ಹುಲಿಗಳ ಸಂಖ್ಯೆ ಧಾರಾಳವಾಗಿದ್ದಾಗ ಅವುಗಳನ್ನು ಬೇಟೆಯಾಡಿ ಕೊಲ್ಲುವುದು ತಪ್ಪು ಎಂದು ಮನುಷ್ಯನಿಗೆ ಅನಿಸಲೇ ಇಲ್ಲ. ಅಷ್ಟೇಕೆ, ಹುಲಿಯನ್ನು ಬೇಟೆಯಾಡಿದವರ ಮೆರವಣಿಗೆ ಮಾಡಿ ಸಂಭ್ರಮ ಪಡುತ್ತಿದ್ದರು. ಹುಲಿಗಳ ಸಂಖ್ಯೆ ಕಡಿಮೆಯಾದಾಗ, ಅವುಗಳನ್ನು ಬೇಟೆಯಾಡಿದವರಿಗೆ ಶಿಕ್ಷೆ ನೀಡುವ ಕಾನೂನು ಜಾರಿಗೊಳಿಸಲಾಯಿತು. ಬೇಟೆಯಾಡಿದವರನ್ನು ಕೊಂಡಾಡುವಾಗ, . ಬೇಟೆಯಾಡಿದವರನ್ನು ಜೈಲಿಗೆ ತಳ್ಳುವಾಗ-ಹುಲಿಗೆ ಹೇಗೆ ಅನಿಸುತ್ತದೆ ಎಂದು ನಾವು ಯೋಚಿಸಲಿಲ್ಲ. ಬೇಟೆಯಾಡುವ ಮುನ್ನ ಹುಲಿಯ ಬಳಿ ಕೇಳಿದರೆ ಅದು ' ಪರವಾಗಿಲ್ಲ. ನನ್ನನ್ನು ಕೊಂದು ಬಿಡಿ. ನಾವು ಸಾಕಷ್ಟು ಸಂಖ್ಯೆಯಲ್ಲಿದ್ದೇವೆ' ಎಂದು ಹೇಳೀತೆ?
ಅರ್ಧ ಶತಕ ಬಾರಿಸಿದ, ವಿಶ್ವವ್ಯಾಪಿ ಘನಾಕೃತಿಯ ವೃತ್ತಾಂತ -ಆಗಸ್ಟ್ 2025ರ ತುಷಾರ ದಲ್ಲಿ ಪ್ರಕಟವಾಗಿತ್ತು ನಿಂತಲ್ಲಿ, ಕೂತಲ್ಲಿ, ಎಲ್ಲೆಂದರಲ್ಲಿ ಕೈನಲ್ಲಿ ಮೊಬೈಲ್ ಹಿಡಿದುಕೊಂಡಿರುವ ಇಂದಿನ ಪೀಳಿಗೆಗೆ, ‘ಸರಿಸುಮಾರು ಐವತ್ತು ವರ್ಷಗಳ ಹಿಂದೆ ಕೆಲವರ ಎರಡೂ ಕೈಗಳಲ್ಲಿ ವಕ್ಕರಿಸಿದ್ದ ಒಂದು ಜಡ ಘನಾಕೃತಿ, ಇದೇ ರೀತಿ ಅವರ ಸಮಯವನ್ನು, ಸಂಯಮವನ್ನು ಕಸಿದುಕೊಳ್ಳುತ್ತಿತ್ತಾದರೂ ಅವರ ಮಿದುಳಿಗೆ ಕಸರತ್ತು ನೀಡುತ್ತಿತ್ತು ’- ಎಂದರೆ ಅಚ್ಚರಿಯಾಗಬಹುದು! ಆ ಕಾಲದಲ್ಲಿ ಅಂಥದೊಂದು ಗೀಳಿಗೆ ಕಾರಣವಾದ ಆ ಬಣ್ಣ ಬಣ್ಣದ ಕ್ಯೂಬ್ , ಹಂಗೇರಿ ದೇಶದ ಏರ್ನೋ ರೂಬಿಕ್ ( Ernő Rubik ) ಅನ್ನುವ ಶಿಲ್ಪಿ ಹಾಗೂ ವಾಸ್ತುಶಿಲ್ಪದ ಪ್ರೊಫೆಸರ್ ಒಬ್ಬನ ಕಲ್ಪನೆಯ ಕೂಸು. ಮ್ಯಾಜಿಕ್ ಕ್ಯೂಬ್, ಸ್ಪೀಡ್ ಕ್ಯೂಬ್, ಪಜ್ಲ್ ಕ್ಯೂಬ್, ಬರೀ ಕ್ಯೂಬ್ ಹೀಗೆ ಹಲವು ಹೆಸರುಗಳುಳ್ಳ ಈ ಕೌತುಕ, ಅದರ ಕರ್ತೃವಿನ ಕಲ್ಪನೆಯನ್ನೂ ಮೀರಿ ಜನಪ್ರಿಯವಾದದ್ದು, ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಅಷ್ಟಕ್ಕೂ ಏರ್ನೋ ರೂಬಿಕ್ ಆವಿಷ್ಕರಿಸಿದ್ದು ಒಂದು ಒಗಟಿನಾಟಿಕೆಯನ್ನು ಅಲ್ಲವೇ ಅಲ್ಲ! ತನ್ನವಿದ್ಯಾರ್ಥಿಗಳಿಗೆ, ಮೂರು ಆಯಾಮಗಳುಳ್ಳ ಆಕೃತಿಗಳ ಕುರಿತು ವಿವರಣೆ ನೀಡಲು ಅವನಿಗೆ ಒಂದು ಸಲಕರಣೆ ಬೇಕಿತ್ತು. ಅವನು ಈ ಕ್ಯೂಬ್ ನ್ನು ಆವಿಷ್ಕರಿಸಲು ಕಾರಣ ಇದುವೇ ಎಂಬ ಮಾತು ಜನಜನಿತವಾಗಿದೆ. ಆದರೆ ಅದು ಹಾ...
Comments
Post a Comment