ಅಮ್ಮಾ,
ಹೆಡೆದೆಯೇಕೆ ನೀನೆನ್ನ
ಹೊರೆಯೆಂದುಕೊಂಡೇ?
ನೊಂದುಕೊಂಡೇ ನೋವನುಂಡೆ
ಹೆಡೆದೊಡನೆ ಅತ್ತವನ ಕಂಡು ಆನಂದಗೊಂಡೇ?
ಅಷ್ಟೊಂದು ನೋಯಿಸಿ
ಹೊರಬರಬೇಕೆಂಬ ಹಟ
ನನಗಂತೂ ಇರಲಿಲ್ಲ
ನೀನು ಕೇಳಬೇಕಲ್ಲ!
ಕಣ್ಣುಕುಕ್ಕುವ ಈ ನಿತ್ಯ ನರಕ ಬೆಳಕಿಗಿಂತ
ಕಣ್ಣು ಮುಚ್ಚಿದಂತಿರುವ ನಿನ್ನೊಡಲ ಕತ್ತಲು
ಆಪ್ಯಾಯಮಾನವಾಗಿತ್ತು
ಅಲ್ಲೇ ಬಾಳು ಸವೆಸುವ ಆಸೆಯಿತ್ತು
ಅದಕಾಗಿ ಅತ್ತೆ
ನೀನಾದರೋ ನೋವನೆಲ್ಲ ಮರೆತೆ
ಹೆಡೆದೆಯೇಕೆ ನೀನೆನ್ನ
ಹೊರೆಯೆಂದುಕೊಂಡೇ?
ನೊಂದುಕೊಂಡೇ ನೋವನುಂಡೆ
ಹೆಡೆದೊಡನೆ ಅತ್ತವನ ಕಂಡು ಆನಂದಗೊಂಡೇ?
ಅಷ್ಟೊಂದು ನೋಯಿಸಿ
ಹೊರಬರಬೇಕೆಂಬ ಹಟ
ನನಗಂತೂ ಇರಲಿಲ್ಲ
ನೀನು ಕೇಳಬೇಕಲ್ಲ!
ಕಣ್ಣುಕುಕ್ಕುವ ಈ ನಿತ್ಯ ನರಕ ಬೆಳಕಿಗಿಂತ
ಕಣ್ಣು ಮುಚ್ಚಿದಂತಿರುವ ನಿನ್ನೊಡಲ ಕತ್ತಲು
ಆಪ್ಯಾಯಮಾನವಾಗಿತ್ತು
ಅಲ್ಲೇ ಬಾಳು ಸವೆಸುವ ಆಸೆಯಿತ್ತು
ಅದಕಾಗಿ ಅತ್ತೆ
ನೀನಾದರೋ ನೋವನೆಲ್ಲ ಮರೆತೆ
ಯಾಕೆ ಕಡಿಯಲು ಬಿಟ್ಟೆ
ಹೊಕ್ಕುಳ ಬಳ್ಳಿ?
ಅಗಲುವುದು ಅಭ್ಯಾಸವಾಯಿತು
ಅಲ್ಲೇ ಮೊದಲಲ್ಲಿ
ಹೊಕ್ಕುಳ ಬಳ್ಳಿ?
ಅಗಲುವುದು ಅಭ್ಯಾಸವಾಯಿತು
ಅಲ್ಲೇ ಮೊದಲಲ್ಲಿ
Comments
Post a Comment