Skip to main content

 

  ಪರಿಯ ಸೊಬಗು ಇನ್ನಾವ ಬಸವನಹುಳುವಿನಲ್ಲಿದೆ?

 

ರೂಪವೇ ಸರ್ವಸ್ವವಲ್ಲ. ಅದುವೇ ಮುಖ್ಯವಲ್ಲ. ಸೌಂದರ್ಯದ ಆಕರ್ಷಣೆ ಕ್ಷಣಿಕ. ಗುಣ, ಸ್ವಭಾವ, ನಡತೆ, ಪ್ರತಿಭೆ ಇವುಗಳೆದುರು ಬಾಹ್ಯ ಸೌಂದರ್ಯ ಗೌಣವೆನಿಸುತ್ತದೆ.

ಇವೆಲ್ಲಾ ತಿಳಿದಿದ್ದರೂ ರೂಪಕ್ಕೆ ಮರುಳಾಗದವರು ವಿರಳ. ಗಲ್ಲಿ ಗಲ್ಲಿಗಳಲ್ಲೂ ತಲೆಯೆತ್ತಿರುವ ಬ್ಯೂಟಿ ಪಾರ್ಲರ್ಗಳು ಇದಕ್ಕೆ ಒಂದು ಉತ್ತಮ ಸಾಕ್ಷಿ. ಸೌಂದರ್ಯದ ಮೋಹಪಾಶ ಋಷಿ, ಮುನಿಗಳನ್ನೂ ಬಿಟ್ಟಿಲ್ಲ. ಮೊದಲ ನೋಟದಲ್ಲೇ ಮೊಳಕೆಯೊಡೆಯುವ ತರುಣ ತರುಣಿಯರ ನಡುವಿನ ಪ್ರೇಮ ಬಾಹ್ಯ ಸೌಂದರ್ಯದ ಕೈವಾಡ. ‘ಪೆಹಲಾ ನಶ ಇಳಿದು ವಾಸ್ತವ ಸ್ಪಷ್ಟವಾದಾಗ ಪ್ರೇಮದ ಸಮಾಧಿಯಾಗಿರುತ್ತದೆ. ಆದರೆ ಮಧುರ ಅನುಭವ ಜೀವನಪೂರ್ತಿ ಚೇತೋಹಾರಿಯಾಗಿ ಕಾಡುತ್ತಿರುತ್ತದೆ, ಮನವನು ಉಲ್ಲಾಸಗೊಳಿಸುತ್ತದೆ. ರೂಪ, ಲಾವಣ್ಯದ ಕರಾಮತ್ತು ಅದು.           

    ಸೌಂದರ್ಯಾನುಭೂತಿಗೆ ಏನೋ ಒಂದು ಉದ್ದೇಶ ಇದೆ. ಪ್ರಕೃತಿದತ್ತವಾದ ಹೂವು, ಪಕ್ಷಿ, ಪತಂಗ, ಮಳೆಬಿಲ್ಲುಗಳ ವರ್ಣಸಂಯೋಜನೆ, ವಿನ್ಯಾಸ, ಚಿತ್ತಾರಗಳಿಂದ ಸಮ್ಮೋಹಗೊಳ್ಳದಿರುವುದು ಅಸಾಧ್ಯ. ಪವಾಡವೇ ಇರಬೇಕು, ದೇವರ ಸ್ವಂತ ನಾಡೆಂದು ಕರೆÀಯಲಾಗುವ, ಪ್ರಕೃತಿ ತುಂಬು ಹೃದಯದಿಂದ ಹರಸಿದ ಕೇರಳದಲ್ಲಿ ಜನಿಸಿದ ಆದಿ ಶಂಕರಾಚಾರ್ಯರ ಸೌಂದರ್ಯ ಲಹರಿಗೆ ಪ್ರೇರಣೆ. ಸೌಂದರ್ಯ ಲಹರಿಯನ್ನು ಶ್ರೀವಿದ್ಯಾ ಉಪಾಸನೆಯ ಸಾರ ಎಂದು ಬಗೆಯಲಾಗುತ್ತದೆ. ಹೀಗಾಗಿ ಸೌಂದರ್ಯ ಅನ್ನುವುದನ್ನು ತೀರಾ ಕ್ಷುಲ್ಲಕ ವಿಷಯವೆಂದು ತಳ್ಳಿ ಹಾಕುವಂತಿಲ್ಲ. ಅದು ಅಧ್ಯಾತ್ಮಕ್ಕೂ ಸೋಪಾನವಾಗಬಲ್ಲುದು.

ಸೌಂದರ್ಯವರ್ಧಕ ಉದ್ಯಮ ಕೋಟಿಗಟ್ಟಲೆ ಬೆಲೆಯುಳ್ಳದ್ದು. ಸೌಂದರ್ಯ ಅನ್ನುವುದು ನಮ್ಮ ಪಾಲಿಗೆ ಏನೇ ಆಗಿರಲಿ, ಸೌಂದರ್ಯವರ್ಧಕ ಉದ್ಯಮದ ಜೀವಾಳ ನಮ್ಮ ಸೌಂದರ್ಯ ಪ್ರಜ್ಞೆ. ಅದನ್ನು ಜೀವಂತವಾಗಿಡುವುದು, ಕೆರಳಿಸುವುದು ಅವರ ದಂಧೆಯ ಒಂದು ಭಾಗ. ವಿಪರ್ಯಾಸವೆಂದರೆ ಅವರ ಹುನ್ನಾರಗಳು ಸೌಂದರ್ಯ ಅಂದರೆನೇ ರೇಜಿಗೆ ಹುಟ್ಟಿಸುವಷ್ಟು ವ್ಯತಿರಿಕ್ತ ಪರಿಣಾಮ ಬೀರುವುದು.

  ಸೌಂದರ್ಯ ಸ್ಪರ್ಧೆಗಳಲ್ಲಿ ಉದ್ಯಮಗಳÀ ಹಿತಾಸಕ್ತಿ ಅಡಗಿದೆ ಎಂಬುದು ಸುಸ್ಪಷ್ಟ. ಅವುಗಳ ಸ್ಪೋನ್ಸರ್ ಗೆ, ಅವುಗಳ ಸ್ಪರ್ಧಾಳುಗಳು ತಮ್ಮ ಸಿದ್ಧತೆಗೆ ಸುರಿಯುವ ಹಣಕ್ಕೆ ಪಾರವೇ ಇಲ್ಲ. ‘ಮಿಸ್ ಇಂಡಿಯಾವೂ ಸೇರಿ ಪ್ರತಿ ವರ್ಷ ವಿಶ್ವದಾದ್ಯಂತ ನೂರಾರು ಸೌಂದರ್ಯ ಸ್ಪರ್ಧೆಗಳು ಜರಗುತ್ತವೆಯಾದರೂ, ಅವುಗಳಲ್ಲಿ ಅತಿ ಪ್ರತಿಷ್ಠೆಯವುಬಿಗ ಫೋರ್ ಎಂದು ಕರೆಸಿಕೊಳ್ಳುವ  ಮಿಸ್  ವರ್ಲ್ಡ್, ಮಿಸ್   ಯೂನಿವರ್ಸ್ , ಮಿಸ್ ಇಂಟರ್ ನ್ಯಾಷನಲ್ ಹಾಗೂ ಮಿಸ್ ಅರ್ಥ್. ಆಂದ ಹಾಗೆ ಸೌಂದರ್ಯ ಸ್ಪರ್ಧೆಗಳಲ್ಲಿ ಪುರುಷರಿಗೆ ಆದ್ಯತೆ ಇಲ್ಲ, ಸೀಮಿತ ಅವಕಾಶ ಅಷ್ಟೆ!

ಸೌಂದರ್ಯ ಮೀಮಾಂಸೆಯಿಂದ ಪ್ರಾಣಿಗಳನ್ನೂ ಬಾಕಿ ಮಾಡಿಲ್ಲ ಮಾನವ. ಡಾಗ್ ಶೋನಿಂದ ಹಿಡಿದು ಒಂಟೆಗಳ ಸೌಂದರ್ಯ ಸ್ಪರ್ಧೆಗಳು ಎಲ್ಲಡೆ ಜರಗುತ್ತವೆ. ಅಚ್ಚರಿಯ ಸಂಗತಿಯೆಂದರೆ ಇಲ್ಲೊಂದು ಬಸವನ ಹುಳು ಜರ್ಮನ್ ಕೆಲವು ಪ್ರಕೃತಿ ಸಂಶೋಧನೆ, ಜೀವವೈವಿಧ್ಯ ಹಾಗೂ ಮೃದ್ವಂಗಿ ಸಂಶೋಧನೆಗೆ ಸಂಬಂಧಿಸಿದ ಸಂಘ ಸಂಸ್ಥೆಗಳು ಒಟ್ಟಾಗಿ ಆಯೋಜಿಸಿದಮಲಾಸ್ಕ್ ಆಫ್ ಯೀಯರ್ (ವರ್ಷದ ಮೃದ್ವಂಗಿ) ಸ್ಪರ್ಧೆಯಲ್ಲಿ, ಸಾರ್ವಜನಿಕರು ಹಾಕಿದ ವೋಟಿನ ಬಲದಿಂದ ಪ್ರಥಮ ಬಹುಮಾನ ಪಡೆದಿರುವುದು.

ಸುಮಾರು 500 ದಶಲಕ್ಷ ವರ್ಷಗಳ ಹಿಂದೆ ವಿಕಾಸಗೊಂಡಿತು ಎಂದು ಬಗೆಯಲಾಗುವ ಪ್ರಭೇದ ತನ್ನ ಪ್ರೇಮ ಬಾಣ (ಲವ್ ಡಾರ್ಟ್-ಸಮಾಗಮದ ಸಂದರ್ಭದಲ್ಲಿ ಗಂಡು ಹೆಣ್ಣು ಪರಸ್ಪರ ಎಸೆಯುವ ಬಾಣದಂಥ ಅಸ್ತ್ರ)ಕ್ಕೆ ಹೆಸರುವಾಸಿ. ಕ್ಯಾಬಾದಲ್ಲಿ ಮಾತ್ರ ಕಂಡುಬರುವ, ‘ಪೋಲಿಮಿಟ ಪಿಕ್ಟ(ಪಿ. ಪಿಕ್ಟ) ಹೆಸರಿನ ಬಸವನ ಹುಳುವಿಗೆ ಅದರ ಮೇಲಿನ ವರ್ಣಮಯ ಚಿತ್ತಾರದ ಚಿಪ್ಪಿ(ಶಂಖ)ನಿಂದಾಗಿ ಎಲ್ಲೆಲ್ಲೂ ಭಾರೀ ಬೇಡಿಕೆ. ಆಭರಣವಾಗಿ ಬೆಲೆಬಾಳುವುದರಿಂದ ಅದರ ಶಂಖವೇ ಅದಕ್ಕೆ ಮುಳುವಾಗಿದೆ, ಅದು ನಶಿಸಿಹೋಗುವ ಸಂತತಿಗೆ ಸೇರ್ಪಡೆಯಾಗಿದೆ.

ಮನುಕುಲಕ್ಕೆ ಅರಿವಿಗೆ ಬಂದ ಸುಮಾರು 1,20,000 ದಷ್ಟು ಮೃದ್ವಂಗಿಗಳ ಪ್ರಭೇದದಲ್ಲಿ, ಕೇವಲ ಕೆಲವನ್ನು ಮಾತ್ರ ಅಧ್ಯಯನ ಮಾಡಲಾಗಿದೆಯಂತೆ. ವಿಜ್ಞಾನಿಗಳು ಈಗ ಪಿ. ಪಿಕ್ಟ ಬಸವನಹುಳುವಿನÀ ಜಿನೋಮ್ ಸೀಕ್ವೆನ್ಸಿಂಗ್ ನಡೆಸುತ್ತಿದ್ದಾರೆ.

ಕಳೆದ ಬಾರಿ ಇದೇವರ್ಷದ ಮೃದ್ವಂಗಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದದ್ದು ಒಂದು ಅಕ್ಟೋಪಸ್. ತನ್ನ ಬೇಟೆಯನ್ನು ಕಚ್ಚಿಹಿಡಿದು ವಿಷವನ್ನು ಅದರೊಳಗೆ ಸ್ರವಿಸುವ ಪ್ರಾಣಿ ಅದು. ಬಾರಿ ಗೆದ್ದದ್ದು ಪ್ರೇಮಬಾಣ ಪ್ರವೀಣ!

ಸೌಂದರ್ಯ ನೋಡುಗರ ಕಣ್ಣಲ್ಲಿ ಅಡಗಿದೆ ಅನ್ನುತ್ತಾರೆ ಬಲ್ಲವರು. ಜಿರಲೆ, ಕಾಗೆಗಳಿಗೆ, ಇಲಿಗಳಿಗೆ ಇಂಥಾ ಸ್ಪರ್ಧೆಯ ಭಾಗ್ಯ ಎಂದಾದರೂ ಪ್ರಾಪ್ತವಾದೀತೆ?

Comments

Popular posts from this blog

  ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್‌ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು     ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್‌ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್‌ , ಹಂಗೇರಿ ದೇಶದ ಏರ್ನೋ ರೂಬಿಕ್‌   ( Ernő Rubik   ) ಅನ್ನುವ ಶಿಲ್ಪಿ ಹಾಗೂ   ವಾಸ್ತುಶಿಲ್ಪದ ಪ್ರೊಫೆಸರ್‌ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್‌ ಕ್ಯೂಬ್‌, ಸ್ಪೀಡ್‌ ಕ್ಯೂಬ್‌, ಪಜ್ಲ್‌ ಕ್ಯೂಬ್,‌ ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್‌   ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು   ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
  ಛಾಯಾಚಿತ್ರ ಒಂದು, ಸಂಚಲನಗಳು ಹತ್ತು ಹಲವು   ಮೊಬೈಲ್‌, ಸಾಮಾಜಿಕ ಜಾಲತಾಣ ಬಿಡಿ; ಇಂಟರ್ನೆಟ್ ಕೂಡಾ ಅಂಬೆಗಾಲಿಡುತ್ತಿದ್ದ ತೊಂಭತ್ತನೇ ದಶಕದ ಕಾಲವದು. ಆದಾಗ್ಯೂ   ಅದೊಂದು ಛಾಯಾಚಿತ್ರ     ಅಂದು ಸೃಷ್ಟಿಸಿದ ಸಂಚಲನ, ಎಬ್ಬಿಸಿದ ಆಕ್ರೋಶ ಮತ್ತು ತಲ್ಲಣಗಳ ತೀವ್ರತೆ- ನಾವು ಇಂದು ವೈರಲ್‌ ಎಂದು ಏನನ್ನು ಕರೆಯುತ್ತೇವೆಯೋ- ಅದಕ್ಕೆ ಸಮಾನ.   ಸುಡುವ ಕ್ಷಾಮಕ್ಕೆ ತುತ್ತಾದ ಸುಡಾನ್‌   ಅಂತಃಕಲಹ ಅನ್ನುವುದು ಆಫ್ರಿಕಾ ಖಂಡದ ದೇಶಗಳ ಹಣೆಬರಹ. ಅಂದಮೇಲೆ, ಸುಡಾನ್‌ ನಂತಹಾ ಆಫ್ರಿಕನ್ ದೇಶವನ್ನು ಅದು ಕಾಡದೆ ಇರುತ್ತದೆಯೇ? ಆದರೆ   ಒಳಜಗಳ ಫಲದಿಂದ ಭೀಕರ ಕ್ಷಾಮಕ್ಕೆ ತುತ್ತಾದದ್ದು ಸುಡಾನ್‌ನ ಘೋರ ದುರಂತ. ಆಫ್ರಿಕಾದ ಈಶಾನ್ಯದಲ್ಲಿರುವ ಸುಡಾನ್ ಗೆ   ಸಾಂಸ್ಕೃತಿಕವಾಗಿ ಶತಶತಮಾನಗಳ ಸಮೃದ್ಧ ಪರಂಪರೆಯಿದೆ. ಇದು ಕತ್ತಲೆಯ ಖಂಡದ ಬೃಹತ್‌ ರಾಷ್ಟ್ರಗಳಲ್ಲಿ ಒಂದು. ಹೆಚ್ಚುಕಮ್ಮಿ ಕೃಷಿಯೇ ಆರ್ಥಿಕತೆಯ ಮೂಲವಾಗಿರುವ ಈ ದೇಶ ಬಂಜರು, ಅರೆ ಬಂಜರು ಭೂಮಿ ಮತ್ತು ಹುಲ್ಲುಗಾವಲುಗಳಿಂದ ತುಂಬಿದ್ದು, ತೈಲ ಮತ್ತು ಖನಿಜಗಳಿಗೆ ಇಲ್ಲಿ ಕೊರತೆಯೇನೂ ಇಲ್ಲ.   ಬ್ರಿಟನ್‌ ಹಾಗೂ ಈಜಿಪ್ಟ್‌ ದೇಶಗಳು ಜಂಟಿಯಾಗಿ ಆಳುತ್ತಿದ್ದ ಈ ದೇಶ 1956 ರಲ್ಲಿ ಸ್ವತಂತ್ರವಾಯಿತು. ಆ   ದರೆ ವಿವಿಧ ಸಂಸ್ಕೃತಿ, ಭಾಷೆ ಹಾಗೂ ಜನಾಂಗಗಳ ತಾಣವಾಗಿರುವ ಸುಡಾನ್‌ನ ಪಾಲಿಗೆ ರಾಜಕೀಯ ಅಸ್ಥಿರತೆ, ಸೇನಾಡಳಿತ ಹ...
    ಒಂದು ಅಜ್ಜಿ ಕಥೆ “ ಬಡಗಿ ಬೇಸಾಯ ಕರ್ಮಿಗರೇನು ಯೋಗಿಗಳೊ ? ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ಬಿಡುವಿರದು ಬಣಗು ಚಿಂತೆಗೆ , ಬುತ್ತಿ ಹಂಗಿರದು ಕಡಿದಲ್ಲವರ್ಗೆ ಬಾಳ್ ” - ಮಂಕು ತಿಮ್ಮ     ಬಸವನ ಗುಡಿಯ ‘ ಮಂಕು ತಿಮ್ಮ ’ ನ ( ಡಿವಿಜಿ ) ರಸ್ತೆಯ ಹೋಟೆಲ್ ಒಂದರಿಂದ ತಿಂಡಿ ಕಟ್ಟಿಸಿಕೊಂಡು ರಸ್ತೆಗಿಳಿದಾಗ ಸಮಯ ರಾತ್ರಿ ಸುಮಾರು ಎಂಟೂವರೆ ಗಂಟೆ . ಕೆಲವು ಅಂಗಡಿಗಳು ಕದವಿಕ್ಕುವ ಸಮಯವದು . ಸಂಬಳದಾರರು , ದಿನಕೂಲಿಗೆ ದುಡಿಯುವವರು , ‘ ಟೈಮ್ ಪಾಸ್ ಮಾಡುವುದು ಹೇಗೆ ?’ ಎಂಬ ಗುರುತರ ಸಮಸ್ಯೆಯಲ್ಲಿ ಸಿಲುಕಿದವರು , ಎಂತೆಂತವರು ರಸ್ತೆಗೆ ಇಳಿದಿದ್ದರೂ ತಮ್ಮತಮ್ಮ ಮನೆಗ ಳ ತ್ತ À ಮುಖಮಾಡುವ ಹೊತ್ತು . ‘ ತಡ ಮಾಡಬಾರದು ’ ಎಂದು ಲಗುಬಗೆಯಿಂದ ಹೊರಟ ನನ್ನನ್ನು , ಮೊದಲೇ ನನ್ನ ಕಣ್ಣಿಗೆ ಬಿದ್ದಿತ್ತಾದರೂ ನಾನು ಕಡೆಗಣಿಸಿದ , ಆದರೆ ಸುಪ್ತಮನದಲ್ಲಿ ಉಳಿದುಕೊಂಡ ಒಂದು ಸ್ತಬ್ಧ ಚಿತ್ರ , ಪ್ರಜ್ಞೆಯನ್ನು ಪ್ರವೇಶಿಸಿ ಕಾಡಲಾರಂಭಿಸಿತು . ಹೆಜ್ಜೆಗಳು ನಿಧಾನವಾದವು . ಆ ಹೋಟೆಲ್ ‍ ನ ಹೊರಗಡೆ ರಸ್ತೆಯ ಬದಿಯಲ್ಲಿ ಒಂದು ಜೀವ , ಸಮಯದ ಗೊಡವೆಯೇ ಇಲ್ಲದೆ ಹೂವ ಮಾರಾಟ ಮಾಡುತ್ತಿತ್ತು . ಆಕೆ ಸುಮಾರು ಎಂಭತ್ತರ ಆಸುಪಾಸಿನ ತರುಣಿ . ಕೂಲಿಂಗ್ ಗ್ಲಾಸ್ ಬೇರೆ ಧರಿಸಿದ್ದಾಳೆ . ಆ ಹೊತ್ತಲ್ಲಿ , ಇಳಿವಯಸ್ಸಿನಲ...