Skip to main content

     ಸುತ್ತ-ಮುಕ್ತ ಅಂಕಣ

        ಹೀಗೊಂದು ‘ಒಂಟೆ’ ದನಿ!

ಗೊರಸುಗಳುಳ್ಳ ಪ್ರಾಣಿಗಳ ಪೈಕಿ, ಒಂಟೆಗಳು ‘ಸಮಸಂಖ್ಯೆಯ ಕಾಲ್ಬೆರಳುಗಳುಳ್ಳ ಪ್ರಾಣಿ’ ಗಳ ವರ್ಗಕ್ಕೆ ಸೇರುತ್ತವೆ. ಭೂಮಿಯಲ್ಲಿ 94% ನಷ್ಟಿರುವುದು ‘ಅರೇಬಿಯನ್ ಕ್ಯಾಮೆಲ್’ ನಾಮಾಂಕಿತ, ಒಂದು ಡುಬ್ಬದ ಒಂಟೆಗಳಾದರೆ, ಎರಡು ಡುಬ್ಬಗಳುಳ್ಳ ಒಂಟೆಗಳ ಅನುಪಾತ ಕೇವಲ 6%. ಒಂಟೆಗಳ ಎಲ್ಲಾ ಏಳು ಪ್ರಭೇದಗಳನ್ನು ಒಟ್ಟು ಸೇರಿಸಿ ‘ಕ್ಯಾಮೆಲಿಡಾಯೆ’ ಎನ್ನಲಾಗುತ್ತದೆ ಮತ್ತು ಇವುಗಳಲ್ಲಿ ಉಳಿದಿರುವ ಮೂರು ಪ್ರಭೇದಗಳಲ್ಲಿ ಒಂದಂತೂ ಈಗಾಗಲೇ ನಶಿಸಿಹೋಗುತ್ತಿರುವ ಸಂತತಿಗಳ ಪಟ್ಟಿಗೆ ಸೇರಿದೆ.

ಮಾಂಸಕ್ಕೆ. ಹಾಲಿಗೆ ಮತ್ತು ಉಣ್ಣೆಗಾಗಿ ಸಾಕಾಣಿಕೆ ಮಾಡುವ ಒಂಟೆಗಳ ಓಟದ ಸ್ಪರ್ಧೆಯೂ ನಡೆಯುತ್ತದೆ. ಆದರೆ 2005ರವರೆಗೆ ಈ ಒಂಟೆ ರೇಸ್ ಹೆಸರಿನಲ್ಲಿ ಒಂಟೆಗಳ ತವರೂರು ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ನಡೆಯುತ್ತಿದ್ದದ್ದು ಮಾತ್ರ ತೀರಾ ಅಮಾನುಷ ಕೃತ್ಯ.

ಒಂಟೆಗಳ ರೇಸ್‍ನಲ್ಲಿ ಜಾಕಿಗಳ ಭಾರ ಕಮ್ಮಿಯಾದಷ್ಟೂ, ಅವುಗಳು ಹೆಚ್ಚು ಚುರುಕಾಗುತ್ತವೆ, ಹೆಚ್ಚು ವೇಗವಾಗಿ ಓಡುತ್ತವೆ ಎಂಬುದನ್ನು ಅರಿತ ಅಲ್ಲಿನ ಒಂಟೆ ಮಾಲೀಕರು, ಹತ್ತು ವರ್ಷಕ್ಕಿಂತಲೂ  ಕಡಿಮೆ ವಯಸ್ಸಿನವರನ್ನು, ಹಸುಳೆಗಳನ್ನು ಜಾಕಿಯಾಗಿ ದುಡಿಸುತ್ತಿದ್ದರು. ಭಾರತ ಮತ್ತು ಬಡರಾಷ್ಟ್ರಗಳಾದ ಬಾಂಗ್ಲಾ ದೇಶ, ಪಾಕಿಸ್ಥಾನ ಹಾಗೂ ಸುಡಾನ್‍ನಿಂದ ಕೆಲಸಕ್ಕೆ ಎಂದು ಸುಳ್ಳು ಹೇಳಿ ಮಕ್ಕಳನ್ನು ಯು ಎ ಇಗೆ ತರಿಸಿ,  ಬಂಧನದಲ್ಲಿಟ್ಟು ಜಾಕಿಗಳಾಗಿ ಬಳಸಲಾಗುತ್ತಿತ್ತು.

ತೂಕ ಹೆಚ್ಚಾಗಬಾರದೆಂದು ಈ ಹಸುಳೆ ಜಾಕಿಗಳಿಗೆ ನೀಡುತ್ತಿದ್ದ ಆಹಾರ ಇಂತಿಷ್ಟೇ. ಹೆಚ್ಚು ತಿಂದರೆ, ಒಂಟೆಗೆ ಮೀಸಲಿಟ್ಟ ಉತ್ತಮ ಆಹಾರ ಕದ್ದು ಸಿಕ್ಕಿಬಿದ್ದರೆ, ರೇಸ್‍ನಲ್ಲಿ ಸೋತರೆ-ವಿದ್ಯುತ್ ಶಾಕ್‍ನ ಶಿಕ್ಷೆ ಬೇರೆ! 

 ಒಂಟೆಗಳು ಗಂಟೆಗೆ 40-50 ಕಿ ಮೀ ವೇಗದಲ್ಲಿ ಓಡುತ್ತಿದ್ದರೆ, ಅವುಗಳ ಬೆನ್ನ ಮೇಲೆ ಬಿಗಿದು ಕಟ್ಟಲಾದ ಪುಟಾಣಿಗಳು ಹೆದರಿ ಚೀರಾಡುತ್ತವೆ. ಅವು ಚೀರಿದಷ್ಟೂ, ಒಂಟೆಗಳ  ವೇಗ ಹೆಚ್ಚುತ್ತದೆ. ಸ್ಪರ್ಧಾಳು ಮಾಲೀಕರು ಹಿಗ್ಗುತ್ತಾರೆ. ಬಹುಮಾನವಾಗಿ ದೊರೆಯುವ ಸೆಡಾನ್ ಮತ್ತು ಭಾರೀ ನಗದು ಮೊತ್ತಕ್ಕಿಂತ, ‘ಗೆದ್ದ ಒಂಟೆ ಮಾಲೀಕ’ ಎಂಬ ಪ್ರತಿಷ್ಠೆ ಅವರಿಗೆ ಮುಖ್ಯವಂತೆ. 

ಕೆಲವು ‘ಅದೃಷ್ಟಶಾಲಿ’ ಮಕ್ಕಳು ಈ ಒಂಟೆ ಓಟದ ನಡುವೆಯೇ ಕೆಳಗೆ ಬಿದ್ದು, ಅಪ್ಪಚ್ಚಿಯಾಗಿ ಶಾಶ್ವತವಾಗಿ ಮುಕ್ತಿ ಪಡೆಯುತ್ತವೆ. ಕೆಲವು ಹತಭಾಗ್ಯರು ಅಂಗವಿಕಲರಾಗುತ್ತಾರೆ. ಪಾರಾದವರು, ಈ ಕರಾಳ ಅನುಭವದಿಂದ ಜೀವನಪೂರ್ತಿ ಚೇತರಿಸಲಾರದಷ್ಟು ಮಾನಸಿಕವಾಗಿ ಜರ್ಝರಿತರಾಗುತ್ತಾರೆ.

ಇದೇನೂ ಮಧ್ಯಮ ಯುಗದ ಕರಾಳ ಇತಿಹಾಸವಲ್ಲ. 2005ರ ವರೆಗೆ, ಮಾನವ ಹಕ್ಕುಗಳ ಸಂಘಗಳ ವಿರೋಧ ತಾರಕಕ್ಕೆ ಏರುವ ವರೆಗೆ, ಈ ಕ್ರೌರ್ಯ ಅವ್ಯಾಹತವಾಗಿ ಸಾಗಿತು ಎಂದರೆ ನಂಬಲು ಕಷ್ಟವಾಗಬಹುದು.

  ಮಾನವ ಹಕ್ಕುಗಳ ಸಂಘಗಳ ಒತ್ತಡ ಮಿತಿ ಮೀರಿದ ಬಳಿಕ ಎಚ್ಚೆತ್ತುಕೊಂಡ ಯು ಎ ಇ, 18 ವರ್ಷ ಕೆಳಗಿನವರು ಒಂಟೆ  ಜಾಕಿ ಆಗುವುದನ್ನು ನಿಷೇಧಿಸಿತು. ಈಗ ಮಕ್ಕಳ ಬದಲು  ರೋಬೋಟ್‍ಗಳಂತೆ ಜಾಕಿಗಳು.

ಮಾತ್ರವಲ್ಲ, 2009ರಲ್ಲಿ ಮಾನವ ಹಕ್ಕುಗಳ ಸಂಘಗಳ ಒತ್ತಾಯದ ಮೇರೆಗೆ ಈ ಮಕ್ಕಳ ಕುಟುಂಬಗಳಿಗೆ ಪರಿಹಾರವಾಗಿ ಆಯಾ ದೇಶಗಳಿಗೆ ಮಿಲಿಯಗಟ್ಟಲೆ ಡಾಲರ್ ಮೊತ್ತವನ್ನು ಯು ಎ ಇ ನೀಡಿತು. ಶಿಕ್ಷೆ ಮಾತ್ರ ಯಾರಿಗೂ ಇಲ್ಲ! ಒಂಟೆ ಜಾಕಿಗಳಾಗಿ ದುಡಿದ ನೂರಾರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪರಿಹಾರ ಹಣ ಎಲ್ಲರನ್ನೂ ತಲುಪಿಲ್ಲ ಎಂಬ ದೂರುಗಳು ಕೂಡಾ ಇವೆ. 


ಸೌದಿ ಅರೇಬಿಯಾದಲ್ಲಿ ಪ್ರತಿ ವರ್ಷ ಒಂಟೆಗಳ ಸೌಂದರ್ಯ ಸ್ಪರ್ಧೆ ನಡೆಯುತ್ತದೆ. ಗೆದ್ದವರಿಗೆ (ಒಂಟೆ ಮಾಲೀಕರಿಗೆ) ಮಿಲಿಯಗಟ್ಟಲೆ ಬಹುಮಾನ, ಸೆಡಾನ್ ಕಾರು! ಹೀಗಾಗಿ, ದುರಾಸೆಗೆ ಬಲಿಯಾದ ಒಂಟೆ ಮಾಲೀಕರು ಕಳೆದ ವರ್ಷ ಅವುಗಳಿಗೆ, ನೆರಿಗೆಗಳನ್ನು ಇಲ್ಲದಾಗಿಸುವ ಬೊಟೋಕ್ಸ್ ನಂತಹಾ À ಔಷಧಿ ನೀಡುವುದು ಮುಂತಾದ ಕೃತಕ, ನಿಷಿದ್ಧ ವಿಧಾನಗಳಿಗೆ ಮೊರೆ ಹೋದ ತಪ್ಪಿಗೆ ಸ್ಪರ್ಧೆಯಿಂದ ಹೊರ ನಡೆಯಬೇಕಾಯಿತಂತೆ.

 ಒಂದು ಅಥವಾ ಎರಡು ಡುಬ್ಬ, ಸೊಟ್ಟ ಮೂತಿ, ಅಂಕು ಡೊಂಕು ನಡಿಗೆ. . . ಒಂಟೆಯಲ್ಲಿ ಏನಿದೆ ಸೆಲ್ಫಿ ತೆಗೆಯುವಂಥದ್ದು? ಯೂ ಟ್ಯೂಬ್‍ನಲ್ಲಿ ವೀಡಿಯೋ ಅಪ್‍ಲೋಡ್ ಮಾಡುವಂಥದ್ದು? ವೀಕ್ಷಿಸುವಂಥದ್ದು?

ನೀರೇ ಇಲ್ಲದ ಉರಿವ ಬೆಂಗಾಡಲ್ಲಿ, ಹತ್ತು ದಿನಕ್ಕೊಮ್ಮೆ ಮಾತ್ರ ನೀರು ಕುಡಿದು ‘ಈಜಿó’ ಯಾಗಿ ‘ಈಸಿ, ಇದ್ದು ಜೈಸಬಲ್ಲ’ ಒಂಟೆಯಿಂದ ನಾವು ಕಲಿಯಬೇಕಾದ್ದು ಮಾತ್ರ ತುಂಬಾ ಇದೆ.

ಅವುಗಳ ಡುಬ್ಬ ಎನ್ನುವ ಕೊಬ್ಬಿನ ಮೂಟೆಯನ್ನು ಕರಗಿಸಿ ಅವು ನೀರು ಪಡೆಯಬಲ್ಲವು. ಸಾಮಾನ್ಯ ಸಸ್ತನಿಗಳು ಸತ್ತೇ ಹೋಗಬಲ್ಲಂತಹಾ ಧಗೆಯಲ್ಲಿ ಬದುಕಿ ಉಳಿಯಬಲ್ಲದ್ದು ಒಂಟೆ ಮಾತ್ರ. ಮುಂದೆ ಇಡೀ ಭೂಮಿಯೇ ಮರುಳುಗಾಡಾದಾಗ ಮತ್ತು ನೀರೇ ಇಲ್ಲದ ಗ್ರಹಗಳಲ್ಲಿ ಮಾನವ ಕಾಲನಿಗಳನ್ನು ನಿರ್ಮಿಸಿದಾಗ, ಜೈವಿಕ ತಂತ್ರಜ್ಞಾನದಲ್ಲಿ ನಡೆಯಬಹುದಾದ ಅತ್ಯಾಧುನಿಕ ಆವಿಷ್ಕಾರಗಳ ಫಲವಾಗಿ ಮಾನವ ಒಂಟೆತನವನ್ನು-ಅರ್ಥಾತ್-ಡುಬ್ಬ ಇತ್ಯಾದಿಗಳನ್ನು ‘ಮೈಗೂಡಿಸಿಕೊಂಡು’ ಬಾಳುವುದು ಅನಿವಾರ್ಯವೆನಿಸಬಹುದು. 

ಸಕಲ ಪಶು, ಪಕ್ಷಿ ಮೃಗಗಳ ರಾಶಿಯಿಂದ ಪ್ರಯೋಜನ ಪಡೆದು ಅವುಗಳಿಗೆ ಕೃತಘ್ನನಾಗಿಯೇ ಉಳಿವ ಮಾನವನ ಬಳಿ ಅವುಗಳೆಲ್ಲಾ ಒಕ್ಕೊರಲಿನಿಂದ ‘ನೀನಾರಿಗಾದೆಯೋ ಎಲೆ ಮಾನವ?’ ಎಂದು ಕೇಳುವ ದಿನ ದೂರವಿಲ್ಲ.   


Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...