Skip to main content

 

 ಸುತ್ತ-ಮುಕ್ತ

        ನವರಸಗಳ ನೆಲೆವೀಡು ನಿಸರ್ಗ

 

ವರುಷಗಳ ಹಿಂದೆ ತೆರೆಕಂಡ ಪ್ರಸಿದ್ಧಲೈಫ್ ಆಫ್ ಪೈ ಚಿತ್ರದ ಒಂದು  ದೃಶ್ಯ: “ಅದೇನು ನಿನ್ನ ಸಂಗಾತಿ ಅಂದುಕೊಂಡೆಯಾ? ಅದೊಂದು ಮೃಗ!”

 ತಾವೇ ಸಾಕಿದ ಹುಲಿಯನ್ನು, ಬೋನಿನ ಹೊರಗಿಂದ ಮಾಂಸದ ತುಣುಕು ನೀಡಿ ಒಲಿಸಿಕೊಳ್ಳಲು ನೋಡುವ ಮಗನನ್ನು ತಂದೆ ಹೀಗೆ ಗದರಿಸುತ್ತಾನೆ. ಅದು ಹುಲಿ. ಶತ್ರುವಲ್ಲ. ಹಾಗೆಂದು ಮಿತ್ರನೂ ಅಲ್ಲ.

ರುದ್ರ, ರಮಣೀಯ, ರೋಚಕ, ಮಾರಕ- ನಿಸರ್ಗ ಇವೆಲ್ಲವೂ ಆಗಿರುವುದು ಕಠೋರ ವಾಸ್ತವ.

ತಾವು ನತದೃಷ್ಟರು ಅಂದುಕೊಂಡಿರುವ ನಗರವಾಸಿಗಳು, ಕೊಡಗಿನ ಚೇತೋಹಾರಿ ಜನಜೀವನ ಕಂಡು ಕರುಬುತ್ತಿದ್ದರು. ಕೆಲವರಿಗೆ ಅಲ್ಲೇ ಬದುಕು ಕಂಡುಕೊಳ್ಳುವಂತಾದರೆ. . . ಎಂದು ಅನಿಸಿದ್ದುಂಟು.

ಆದರೆ 2018ರಲ್ಲಿ ಅಲ್ಲಿ ಸುರಿದ ಪ್ರಯಳ ಸದೃಶ ಮಳೆ ಹಗಲುಗನಸುಗಾರರನ್ನು ಎಚ್ಚರಿಸಿತು. ‘ಲಂಗು ಲಗಾಮಿಲ್ಲದೆ ಬೆಳೆದ ಬೆಂಗಳೂರು ಕೂಡಾ ವರುಣನೆದುರು ಪರಿ ಸೋಲಲಿಲ್ಲ, ತಾವೇ ವಾಸಿ ಅನಿಸಿರಬೇಕು ಅವರಿಗೆ.  ಪ್ರಕೃತಿ ಇರುವುದೇ ಹಾಗೆ. ಅದು ನವರಸಗಳ ನೆಲೆವೀಡು. ಹಿಮದ ಹಾಸು ಹೊರಗೆ, ಕಬ್ಬಿಣವೂ ಕರಗುವ ದಾವಾನಲ ಒಳಗೆ-ಇದದರ ಹೂರಣ.

ಇದೇ ಕೊಡಗಿನಲ್ಲಿ, ಕೆಲವು ದಿನಗಳ ಹಿಂದೆ ಗಣ್ಯ ವ್ಯಕ್ತಿಯೊಬ್ಬರು ತಮ್ಮದೇ ತೋಟದಲ್ಲಿ ಜೇನುನೊಣಗಳ ಧಾಳಿಗೆ ಬಲಿಯಾದರು. ವರುಷಗಳ ಹಿಂದೆ ಮುದ್ದು ಬಾಲಕಿ ವೈಷ್ಣವಿ, ಬೆಂಗಳೂರಿನ ಲಾಲ್ ಬಾಗ್ನಲ್ಲಿ ಜೇನುದಾಳಿಗೆ ತುತ್ತಾದಳು. ಕಣ್ಣು ಮಚ್ಚಾಲೆಯಾಡಿ ದಿಗ್ಭ್ರಮೆ ಮೂಡಿಸುವುದು ಪ್ರಕೃತಿಯ ಜಾಯಮಾನ.

ಪ್ರಕೃತಿ, ದಂತ ಚೋರ ಕಾಡುಗಳ್ಳನನ್ನು ಕೂಡಾ ಸಾಕಿ ಸಲಹಿದೆ. ಕಾಡನ್ನೇ ಮನೆ ಮಾಡಿಕೊಂಡಿದ್ದ ಅವನು ಮರ ಮೈಮೇಲೆ ಬಿದ್ದು ಅಥವಾ ಹಾವು ಕಚ್ಚಿ ಸಾಯಲಿಲ್ಲ. ಇದೇ ಸಿಲಿಕಾನ್ ಸಿಟಿಯಲ್ಲಿ ದ್ವಿಚಕ್ರ ವಾಹನ ಸವಾರರು ಮರಬಿದ್ದು ಪ್ರಾಣತೆತ್ತ ಉದಾಹರಣೆಗಳಿವೆ. ಹಾವಿನ ಕಡಿತಕ್ಕೆ ಬಲಿಯಾದವರೂ ಇದ್ದಾರೆ. ಚಾರಣಕ್ಕೆ ಹೋದವರು ದಾರುಣ ಆಂತ್ಯ ಕಂಡಿದ್ದಾರೆ. ಇತ್ತೀಚೆಗೆ, ಕೇರಳದಲ್ಲಿ ಚಾರಣಕ್ಕೆ ಹೋದವನನ್ನು ಸೇನೆ ರಕ್ಷಿಸಬೇಕಾಯಿತು.  

ಸ್ಟೀವ್ ರಾಬರ್ಟ್ ಇರ್ವಿನ್, ಪತ್ನಿ ಸಮೇತನಾಗಿ, ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದಮೊಸಳೆ ಬೇಟೆಗಾರ ಎಂಬ ಟಿ ವಿ ಸರಣಿ ನಡೆಸಿಕೊಡುತ್ತಿದ್ದ, ಅದೇ ಹೆಸರಿನಿಂದ ಜನಪ್ರಿಯನಾಗಿದ್ದ. ಅವನ ತಂದೆ ತಾಯಿ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ಸ್ಥಾಪಿಸಿ ಬೆಳೆಸಿದ್ದ ಮೃಗಾಲಯವೇ ಇರ್ವಿನ್ ದಂಪತಿಯ ಪ್ರಪಂಚವಾಗಿತ್ತು.

ಕ್ರಾಕಡಯಲ್ ಹಂಟರ್ ಅಲ್ಲದೆ, ಸ್ಟೀವ್ಜೋಡಿ ಇನ್ನೂ ಅನೇಕ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿತ್ತು. ಅವನು ಎತ್ತಿ ಆಡಿ ಮುದ್ದಿಸದ ಉರಗ, ಪ್ರಾಣಪಶು ಪಕ್ಷಿಗಳಿಲ್ಲ. ಪರಿಸರ ವಾದ, ವನ್ಯಜೀವಿಗಳ ಸಂರಕ್ಷಣೆಗೆ ಮುಡಿಪಾಗಿದ್ದ ಕುಟುಂಬ ಅವರದ್ದು.

ತಂದೆ ವನ್ಯ ಜೀವಿಗಳ, ಅದರಲ್ಲೂ ವಿಶೇಷವಾಗಿ ಉರಗ, ಉಭಯಚರಗಳ ತಜ್ಞ. ತಾಯಿ ಅವುಗಳಿಗೆ ಆಶ್ರಯ ಕಲ್ಪಿಸುವುದರಲ್ಲಿ ನಿರತಳು. ಸಹಜವಾಗಿ ಸ್ಟೀವ್ ಇರ್ವಿನ್ ಅವುಗಳ ಲಾಲನೆ ಪಾಲನೆಯಲ್ಲೇ ಬೆಳೆದ, ಆದರೆ ಎಲ್ಲವೂ ಅಪ್ಪನ ಸುಪರ್ದಿಯಲ್ಲಿ, ತರಬೇತಿಯಂತೆ. ಕಾಡಲ್ಲಿ ಬೆಳೆಯಲಿಲ್ಲ ಎಂಬುದನ್ನು ಬಿಟ್ಟರೆ ಅವನು ಥೇಟ್ ಟಾಜó ್ನ್!

ಮೊಸಳೆ, ಉರಗಗಳು ಅವನ ಚಡ್ಡಿ ಗೆಳೆಯರು. ತನ್ನ 6ನೇ ಹುಟ್ಟು ಹಬ್ಬದಂದು 12 ಅಡಿ ಉದ್ದದ ಹೆಬ್ಬಾವನ್ನು ಉಡುಗೊರೆಯಾಗಿ ಪಡೆದ ಅವನು ತನ್ನ 12ನೇ ವಯಸ್ಸಿನಲ್ಲಿ ಮೊಸಳೆ ನಿರ್ವಹಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬರೋಬ್ಬರಿ 100 ಮೊಸಳೆಗಳನ್ನು ಹಿಡಿದು ತಂದ! ಮುಂದೆ ಅವನೇ ಅಂತಾರಾಷ್ಟ್ರೀಯ ಮೊಸಳೆ ಸಂರಕ್ಷಣಾ ಸಂಸ್ಥೆ ಸ್ಥಾಪನೆಗೆ ನೆರವಾದ.

ಉತ್ತಮ ಆದಾಯ, ಹೆಸರು, ಸಂತೃಪ್ತಿ, ಒಂದು ಉದಾತ್ತ ಗುರಿ ಎಲ್ಲವೂ ಇದ್ದವನ ಪಾಲಿಗೆ ನಿಸರ್ಗವೇ ಖಳನಾಯಕನಾಯಿತು. ಆಸ್ಟ್ರೇಲಿಯಾದಗ್ರೇಟ್ ಬೇರಿಯರ್ ರೀಫ್ನಲ್ಲಿ ಒಂದು ಸಾಕ್ಷ್ಯಚಿತ್ರದ ಚಿತ್ರೀಕರಣದ ವೇಳೆ ನೀರಡಿಯಲ್ಲಿ, ಸ್ಟಿಂಗ್ ರೇ ಎಂಬ ಜಲಚರ ತನ್ನ ವಿಷಯುಕ್ತ ಕೊಂಡಿಯಿಂದ ಅವನ ವಕ್ಷಸ್ಥಲವನ್ನು ಪರಚುವುದರೊಂದಿಗೆ, ವನ್ಯಜೀವಿಗಳ ಸಂರಕ್ಷಣೆಯಲ್ಲಿ ಒಂದು ರಮ್ಯ ಅಧ್ಯಾಯ ಕೊನೆಯಾಯಿತು. ನೀರಲ್ಲಿ ಪ್ರಾಣಬಿಟ್ಟ ಅವನ ಮರಣ ಇಡೀ ವಿಶ್ವವನ್ನು ಶೋಕದ ಕಡಲ್ಲಿ ಮುಳುಗಿಸಿತು. ‘ಸಾಗರದ ಮಾರಣಾಂತಿಕ ಎಂಬ ಸಾಕ್ಷ್ಯಚಿತ್ರ ಮಾಡುತ್ತಿದ್ದವ ಅದರಲ್ಲೇ ಕೊನೆಯಾದದ್ದು ವಿಪರ್ಯಾಸ!   

ಆದರೆ ಸ್ಟೀವ್ ಅಜರಾಮರ. ಅವನ ಸ್ಮರಣಾರ್ಥ ಹೆಸರಿಡಲಾದ  ಪಾರ್ಕ್, ರಸ್ತೆ, ûೂಗಳು ಅನೇಕಾನೇಕ. ಅವನ ಅಭಿಮಾನಿಗಳಂತೂ ಕೋಟಿ ಕೋಟಿ! ಕ್ಷುದ್ರಗ್ರಹವೊಂದಕ್ಕೆ ಅವನ ಹೆಸರಿಟ್ಟ ಮೇಲೆ ಅವನ ಖ್ಯಾತಿ ಖಗೋಳ ತಲುಪಿತು. ಒಂದು ಹಡಗಿಗೆ ಮಾತ್ರವಲ್ಲ ಒಂದು ಬಸವನಹುಳುವಿನ ಪ್ರಭೇದಕ್ಕೂ ಅವನದ್ದೇ ಹೆಸರು. ದೇವರ ಪಾದ ಸೇರಿದ ಅವನು ಸರ್ವಂತರ್ಯಾಮಿಯಾಗಿ ಹೋದ.

ವಿಶ್ವದಾದ್ಯಂತ ನವೆಂಬರ್ 15ನ್ನುಸ್ಟೀವ್ ಇರ್ವಿನ್ ದಿನ ಎಂದು ಆಚರಿಸುತ್ತಾರಾದರೂ, ಅದು ಅವನು ಮೆಚ್ಚಿದ್ದ ಆಮೆಯೊಂದರ ಜನ್ಮದಿನ, ಅವನದ್ದಲ್ಲ!

ತಮಗೂ ಸದಾ ತಮ್ಮೊಂದಿಗಿರುವ ಪ್ರಾಣಿಗಳಿಗೂ ಮಾರಕವಾದೀತೆಂದು ವೆಡ್ಡಿಂಗ್ ರಿಂಗ್ ಧರಿಸದೇ ಇರುತ್ತಿದ್ದ ದಂಪತಿ, ಇನ್ನೂ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದಿದ್ದರೆ, ಇಡೀ ಜೀವ ಸಂಕುಲಕ್ಕೆ ಆದ ನಷ್ಟವನ್ನು ತಡೆಯಬಹುದಿತ್ತೇನೋ?

ರಂಜನೆ, ಭಂಜನೆ ಪ್ರಕೃತಿಗೆ ರೂಢಿಗತ.            

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...