Skip to main content

 

(ನವೆಂಬರ್ 2022  'ತುಷಾರ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ)

ದೀಪವು ನಮ್ಮದೇ, ಕೈಗಳು ನಮ್ಮವೇ. . .’

 

ಮಾತೃಭಾಷೆಯನ್ನು ಬಿಟ್ಟ ಮನುಷ್ಯ ಮನೆ ಬಿಟ್ಟ ಮಗನ ಹಾಗೆ ಸದಾ ಅತಂತ್ರನಾಗಿರುತ್ತಾನೆ”-ಕೆ ವಿ ತಿರುಮಲೇಶ್

ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಒಂದು ಮಾರ್ಕೆಟಿಂಗ್ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದೆ. ಅದರ ಮುಖ್ಯಸ್ಥ ಒಬ್ಬ ಪಕ್ಕಾ ಅಮೇರಿಕನ್. ಒಂದು ದಿನ  ತರಬೇತಿಯ ವೇಳೆ, ಬೋರ್ಡ್ ಮೇಲೆಫೀಲಿಂಗ್ಎಂಬ ಪದವನ್ನು ಬರೆಯಬೇಕಾದ ಸಂದರ್ಭ ಅವನಿಗೆ ಒದಗಿ ಬಂತು. ಸದಾನಾನು ಹೆಚ್ಚು ಓದಿದವನಲ್ಲ, ನಾನೊಬ್ಬ ಕಾಲೆಜ್ ಡ್ರಾಪ್‍ಔಟ್. ಆದರೆ ಮಾತನಾಡಬಲ್ಲೆ. ಮಾತೇ ನನ್ನ ಬಂಡವಾಳ. ಹೀಗಾಗಿ ಮಾರಾಟದ ಕಲೆ ನನಗೆ ಒಲಿದಿದೆಎಂದು ಬಡಬಡಿಸುತ್ತಿದ್ದ ಅವನು, ನಮ್ಮ (ಮತ್ತು ಅವನ) ನಿರೀಕ್ಷೆಯಂತೆಫೀಲಿಂಗ್ಸ್ಪೆಲ್ಲಿಂಗ್‍ನ್ನು ತಪ್ಪಾಗಿ ಬರೆದ. ಅದನ್ನು ಕಂಡು ನಾವೆಲ್ಲಎಂದು ಉದ್ಗರಿಸಿದ ತಕ್ಷಣ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಸರಿಯಾದ ಸ್ಪೆಲ್ಲಿಂಗ್‍ನ್ನು ನಮ್ಮ ಬಳಿ ಕೇಳಿ ತಿಳಿದುಕೊಂಡು, ತಪ್ಪನ್ನು ತಿದ್ದಿ ಬರೆದಮೇಲೆನೀವು ಭಾರತೀಯರು ಅದು ಹೇಗೆ ಅಷ್ಟೊಂದು ಚೆನ್ನಾಗಿ, ತಪ್ಪಿಲ್ಲದೆ ಇಂಗ್ಲಿಶ್ ಮಾತನಾಡುತ್ತೀರಿ? ಇಂಗ್ಲಿಶ್‍ನಲ್ಲಿ ಬರೆಯುತ್ತೀರಿ? ನನಗೇಕೆ ಅದು ಸಾಧ್ಯವಾಗುವುದಿಲ್ಲ?’ ಎಂದು ಉದ್ಗರಿಸಿದ.

ಏಕೆಂದರೆ ಇಂಗ್ಲಿಶ್ ಅವನ ಪಾಲಿಗೆ ಮಾತೃಭಾಷೆ. ನಮ್ಮ ಪಾಲಿಗೆ ಕಲಿತ ಭಾಷೆ. ಇದನ್ನು ನಮ್ಮ ಮಾತೃಭಾಷೆ, ಕನ್ನಡಕ್ಕೆ ಅನ್ವಯಿಸಿದರೆ ಹೇಗಿರುತ್ತದೆ?   

  ರಸ ಋಷಿಯ ನಾಡಗೀತೆಯಲ್ಲಿಭಾರತ ಜನನಿಯ ತನುಜಾತೆಅನಿಸಿಕೊಂಡ ಕರ್ನಾಟಕದ ಮಾತೃಭಾಷೆಯನ್ನು ಭೀಷ್ಮ ಬಿ ಎಂ ಶ್ರೀ ಅವರುಬಾಳ್ ಕನ್ನಡ ತಾಯ್/ ಏಳ್ ಕನ್ನಡ ತಾಯ್/ ಆಳ್ ಕನ್ನಡ ತಾಯ್ಎಂದು ಹುರಿದುಂಬಿಸಿದರು. ‘ಎನಿತು ಇನಿದು ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’- ಎಂದು ಆನಂದಕಂದರು ಕೊಂಡಾಡಿದರು. ನಮಗೆಲ್ಲ ಚಿರಪರಿಚಿತವಾದ ರಾಷ್ಟ್ರಕವಿ ಗೋವಿಂದ ಪೈಗಳತಾಯೆ ಬಾರ ಮೊಗವ ತೋರಇರಬಹುದು, ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಎಂದು ಮೊದಲು ಮಾಡಿಬೊಕ್ಕಸದÀ ಕಣಜವೈ ವಿದ್ವತ್ತೆಗಳ ಕಾಡುಎಂದ ಹುಯಿಲಗೋಳ ನಾರಾಯಣರಿಂದ ಹೊಗಳಿಸಿಕೊಂಡ ಕನ್ನಡದ ಘನತೆಯಲ್ಲಿ, ಕವಿರಾಜಮಾರ್ಗದಲ್ಲಿಕಾವೇರಿಯಿಂದಮಾ ಗೋ/ದಾವರಿವರಮಿರ್ಪ ನಾಡದಾ ಕನ್ನಡದೊಳ್/ಭಾವಿಸಿದ ಜನಪದಂನಲ್ಲಿ ವಿವರಿಸಿದ ಕನ್ನಡನಾಡಿನ ವಿಸ್ತಾರದಲ್ಲಿ ಅಂತರ್ಗತವಾಗಿರುವ ಕನ್ನಡ ನುಡಿಯ ವ್ಯಾಪಕತೆಯ ಸೂಚನೆಯಲ್ಲಿ, ‘ಸುಲಿದ ಬಾಳೆಯ ಹಣ್ಣಿನಂದದಿ/ಕಳೆದ ಸಿಗುರಿನ ಕಬ್ಬಿನಂದದಿ/ಅಳೆದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ/ಲಲಿತವಹ ಕನ್ನಡ ನುಡಿಯಲಿ/. . .’ ಎಂದು ಕವಿ ಮಹಾಲಿಂಗರಂರಿಂದ ಬಣ್ಣಿಸಲ್ಪಟ್ಟ ಕನ್ನಡದ ಸರಳತೆ, ಅಂದದಲ್ಲಿ ವ್ಯಕ್ತವಾಗುವ ಕನ್ನಡದ ಸತ್ವ, ಹೂರಣಕ್ಕೆ ಬೆಲೆ ಕಟ್ಟಲಾಗದು.

ಕನ್ನಡದ ಆದಿಕವಿಯಿಂದ ಹಿಡಿದು ಕನ್ನಡದ ಕಟ್ಟಾಳುಗಳು, ಸಾಹಿತ್ಯ ಶಿರೋಮಣಿಗಳು, ಮಹನೀಯರು, ಪ್ರಾತಃಸ್ಮರಣೀಯರು ಕನ್ನಡದ ಕುರಿತು ಆಡಿದ ಅಣಿಮುತ್ತುಗಳನ್ನು ಸಂಗ್ರಹಿಸುತ್ತಾ ಹೋದರೆ ಒಂದು ಪುಸ್ತಕದಷ್ಟಾಗಬಹುದು. ನಮಗೆ ಕಂಠಪಾಠವೇ ಆಗಿರುವ ಕೆಲವು ಅಣಿಮುತ್ತುಗಳಂತೂ, ನೆನೆದಾಗಲೆಲ್ಲಾ ಎಂಥಾ ಹೆಮ್ಮೆ, ಕಿವಿಗೆ ಬಿದ್ದರೆ ಅದೆಂಥಾ ರೋಮಾಂಚನ! ಆದರೆ ಇಷ್ಟು ಸಾಕೆ? ನಮ್ಮ ಮುಂದಿರುವ ಪ್ರಶ್ನೆ ಇದು!

ಲೇಖನದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಅಮೇರಿಕನ್ ಪ್ರಜೆಗೆ, ಇಂಗ್ಲಿಶ್ ಭಾಷೆಯನ್ನು ಉಳಿಸುವ, ಬೆಳೆಸುವ ಯಾವ ದರ್ದು ಇರದು, ಅದರ ಅಗತ್ಯ ಅವನಿಗೆ ಬೀಳದು. ಅವನ ಮಾತೃಭಾಷೆಯು ತನ್ನ ತವರೂರು ಮತ್ತು ಅವನ ಮಾತೃಭೂಮಿಯ ಗಡಿ ದಾಟಿ ಹಲವು ರಾಷ್ಟ್ರಗಳಲ್ಲಿ ಇಂದು ತನ್ನ ಪಾರಮ್ಯವನ್ನು ಮೆರೆಯುತ್ತಿದೆ. ಇಂಗ್ಲಿಶಿನ, ಇಂಗ್ಲಿಶರ ಇತಿಹಾಸವೇ ಹಾಗಿದೆ. ಸಾಗರದ ಅಗಾಧತೆಗೆ ಅಧೀರರಾಗದೆ, ಅದು ಒಡ್ಡುವ ಸವಾಲುಗಳಿಗೆ ಕುಗ್ಗದೆ, ಬಗ್ಗದೆ ಅವುಗಳನ್ನು ದಾಟಿ  ಅನ್ಯ ನಾಡುಗಳಿಗೆ ಮೆಲ್ಲಮೆಲ್ಲನೆ ಲಗ್ಗೆಯಿಟ್ಟು, ತಮ್ಮ ಚಕ್ರಾಧಿಪತ್ಯವನ್ನು ಹೇರಿ ಅಲ್ಲಿ ತಮ್ಮ ಸಂಸ್ಕøತಿ, ಜೀವನ ಶೈಲಿ ಭಾಷೆ ಬೇರೂರುವಂತೆ ಮಾಡಿದವರು ಅವರು. ಒಂದು ಶಾಪದಂತೆ ಕಾಡುವ, ವರದಂತೆ ತೋರುವ ಅವರ ಇಂಗ್ಲಿಶ್ ಭಾಷೆಯೊಂದಿಗೆ ಕನ್ನಡದ ಸರಸ-ವಿರಸ ನಮ್ಮ ಬದುಕಿನ ಒಂದು ಭಾಗ.

ಕನ್ನಡ, ಕರ್ನಾಟಕ ಹಾಗಲ್ಲ ಎಂದು ನೋವಿನಿಂದಲೇ ಹೇಳಬೇಕಾಗುತ್ತದೆ. ಭೌಗೋಳಿಕವಾಗಿ ಇನ್ನು ನಾಡು ವಿಸ್ತರಿಸುವ ಸಾಧ್ಯತೆಗಳಿಲ್ಲ. ಕರ್ನಾಟಕದ ಹೊರಗೆ ಕನ್ನಡಕ್ಕೆ ಅಧಿಕೃತ ಮಾನ್ಯತೆ ಇಲ್ಲ ಅನ್ನುವುದು ಕೂಡಾ ಒಂದು (ಕಹಿ) ಸತ್ಯ.       

ಕರ್ನಾಟಕದ ಹೊರಗೆ ಇದೆಯೆಂದಾದರೆ ಅದುಅನ್ಯಾಯವಾಗಿ ಕೇರಳ ಪಾಲಾದನಮ್ಮ ಕಾಸರಗೋಡಿನಂತೆ ಕೆಲವೆಡೆ- ಈಗಲೂ ಒಂದು ಮಾಧ್ಯಮವಾಗಿ, ಅಲ್ಲಿ ಅಳಿದುಳಿದಿರುವ ಕನ್ನಡ ಶಾಲೆಗಳಲ್ಲಿ! ಹೀಗಾಗಿ ನಮ್ಮ ಕೈಯಲ್ಲಿರುವುದು (ಕಡೇ ಪಕ್ಷ )ಮೊದಲು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವುದು, ಬೆಳೆಸುವುದು, ವಿಸ್ತರಿಸುವುದು.

ಅದನ್ನು ನಾವೇ ಮಾಡದಿದ್ದರೆ ಹೇಗೆ? ಕೆಲವು ವರ್ಷಗಳ ಹಿಂದೆ ವಿಶ್ವದ ಭಾಷೆಗಳ ಭವಿಷ್ಯದ ಕುರಿತು ನಡೆಸಲಾಗಿರುವ ಸಮೀಕ್ಷೆ, ಅಧ್ಯಯನದ ಫಲಿತಾಂಶ ನಮ್ಮನ್ನು ಧೃತಿಗೆಡಿಸುವಂತಿದೆ. ಅದೆಷ್ಟೋ ಭಾಷೆಗಳು ಮುಂದೊಂದು ದಿನ ಹೇಳ ಹೆಸರಿಲ್ಲದಂತಾಗುತ್ತವೆ ಅನ್ನುವ ಭವಿಷ್ಯವಾಣಿ ಕೂಡಾ ನಮ್ಮನ್ನು ಸಮರ ಸನ್ನದ್ಧರಾಗಿಸದಿದ್ದರೆ-ಇನ್ಯಾವುದೂ ಹಾಗೆ ಮಾಡದು! ಪಟ್ಟಿಯಲ್ಲಿ ಕನ್ನಡ ಸೇರಿಲ್ಲ ಎಂದು ಕೈ ಕಟ್ಟಿ ಕೂರುವುದಲ್ಲ. ಅವರ ಸಮೀಕ್ಷೆಯ ಮಾನದಂಡಗಳಲ್ಲಿ, ವ್ಯಾಪ್ತಿಯಲ್ಲಿ ಕನ್ನಡವು ಒಳಗೊಂಡಿಲ್ಲವಿದ್ದಿರಬಹುದು. ಅಷ್ಟಕ್ಕೇ, ಕನ್ನಡಕ್ಕೆ ಕುತ್ತು ಇಲ್ಲ, ಕನ್ನಡಕ್ಕೆ ಸಾವಿಲ್ಲ ಎಂದು ಕೈಕಟ್ಟಿ ಕೂರುವುದಲ್ಲ.

ಭಾಷೆಯ ಶುದ್ಧತೆಯನ್ನು ಕಾಪಾಡಲು ಪ್ರಯತ್ನಿಸುವವರನ್ನುಭಾಷೆ ನಿಂತ ನೀರಲ್ಲಎಂದು ಎಚ್ಚರಿಸುವವರಿದ್ದಾರೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಭಾಷೆ ಗುಪ್ತಗಾಮಿನಿ, ಮಂದಗಾಮಿನಿ. ಮಹಾನದಿಗೆ ಅಲ್ಲಲ್ಲಿ ತೊರೆಗಳು, ಹೊಳೆಗಳು, ತೋಡುಗಳು ಬಂದು ಸೇರುತ್ತವೆ. ಅವುಗಳ ಜೊತೆಗೆ ಕಲ್ಮಶಗಳೂ ಕೂಡಾ ಬಂದು ಸೇರುತ್ತವೆ! ನಮ್ಮ ಪಾಲಿಗೆ ಕಾವೇರಿ ಗಂಗೆಯಷ್ಟೇ ಪವಿತ್ರವಿರಬಹುದು. ಆದರೆ ಪವಿತ್ರವೆಂದು ನಂಬಿದ್ದಲ್ಲದೆ, ಇನ್ನೇನೂ ಮಾಡದೆ ಕುಳಿತ ಪರಿಣಾಮ ಗಂಗೆಗೆ ಎಂಥಾ ದುರ್ಗತಿ ಬಂದಿದೆ ಎಂಬುದು ನಮಗೆಲ್ಲಾ ಇಂದು ಗೊತ್ತಿರುವ ವಿಚಾರವೇ. ‘ಯಾವುದೀ ಪ್ರವಾಹವೂ?’ ಎಂಬುದು, ಮೂಗು ಮುರಿವವರ ಉದ್ಗಾರವಾಗಿ ಬಿಡಬಾರದಷ್ಟೇ?

ನಮಗೇಕೆವೈಟ್ ರೈಸ್’ (ಬ್ಲಾಕ್ ರೈಸ್ ಬೇರೆ ಇದೆಯೆ?) ಹಂಗು? ಅನ್ನ, ಅನ್ನಬಹುದಲ್ಲ? ( ಮಿತಿಮೀರಿ ಇಂಗ್ಲಿಶ್ ಬೆರೆಸಿದ್ದರಿಂದ ಚೈನಾದಲ್ಲಿಪಿಜನ್ ಇಂಗ್ಲಿಶ್ಎಂಬ ಹೊಸ ಭಾಷೆ ರೂಪುಗೊಂಡಿತು ಎಂಬುದು ಇಲ್ಲಿ ಗಮನಾರ್ಹ.) ಪ್ರಿಯತಮನನ್ನುಹರಸಿಬೆಂಗಳೂರಿಗೆ ಬಂದ ಯುವತಿ-ಎಂಬ ಸುದ್ದಿಯಲ್ಲಿ ಸುದ್ದಿಗಿಂತ ಅಲ್ಲಿ ಎದ್ದು ಕಾಣುವುದು- ಕಾರ ಕಾರ ನಡುವಿನ ವ್ಯತ್ಯಾಸದ ಅಜ್ಞಾನ- ಅನ್ನುವಂತಾಗದಿರಲಿ. ‘ಪರ್ವತವಾಣಿಅನ್ನುವುದು ಕನ್ನಡ ಕಂಡ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರ ಕಾವ್ಯನಾಮ ಎಂಬ ಅರಿವು ಟಿ ವಿ ಚಾನೆಲ್‍ನಲ್ಲಿ ಒಬ್ಬರಿಗೂ ಇಲ್ಲವೆಂದಾದರೆ ಅವರುಪಾರ್ವತಿ ವಾಣಿಆಗುವ ಅಪಾಯ ತಪ್ಪಿದ್ದಲ್ಲ! (ಇವೆಲ್ಲವನ್ನೂ ನೆನಪಿನ ಆಧಾರದಲ್ಲಿ ಉಲ್ಲೇಖಿಸಿದ್ದು) ಇಂತದ್ದು ಇನ್ನೂ ಇವೆ. ಅವಸರದ ಅಪಘಾತಗಳಿಗೆ ಕನ್ನಡಮ್ಮ ಸದಾ ನಲುಗಿ, ಸೊರಗಿ ಹೋಗದಿರಲಿ.

ಪ್ರದೂಷಣೆ’, ‘ಕೀಟಾಣು’, ‘ಪ್ರಶಿಕ್ಷಣ’ ‘ತ್ವಚೆ’. . .ಭಾಷಾಂತರದ ಹಿಂಬಾಗಿಲಿನ ಮೂಲಕ ಕನ್ನಡದ ಮನೆಯೊಳಗೆ ನುಸುಳಿ ಇಲ್ಲೇ ಠಿಕಾಣಿ ಹೂಡುವ ಇಂತಹ ಪದಗಳ ಕುರಿತು ಎಚ್ಚರವಿರಲಿ. ‘ವಿಕಾಸಅನ್ನುವುದನ್ನು ಅಭಿವೃದ್ಧಿ, ಪ್ರಗತಿ ಎಂದು ಸಂದರ್ಭಕ್ಕೆ ತಕ್ಕಂತೆ ಬಳಸುವುದು ತಪ್ಪಲ್ಲ ಆದರೆ ಕನ್ನಡದಲ್ಲಿವಿಕಾಸವನ್ನುಇವೋಲ್ಯೂಷನ್ಎಂಬ ವೈಜ್ಞಾನಿಕ ಪದಕ್ಕೆ ಪರ್ಯಾಯವಾಗಿ ಬಳಸುತ್ತಾ ಬಂದಿದ್ದೇವೆ ಎಂಬ ಅರಿವು ಇರಲಿ. ‘ಟು ಪುಟ್ ಇನ್ ಎಫರ್ಟ್ಅನ್ನುವುದನ್ನುಶ್ರಮ ಹಾಕುವುದುಎಂದು ಭಾಷಾಂತರಿಸಿ ಕನ್ನಡೀಕರಿಸುವವರನ್ನು, ‘ಶ್ರಮ ವಹಿಸಿ, ಶ್ರಮ ಪಟ್ಟು’ ತಿದ್ದುವ ಕೆಲಸ ಮಾಡೋಣ. ನಾವು ಹಗುರವಾಗಿ, ತಮಾಷೆಗೆ ಎಂಬಂತೆಕಂಗ್ಲಿಶ್’ ( ಕನ್ನಡ + ಇಂಗ್ಲಿಶ್) ಎಂದು ಕರೆಯುವ ಪ್ರಯೋಗಗಳು ಒಂದಲ್ಲ ಒಂದು ದಿನ ವಾಸ್ತವವಾಗಿ ಬಿಡುವ ಅಪಾಯ ಇದೆ ಎಂಬ ಪ್ರಜ್ಞೆ ನಮಗಿರಲಿ.

ಕನ್ನಡ ಶಬ್ದ ಸಂಪತ್ತನ್ನು ಹೆಚ್ಚಿಸಲು ನಾಲ್ಕು ಹಾದಿಗಳಿವೆ: 1. ಹಿರಿಯರ ನಿಕ್ಷೇಪಧನದಂತೆ ಕನ್ನಡ ಕಾವ್ಯ ಶಾಸನಾದಿಗಳಲ್ಲಿ ಹುದುಗಿಕೊಂಡಿರುವ ಹುರುಳಿನ ನುಡಿಗಳನ್ನು ಮತ್ತೆ ಬೆಳಕಿಗೆ ತಂದು ಬಳಸಲಾರಂಭಿಸುವುದು 2. ಹಳ್ಳಿಗರ ಹಾಗೂ ಪಟ್ಟಣಿಗರಲ್ಲಿ ಸಹ ಮನೆಮನೆಗೂ ಹೆಣ್ಣು ಮಕ್ಕಳ ಬಾಯಲ್ಲಿರುವ ಅಚ್ಚಕನ್ನಡದ ಕೆಚ್ಚಿನ ಮಾತುಗಳನ್ನು ಎತ್ತಿ ಬರೆಹದಲ್ಲಿ ಉಪಯೋಗಿಸಹತ್ತುವುದು 3. ಈಗ ವ್ಯಾಕರಣಗಳಲ್ಲಿ ಹೇಳಿರುವ ಹಂಚಿಕೆಗಳಿಂದ ಹೊಸ ನುಡಿಗಳನ್ನು ಸಿದ್ಧಪಡಿಸಿಕೊಳ್ಳುವುದು. 4. ಸಂಸ್ಕø, ಇಂಗ್ಲಿಷು ಮೊದಲಾದ ಭಾಷೆಗಳಲ್ಲಿರುವಂತೆ ಇನ್ನೂ ವಿವಿಧಾರ್ಥರ್ದಕ ಹೊಸ ಶಬ್ದಗಳನ್ನು ಸಿದ್ಧಪಡಿಸಿಕೊಳ್ಳಲು ಬೇಕಾದ ಹೊಸ ಹಂಚಿಕೆಗಳನ್ನು ಕಂಡುಹಿಡಿಯುವುದು”-ಡಾ. ಶಂ.ಬಾ. ಜೋಶಿ (‘ಕಂನುಡಿಯ ಹುಟ್ಟುವಿನಲ್ಲಿ)

ಅದೇ ಪುಸ್ತಕದಲ್ಲಿ ಅವರು ಮುಂದುವರಿದು ಹೇಳುತ್ತಾರೆ “ ‘ವಿಕ್ರಮಾರ್ಜುನÀ ವಿಜಯವುನಲ್ಲಿ ಪಂಪನು ತೋರಿದ ದಾರಿಯಲ್ಲಿ ಮುಂದೆ ನಡೆಯದೆ ಇದ್ದುದರಿಂದಲೇ ಕನ್ನಡವು ಹೀಗೆ ಕುತ್ತಿಗೆ ಈಡಾಗಿದೆ.” ಎಂದು. ಪುಣ್ಯವಶಾತ್ ಕನ್ನಡಕ್ಕೆ ನಿಜವಾಗಿ ಅಂಥಾ ಕುತ್ತು ಬಂದಿಲ್ಲ. ಹಾಗೆಂದು ಇಂದು ನಾವು ಶಂ ಬಾ ಜೋಶಿಯವರು ತೋರಿದ ದಾರಿಯಲ್ಲಿ ಕೂಡಾ ನಡೆಯದಿದ್ದರೆ ಹೇಗೆ?

ಅವರ ಆಶಯವನ್ನು ಇನ್ನಷ್ಟು ವಿಸ್ತರಿಸಿ ನೋಡುವುದಾದರೆ-

   ಕನ್ನಡಕ್ಕೆ ಇಂಗ್ಲಿಶ್, ಹಿಂದಿ, ಉರ್ದು ಭಾಷೆಯ ಪದಗಳು ಸ್ವೀಕಾರಾರ್ಹವೆನಿಸಿರುವಾಗ, ಕನ್ನಡ ಸಂಸ್ಕøತಿಯದ್ದೇ ಭಾಗವಾಗಿರುವ ತುಳು, ಹವ್ಯಕ, ಕೊಡವ, ಬ್ಯಾರಿ, ತಕ್ಕ ಮಟ್ಟಿಗೆ ಕೊಂಕಣಿ ಮತ್ತು ಮರಾಠಿ ಪದಗಳನ್ನು ಎಕೆ ತರಬಾರದು? ಉಣ್ಣಲು ಅನ್ನದೊಂದಿಗೆ ಕಲಸುವ ತರಕಾರಿಯುಕ್ತ ಎಲ್ಲಾ ದ್ರವ ಪದಾರ್ಥಗಳನ್ನು ಠೀವಿಯಿಂದಸಾಂಬಾರ್ಅನ್ನುವ ಬದಲು, ಅವುಗಳಲ್ಲಿರುವ ಸೂಕ್ಷ್ಮ ವ್ಯತ್ಯಾಸಕ್ಕನುಗುಣವಾಗಿ ಹವ್ಯಕ, ತುಳು ಇತ್ಯಾದಿ ಭಾಷೆಗಳಲ್ಲಿರುವ ಬಗೆ ಬಗೆಯ ಪದಗಳನ್ನು, ಆಯಾ ಭಕ್ಷ್ಯ ಭೋಜ್ಯಗಳಿಗೆ ಅನ್ವಯಿಸುವುದರಲ್ಲಿ ತಪ್ಪೇನೂ ಇಲ್ಲ. ಹೀಗೆ ಇನ್ನೂ ಅನೇಕ ಪದಗಳನ್ನು ಸೋದರ/ಸೋದರಿ ಭಾಷೆಗಳಿಂದ ಕನ್ನಡಕ್ಕೆ ತರಬಹುದು.

   ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ನಿಘಂಟು ಪಠ್ಯ ಪುಸ್ತಕಗಳಂತೆ ಕಡ್ಡಾಯವೆನಿಸಲಿ. ಅವರಲ್ಲಿ  ಪದಗಳ ಕಾಗುಣಿತ ಕುರಿತು ಸಂಶಯ ತಲೆದೋರಿದಾಗಲೆಲ್ಲಾ, ನಿಘಂಟನ್ನು ನೋಡಿ ಖಚಿತಪಡಿಸಿಕೊಳ್ಳುವ ಪ್ರವೃತ್ತಿ ಬೆಳೆಯುವಂತಾಗಲಿ.

   ಸಾಧ್ಯವಾದರೆ ಪ್ರತಿ ವರ್ಷಕ್ಕೊಮ್ಮೆ, ಕಡೇ ಪಕ್ಷ ಪ್ರತಿ ಐದು ವರ್ಷಕ್ಕೊಮ್ಮೆ, ಕನ್ನಡ-ಕನ್ನಡ ಹಾಗೂ ಇಂಗ್ಲಿಶ್-ಕನ್ನಡ ನಿಘಂಟಿನ ಪರಿಷ್ಕø ಆವೃತ್ತಿಯನ್ನು ಹೊರತರುವ ಪರಿಪಾಠವಿರಲಿ. ವರ್ಷ ವರ್ಷ ಕನ್ನಡಕ್ಕೆ ಬಂದು ಸೇರುವ ಪದಗಳು ಮತ್ತು ಇಂಗ್ಲಿಶ್‍ಗೆ ಬಂದು ಸೇರುವ ನೂತನ ಪದಗಳಿಗೆ ಪರ್ಯಾರ್ಯವೆಂದು ಅಧಿಕೃತ ಮೊಹರು ಪಡೆದ ಕನ್ನಡ ಪದಗಳು ಅದರಲ್ಲಿ ದಾಖಲಾಗುತ್ತಿರಲಿ. ಉದಾ: ಇಕೋಸಿಸ್ಟಂ, ಸ್ಟಾರ್ಟ್-ಅಪ್ ಇತ್ಯಾದಿ ಇಂಗ್ಲಿಶ್ ಪದಗಳು ಮತ್ತು ಹತ್ಯಾಚಾರದಂತಹ ಕನ್ನಡ ಪದಗಳು.

   ಕನ್ನಡದ ಪರಿಚಾರಕರನ್ನು ಗೌರವಿಸುವ ಸಂಪ್ರದಾಯವಿರಲಿ. ಕನ್ನಡ ಶಿಕ್ಷಣ, ಅಧ್ಯಾಪನ, ಬರೆಹ, ಭಾಷಾಂತರ, ಮಾಧ್ಯಮ ಇತ್ಯಾದಿಗಳಲ್ಲಿ ಬದುಕುವ ದಾರಿ ಕಂಡುಕೊಂಡವರನ್ನುಅವರದ್ದು ಸ್ವಂತ ಮನೆಯೋ ಬಾಡಿಗೆಯದ್ದೋ? ಕಾರು ಇದೆಯೋ? ಮಗಳ ಮದುವೆಗೆ ಮಾಡಿದ ಖರ್ಚು ಎಷ್ಟು ?’ ಇತ್ಯಾದಿ  ಮಾನದಂಡಗಳ ಮೂಲಕ ಅಳೆಯುವುದು ಬೇಡ.

   ಇಂಗ್ಲಿಶ್ ಭಾಷೆ ತನ್ನ ಪಾರಮ್ಯವನ್ನು ಮೆರೆಯಲು ಮುಖ್ಯ ಕಾರಣ ಅದರಲ್ಲಿ ಲಭ್ಯವಿರುವ ವಿಫುಲವಾದ ವೈವಿಧ್ಯಮಯ, ಅಸಕ್ತಿದಾಯಕ, ಸಾಹಸಮಯ ಮಕ್ಕಳ ಸಾಹಿತ್ಯ. ಅದರಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಭಿನ್ನ ಬಗೆಯ ಕಾರ್ಟೂನ್‍ಗಳು, ಕಥೆಗಳು, ನೀಳ್ಗತೆಗಳು ಸಿಗುತ್ತವೆ. ಕನ್ನಡದಲ್ಲಿ ಇಂತಹ ಕೆಲಸವಾಗÀಬೇಕು. ಕನ್ನಡದಲ್ಲೂ ಕೂಡಾ ಇಂತಹ ಮಕ್ಕಳ ಸಾಹಿತ್ಯದಲ್ಲಿ ಹೆಚ್ಚಿನ ಕೃಷಿಯ ಅಗತ್ಯವಿದೆ.                          

   ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆಯುವ ಆಲಸಿಗಳಿಗೆ ಯುನಿಕೋಡ್, ಬರಹ ಮತ್ತು ಕನ್ನಡ ಬೆರಳಚ್ಚಿನ ಮೊಬೈಲ್ ಆಪ್ ಬಳಕೆಯ ಕುರಿತು ಅರಿವು ಮೂಡಿಸಬೇಕಿದೆ. ಕನ್ನಡದಲ್ಲಿ ಅಪಾರ ಪಾಂಡಿತ್ಯವಿದ್ದರೂ ಕೈ ಬರೆಹದಾಚೆಗೆ ಮುಂದುವರಿಯದವರಿಗೆ, ನುಡಿ, ಶ್ರೀಲಿಪಿ ಇತ್ಯಾದಿ ಸಾಫ್ಟ್‍ವೇರ್‍ಗಳ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಕನ್ನಡ ಶಿಕ್ಷಕರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಣೆÀಯಿಂದ ಇವುಗಳ ಕುರಿತು ಅರಿವು ಮೂಡಿಸಲಿ-ಇವುಗಳು ಪಠ್ಯಕ್ರಮದ ಭಾಗವಾದರೆ ಇನ್ನೂ ಉತ್ತಮ.

   ಕನ್ನಡ ಚಿತ್ರರಂಗದ ಸಾಹಿತಿಗಳನ್ನು ಅಸ್ಪøಶ್ಯರಂತೆ ಕಾಣುವುದು ನಿಲ್ಲಬೇಕು. ಕನ್ನಡ ಸಾಹಿತ್ಯ ಸಮ್ಮೇಳನ ಮುಂತಾದುವುಗಳಲ್ಲಿ ಅವರಿಗೂ ಒಂದು ವೇದಿಕೆ ಕಲ್ಪಿಸುವುದು ಅತ್ಯಗತ್ಯ.

   ಬೆಂಗಳೂರಿನ ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಮಾತುಕತೆಯ ನಡುವೆÉ ಕನ್ನಡ ಸಂಖ್ಯೆಗಳನ್ನು ಬಳಸುವುದು ಕಡಿಮೆಯಾಗುತ್ತಾ ಬರುತ್ತಿದೆ. ಇದು ಅಪಾಯದ ಮುನ್ಸೂಚನೆ. ಅವರನ್ನು ತಿದ್ದುವ ಕೆಲಸ ಆಗಬೇಕಿದೆ.

ಕನ್ನಡ ಪರ ನೈಜ ಕಾಳಜಿ ಇರುವ ಅಪ್ಪಟ, ಸಹೃದಯ ಕನ್ನಡಿಗರ ಸಂಘಟನೆಗಳು ರೀತಿಯ ಸಲಹೆ ಸೂಚನೆಗಳನ್ನು ಕಾಲಕಾಲಕ್ಕೆ ಆಹ್ವಾನಿಸಿ, ಅವುಗಳನ್ನು ಭಟ್ಟಿ ಇಳಿಸಿ, ಕ್ರೋಢೀಕರಿಸಿ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು. ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕುಎಂದು ಹಾಡುತ್ತಾ ಮೈಮರೆಯುವವರಿಗೆÉ ‘ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆಎಂದು ಎಚ್ಚರಿಸಬೇಕು.

ಹಿಂದೂ ಧರ್ಮಕ್ಕೆ ಒಬ್ಬರೇ ಒಬ್ಬ ಸ್ವಾಮಿ ವಿವೇಕಾನಂದ. ಕನ್ನಡ ಭಾಷೆಗೆ ಒಬ್ಬರೇ ಒಬ್ಬ ಕೃ’. ಅವರಾಡಿದ ಮಾತು, ಅಲ್ಲಲ್ಲ ಹೊರಡಿಸಿದ ಫರ್ಮಾನು, ಮಾಡಿದ ಘರ್ಜನೆ ನಾಡಿನೆಲ್ಲೆಡೆ ಮೊಳಗಬೇಕು, ಮಾರ್ದನಿಸಬೇಕು. ಟೀ ಷರಟುಗಳಿಂದ ಹಿಡಿದು ಕೆತ್ತನೆಗಳಲ್ಲಿ ಮೂಡಿ ಅಚ್ಚಳಿಯದೆ ಉಳಿಯಬೇಕು.

ಇದು ಕನ್ನಡಿಗರ ನಾಡು, ಕನ್ನಡ ನಾಡು, ಇಲ್ಲಿ ಕನ್ನಡಕ್ಕೇ ಪ್ರಥಮ ಸ್ಥಾನ ಸಲ್ಲಬೇಕು. ಕನ್ನಡದÀ ಸಾರ್ವಭೌಮತೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ

ಸರಿ. ಅದಕ್ಕೆ ಕನ್ನಡಿಗರೇ ಅವಕಾಶ ಮಾಡಿಕೊಡದಿದ್ದರೆ ಹೇಗೆ? ಅವರನ್ನು ತಿದ್ದುವುದು ಎಂತು?’ ಅನ್ನುವುದು ಎಲ್ಲಕ್ಕಿಂತ ಮೊದಲಿನ, ಎಲ್ಲಕ್ಕಿಂತ ದೊಡ್ಡ ಸವಾಲು.

ಕನ್ನಡದಲ್ಲಿ- ಮಾತನಾಡಿದರೆ ದಂಡ- ವಿಧಿಸುವ -ಇಂಗ್ಲಿಶ್- ಮಾಧ್ಯಮ ಶಾಲೆಗಳಲ್ಲಿ- ಕಲಿತ-ಸುಶಿಕ್ಷಿತ- ಕನ್ನಡಿಗರು; ಪರಿಸರದÀ, ಮರಗಳ, ವನ್ಯಜೀಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಪರಿಯಲ್ಲೇ, ಕನ್ನಡದ ರಕ್ಷಣೆಗೆ ಏಕೆ ಮುಂದಾಗುವುದಿಲ್ಲ? ಕನ್ನಡದ ರಕ್ಷಣೆಯ ವಿಷಯಕ್ಕೆ ಬಂದಾಗ ಮೂಗು ಮುರಿಯುವುದು ಏಕೆ? ಎಂದು ಪ್ರಶ್ನಿಸುವ ಎದೆಗಾರಿಕೆ-ಅನ್ಯ ಕನ್ನಡಿಗರಿಗೆ ಇರಬೇಕು!

ಕನ್ನಡಕ್ಕೆ ಮುಂದೊಂದು ದಿನ ಬರಬಹುದಾದ, ಬರಬಾರದು ಎಂದು ನಾವು ಬೇಡುವ ದುರ್ಗತಿಯನ್ನು ಊಹಿಸಿಯೇ ಗೋವಿಂದ ಪೈಗಳುನಮ್ಮ ತಪ್ಪನೆನಿತ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ/ ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲಮ್ಮೆವುಎಂದು ಬರೆದದ್ದಿರಬೇಕು. ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರು ಕಾಸರಗೋಡಿನ ಕುರಿತಾಗಿ ಬರೆದಬೆಂಕಿ ಬಿದ್ದಿದೆ ಮನೆಗೆ ಬೇಗ ಬನ್ನಿಅನ್ನುವುದು ಇಡೀ ನಾಡಿನ ಹಾಡಲ್ಲ, ಪಾಡು ಆದೀತು.

ಅದೇನು ಸುಕೃತವೋ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷ ದೀಪಾವಳಿಯ   ಆಸುಪಾಸಿನಲ್ಲೇ ಬರುತ್ತದೆ. ಅದನ್ನುಕನ್ನಡದ ದೀಪಾವಳಿಎಂಬಂತೆ ಆಚರಿಸುವಂತಾಗಲಿ. ನಿಸಾರರ ಕನಸಿನ ನಿತ್ಯೋತ್ಸವ, ನಿತ್ಯ ದೀಪೋತ್ಸವವೆನಿಸಲಿ.   ಡಿ ಎಸ್ ಕರ್ಕಿಯವರಹಚ್ಚೇವು ಕನ್ನಡದÀ ದೀಪ . . .'  ಸಾಲುಗಳಿಗೆ ಅರಳಿ ಬೆಳಗುವ ಕನ್ನಡದ ಮನಗಳ ಸುಪ್ತಾವಸ್ಥೆಯಲಿ,  ದೀಪವು ನಮ್ಮದೆ, ಕೈಗಳು ನಮ್ಮವೆ, ಆರದಿರಲಿ ಬೆಳಕುಎಂಬ ಪರಿಷ್ಕರಣೆಯೊಂದಿಗೆ ಕೆ ಎಸ್ ಅವರ ಕವಿತೆ ಅನುರಣಿಸುತಿರಲಿ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ, ಭಾರತದ ಚರಿತ್ರೆಯ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ ಹಾಗೂ ದಕ್ಷಿಣ ಭಾರತದ ಚರಿತ್ರೆಯ ಕುರಿತು ಓರ್ವ ಕೃತಿಕಾರನಾಗಿದ್ದ, ನಿವೃತ್ತಿಯ ಅನಂತರರಾಯಲ್ ಏಷಿಯಾಟಿಕ್ ಸೊಸೈಟಿ ಪ್ರಮುಖ ಸದಸ್ಯನಾಗಿದ್ದ; ಜಾನ್ ಫೈತ್ ಫುಲ್ ಫ್ಲೀಟ್ ಎಂಬ ಸಿ ಎಸ್ ಅಧಿಕಾರಿ ಕನ್ನಡವನ್ನು ಹೊಗಳಿದ್ದನ್ನು ಕೇಳಿ ಪುಳಕಿತರಾಗೋಣ:

ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡವು ಅತ್ಯಂತ ಇಂಪಾದುದು, ಮತ್ತು ಸಾಮರ್ಥ್ಯ ಹಾಗೂ ಸಶಕತ್ತ ಅಭಿವ್ಯಕ್ತಿ ಇವುಗಳಲ್ಲಿ ಅತ್ಯಂತ ಶ್ರೀಮಂತವಾದುದು

(“It (Kannada) is the most mellifluous of all the Indian vernaculars, and the richest in capability and force of expression.”-F. Fleet) 

 

        ಇಂತಿಪ್ಪ ಕನ್ನಡಕ್ಕೆ ಎಷ್ಟಿರಬೇಕು ನಮ್ಮ ಕಪ್ಪÀ?

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...