಲೂ ಒಬ್ಬರಕಿಂತ ಹೆಚ್ಚು ಪ್ರಯಾಣಿಕರಿಗೆ ಅವಕಾಶವಿಲ್ಲ. ಬೆಂಗಳೂರು ಏರ್ಪೋರ್ಟ್‍ನಿಂದ, ಒಂದು ಗಂಟೆ ವಿಮಾನಯಾನ ಮಾಡಿ ಗುರಿ ತಲುಪಲು, 3-4 ಗಂಟೆ ಮೊದಲೇ ಹೊರಡುವವರಿಗೆ, ಇದರ ಮರ್ಮ ಅರ್ಥವಾದೀತು!
ಇನ್ನು ಮನರಂಜನೆಯನ್ನು ಬಾಕಿ ಮಾಡುವುದುಂಟೆ? ಮಾಧ್ಯಮ ಜಗತ್ತಿನ ದಿಗ್ಗಜ ‘ಸ್ಕೈ’ ಒಂದು ಮಿಲಿಯ ಡಾಲರ್ ಹೂಡಿಕೆ ಮಾಡಿರುವ ‘ಡ್ರೋನ್ ರೇಸಿಂಗ್ ಲೀಗ್’ ಈಗಾಗಲೇ ಅಸ್ಥಿತ್ವದಲ್ಲಿದೆ. ಇದು ಡ್ರೋನ್‍ಗಳ ನಡುವೆ ರೇಸಿಂಗ್ ನಡೆಸುತ್ತದೆ ಮತ್ತು ಅದರ ಪ್ರಸಾರದ ಹಕ್ಕು ಪಡೆದಿರುತ್ತದೆ. ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟೂ ವ್ಯಾಪಕವಾಗಲಿದೆ. ಮುಂದೆ ಬೆಟ್ಟಿಂಗ್ ಪಿಡುಗು ಕೂಡಾ ಡ್ರೋನ್‍ಗಳನ್ನು ಕಾಡಬಹುದು. ಮುಂದುವರಿಯುವುದು ತಂತ್ರಜ್ಞಾನ, ಮನುಷ್ಯನಲ್ಲವಲ್ಲ!
ಕೃಷಿಯಲ್ಲಂತೂ ಹಸಿರುಹೊನ್ನಿನ ಹರಿಕಾರ ಆಗಲಿದೆ ಈ ಭೃಂಗ!
ಎಕರೆಗಟ್ಟಲೆ ಹೊಲ ಅಥವಾ ತೋಟದಲ್ಲಿ ಬೆಳೆಗೆ ಎಲ್ಲಿ ರೋಗ ತಗಲಿದೆ, ಎಲ್ಲಿ ನೀರು ಗೊಬ್ಬರ ಸಾಕಾಗದೆ ಬಾಡಿದೆ ಎಂದು ತಿಳಿಯುವುದು ಸುಲಭವಲ್ಲ. ಅದನ್ನು ರೈತನಿಗೆ ಡ್ರೋನ್ ತಿಳಿಸುತ್ತದೆ ಮತ್ತು ಕ್ರಿಮಿನಾಶಕ ಸಿಂಪಡಿಸುವುದನ್ನು ಕೂಡಾ ಅದುವೇ ಮಾಡಲಿದೆ. ಮಣ್ಣು ಪರೀಕ್ಷೆಯಲ್ಲೂ ನೆರವಾಗಲಿದೆ. ಇದನ್ನು ಊಹಿಸುವುದು ಸುಲಭ. ವಿಶೇಷವಿರುವುದು ಅದು ದನ ಕಾಯುವ, ಕುರಿ ಕಾಯುವ ಕೆಲಸಗಳನ್ನು ಕೂಡಾ ಮಾಡಲಿದೆ ಎಂಬುದರಲ್ಲಿ. ಮಾತ್ರವಲ್ಲ ದುಂಬಿಗಳ ಗಾತ್ರಗಳ ಡ್ರೋನ್‍ಗಳು ಅವತರಿಸಿ ಪರಾಗಸ್ಪರ್ಶದ ಕೆಲಸವನ್ನೂ ಮಾಡಲಿವೆಯಂತೆ. ಈ ಕುರಿತು ಜಪಾನ್‍ನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಹೇಗೂ, ಜೇನು ನೊಣಗಳ ಸಂಖ್ಯೆ ಕಡಿಯಾಗುತ್ತಿದೆ. ಇನ್ನು ಮುಂದೆ ‘ಡ್ರೋನ್ನೊಣ’ಗಳು ತಯಾರಿಸಿದ ಸಹಜ ಜೇನನ್ನು ಸವಿಯುವುದು ನಮ್ಮ ಹಣೆಯಲ್ಲಿ ಬರೆದಿದ್ದರೆ ತಡೆಯಲು ಸಾಧ್ಯವೆ? (ಹಾಗೇನೇ, ವಿಷಪೂರಿತ ಅಥವಾ ಮಾರಕ ರೋಗವಾಹಕ, ಸೊಳ್ಳೆಗಳ ಗಾತ್ರದ ಡ್ರೋನ್‍ಗಳನ್ನು ವೈರಿಗಳು ನಮ್ಮ ಮೇಲೆ ಛೂ ಬಿಟ್ಟರೆ? ಊಹಿಸಿದರೇ, ಮೈ ‘ಜುಂ’ ಅನ್ನುತ್ತದೆ. ಸದ್ಯ ಸಾಧಕಗಳ ಕುರಿತು ತಿಳಿದು, ಆಶಾವಾದಿಗಳಾಗಿರೋಣ!)
ಇಲ್ಲಿವರೆಗೆ 59 ಬಾರಿ ಪ್ರಾಣಾಪಾಯದ ಸನ್ನಿವೇಶಗಳಲ್ಲಿದ್ದವರ ಜೀವರಕ್ಷಣೆಗೆ ಡ್ರೋನ್‍ಗಳು ನೆರವಾಗಿವೆ. ಈಗ ಜೀವರಕ್ಷಣೆಗಾಗಿಯೇ ಸುಧಾರಿತ ಡ್ರೋನ್‍ಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗುತ್ತಿದೆ. ಚಾರಣಕ್ಕೆ ಹೊರಟು ದಾರಿ ತಪ್ಪಿ ಪರದಾಡುವವವರ, ದುರ್ಗಮವಾದ ಕಣಿವೆ, ಕೊರಕಲುಗಳಲ್ಲಿ ಸಿಲುಕಿಕೊಂಡವರ, ಹಡಗು ಮುಳುಗಿ ಸಾಗರದಲ್ಲಿ ಜೀವ ಕೈಯಲ್ಲಿ ಹಿಡಿದು ತೊಯ್ದಾಡುವವರ ಪಾಲಿಗೆ ಇವು ವರದಾನವೆನಿಸಲಿವೆ. ಮುಂಬರುವ ಡ್ರೋನ್‍ಗಳು ಹೆಚ್ಚು ಭಾರ ಹೊರಬಲ್ಲವು ಮತ್ತು ಹೆಚ್ಚು ಸಾಮಥ್ರ್ಯದಿಂದ ಹೆಚ್ಚು ಸಮಯ ಹಾರಾಡಬಲ್ಲವು. ಅರ್ಥಾತ್, ನೆರೆ ಪೀಡಿತರು ಮುಂತಾದವರಿಗೆ ತಳದವರೆಗೆ ಹೋಗಿ ಆಹಾರ, ನೀರು ಮತ್ತು ಔಷದಿ ಪೂರೈಸಬಲ್ಲವು. ಮನೆಗಳಲ್ಲೂ ರಕ್ಷಣೆ, ಭದ್ರತೆಯ ಕೆಲಸಗಳನ್ನು ಡ್ರೋನ್ ಮಾಡಲಿದೆ. ನಿದ್ದೆ ತೂಗದೆ!
ಹೋಟೆಲ್‍ಗಳಲ್ಲಿ ಮಾಣಿಗಳ ಬದಲು ‘ಡ್ರೋಣಿ’ಗಳು ತಿಂಡಿ ತೀರ್ಥ ಸರಬರಾಜು ಮಾಡಬಹುದು. ಸಿಂಗಾಪುರದ ಹೋಟೆಲ್ ಒಂದು ಇಂಥಾ ಸಾಹಸಕ್ಕೆ ಕೈಹಾಕಲಿದೆಯಂತೆ. ಟಿಪ್ಸ್ ಉಳಿತಾಯವಾಯಿತು ಅಂದುಕೊಳ್ಳಬೇಡಿ! 3ಡಿ ಪ್ರಿಂಟರ್ ಅಳವಡಿಸಲಾದ ಡ್ರೋನ್‍ಗಳು ಕಟ್ಟಡ ನಿರ್ಮಾಣದಲ್ಲಿ ನೆರವಾಗಲಿವೆ. ನಕ್ಷೆಗಳನ್ನು ಕರಾರುವಕ್ಕಾಗಿ ತಯಾರಿಸುವಲ್ಲೂ ಕೂಡಾ ಡ್ರೋನ್‍ಗಳು ನೆರವಾಗಲಿವೆ. ದೋಣಿಯಿಂದ ಹಾರಿ ನೀರಲ್ಲಿ ಮುಳುಗಿ ಮೇಲೇಳಬಲ್ಲ ಡ್ರೋನ್‍ಗಳೂ ಬರಲಿವೆ. ಕ್ರಾಕನ್ಸ್ ಇದರ ಸಂಕ್ಷಿಪ್ತ ಹೆಸರು!
ಹೀಗೆ ಹವ್ಯಾಸವೆಂದೋ, ಛಾಯಚಿತ್ರಣಕ್ಕೆಂದೋ ಯಾರ್ಯಾರೋ ಹಾರಿಬಿಡುವ ಬಿಡಾಡಿ ಡ್ರೋನ್‍ಗಳಿಂದ ಕಿರಿಕಿರಿಯಾಗದೆ? ಅಪಾಯವಿಲ್ಲವೇ? ಎಂದು ನಿಮಗನ್ನಿಸಿದರೆ ನಿಮಗೆ ತಿಳಿದಿರಲಿ- ಡ್ರೋನ್‍ಗಳನ್ನು ನಿಯಂತ್ರಿಸುವ ನಿಯಮಗಳು ಈಗಾಗಲೇ ಜಾರಿಗೊಂಡಿವೆ ಮತ್ತು ಇಂಥಹಾ ಎಲ್ಲಾ ನಿಯಮಗಳಿಗೆ ಬಂದೊದಗುವ ದುರ್ಗತಿ ಈ ನಿಯಮಗಳಿಗೂ ಬಂದೊದಗಿದೆ. ಅಂದರೆ ಇದರ ಪಾಲನೆಗಿಂತ ಉಲ್ಲಂಘನೆಯಲ್ಲೇ ಈ ನಿಯಮಗಳು ‘ಜಾರಿಯಲ್ಲಿವೆ’ ಅನಿಸುತ್ತದೆ.
ಹೀಗಾಗಿಯೇ ಇರಬೇಕು-ಫ್ರಾನ್ಸ್ ನ ಕಂಪನಿಯೊಂದು ‘ಡ್ರೋನನ್ನು, ಡ್ರೋನ್‍ನಿಂದಲೇ ತೆಗೆಯಬೇಕು’ ಎಂದು ಪುಟಗೋಸಿ ಡ್ರೋನ್‍ಗಳಿಗೆ ಬಲೆಬೀಸಿ ಅವುಗಳನ್ನು ನಿವಾರಿಸುವ ದೊಡ್ಡದೊಂದು ಡ್ರೋನ್ ತಯಾರಿಸಿದೆ. ಇನ್ನು ಮುಂದೆ ಇಂಥಹಾ ಡ್ರೋನ್‍ನ ಬೇಟೆಯನ್ನು ಎಲ್ಲೆಡೆ ಕಾಣಬಹುದು!
ಹಾಲಿವುಡ್‍ನ ‘ಟ್ರಾನ್ಸ್ ಫಾರ್ಮರ್ಸ್’ ಚಿತ್ರದಲ್ಲಿ ಕಾರು ಯಂತ್ರಮಾನವನಾಗಿ ಪುನ: ಕಾರ್ ಆಗಿ ಬದಲಾಗುವುದನ್ನು ನೀವು ನೋಡಿರಬಹುದು. ನ್ಯಾನೋ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಡ್ರೋನ್‍ನಲ್ಲಿ ನಡೆವ ಸಂಶೋಧನೆಗಳಿಂದ ಮುಂದೊಂದು ದಿನ ರೋಬೋಟ್, ಡ್ರೋನ್‍ಆಗಿ ಹಾರಿ ಇಳಿದು ರೋಬೋಟ್ ಆಗಿ ಬದಲಾಗಿ ನಮಗೆ ಬೇಕಾದ ಸಾಮಾನು ಸರಂಜಾಮಿನ ಫೊಟೋವನ್ನು ಅಂಗಡಿಯಲ್ಲಿ ಸ್ಕ್ಯಾನ್ ಮಾಡಿ ತಲುಪಿಸಿ, ಖಚಿತಪಡಿಸಿಕೊಂಡು, ಮನೆಗೆ ತಂದು ಕೊಟ್ಟರೆ ಆಶ್ಚರ್ಯಪಡಬೇಕಾಗಿಲ್ಲ. ಡ್ರೋನ್‍ಗಳ ಗಣವೊಂದನ್ನು ತೇಲಿಸಿ ವಿಮಾನವಾಗಿ ಹಾರಿಸುವುದರಲ್ಲಿ ಅಮೆರಿಕಾದ ನಾಸ ಈಗಾಗಲೇ ಯಶಸ್ವಿಯಾಗಿದೆ. ಅಷ್ಟೇಕೆ ಈ ರೀತಿ ‘ರೋಬೋ-ಡ್ರೋನ್’ಗಳನ್ನು ಬಳಸಿ ಸರ್ಜಿಕಲ್ ಸ್ಟ್ರೈಕ್‍ಗಳನ್ನು ಕೂಡಾ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಬಹುದು.
ಡ್ರೋನ್‍ಗಳು ಅಪಾಯಕಾರಿಯಾಗಿಯೂ ಬದಲಾಗಲಿವೆ. ಸಾಧಕಗಳ ಜೊತೆ ಬಾಧಕಗಳೂ ಇವೆ! ಭಯೋದ್ಪಾಕರ ಕೈಯಲ್ಲಿ, ಮಾಫಿಯಾದ ಕೈಯಲ್ಲಿ ಅಪಾಯಕಾರಿ ಆಯುಧವಾಗಿ ಡ್ರೋನ್‍ಗಳು ಸೇರಿಕೊಂಡರೆ ಪರಿಸ್ಥಿತಿ ಏನಾಗಬೇಡ? ಯೆಮೆನ್ ನಲ್ಲಿ ಇದೇ ವರ್ಷ ಜನವರಿಯಲ್ಲಿ ಭಯೋತ್ಪಾದಕರು ನಡೆಸಿದ ಡ್ರೋನ್ ಧಾಳಿಗೆ, ಪರೇಡ್ ಮಾಡುತ್ತಿದ್ದ ಆರು ಯೋಧರು ಬಲಿಯಾದರು ಎಂಬುದು ಚಿಂತೆಗೀಡು ಮಾಡುವ ವಾಸ್ತವ.
ಡ್ರೋನ್ ತನ್ನ ಅವತಾರವನ್ನು ದಿನೇ ದಿನೇ ಬದಲಿಸುತ್ತಲಿದೆ. ಇಲ್ಲಿ ಊಹಿಸಿದ್ದೆಲ್ಲವೂ ನಿಜ ರೂಪ ತಾಳದಿರಬಹುದು. ಊಹಿಸದ್ದು ಕೂಡಾ ನಮ್ಮ ಜೀವನಶೈಲಿಯ ಅವಿಭಾಜ್ಯ ಅಂಗವಾಗಿಬಿಡಬಹುದು! ಆದರೆ ಒಂದಂತೂ ಸತ್ಯ. ಈ ಡ್ರೋನ್, ಪೇಜರ್‍ನಂತೆ, ಕ್ಯಾಸೆಟ್/ಟೇಪ್ ರೆಕಾರ್ಡರ್‍ನಂತೆ ಇತಿಹಾಸ ಸೇರುವ ಸಾಧ್ಯತೆ ಮಾತ್ರ ತೀರಾ ಕಡಿಮೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ನಷ್ಟು ಮಾರುಕಟ್ಟೆ ಹೊಂದಲಿರುವ ಡ್ರೋನ್, ಹಲವು ಉದ್ಯಮಿಗಳು ವ್ಯಾಪಾರಿಗಳ ಭಾಗ್ಯದ ಬಾಗಿಲು ತೆರೆಯುವುದರೊಂದಿಗೆ ಒಂದಿಷ್ಟು ಕಂಟಕಪ್ರಾಯವೂ ಆಗಲಿದೆ ಎನ್ನುವುದಂತೂ ಸತ್ಯ!
ಎಲ್ಲಾ ತಂತ್ರಜ್ಞಾನ ಆಧಾರಿತ ಸಲಕರಣೆಗಳು ಕಟ್ಟಿಕೊಂಡವಳ/ನ ಹಾಗೆ ನಮ್ಮನ್ನು ಸುತ್ತಿಕೊಳ್ಳುತ್ತವೆ. ದೂರವಿರಲಾರೆವೆವು! ದೂರದೆಯೂ ಇರಲಾರೆವು! ಇವುಗಳ ಸಾಲಿಗೆ ಸೇರಿ, ದಕ್ಕದ ಗಗನ ಕುಸುಮಗಳಿಗೆ ಸಂಕೇತವಾಗಿ ಮೈಗೂಡಲಿದೆ, ನಮ್ಮ ನಿಮ್ಮ ಬಾಳಿನಲ್ಲಿ ಈ ಭೃಂಗ-“ಮೈ ಹೂಂ ಡ್ರೋನ್, ಮೈ ಹೂಂ ಡ್ರೋನ್” ಎಂದು ಹಾಡುತ್ತಾ!

Comments
Post a Comment