Skip to main content

Posts

Showing posts from July, 2023
      ಕಣ ಕಣಾ. . .  ಮೊದಲೊಂದು ಕಣ, ಕೊನೆಗೊಂದು ಹೆಣ ಸಾಗುವುದು ನಡುವೆ ಜೀವನವು ಕಣಾ ಪಡೆದು ಬೆಳೆದು ಕೋಟಿ ಜೀವ ಕಣ  ಕಣದಿಂದಲೇ ಜನನ, ಕಣದಿಂದಲೇ ಹನನ ಯೋಗ ರೋಗಗಳೆರಡೂ ಕಣದ ಕಾರಣ ಕಣಾ ವ್ರಣವಾಗದು ಗುಣ ಇರದಿರೆ ಕಣದ ಋಣ ಜೀವಕಣದ ಕಥೆ ಬರೆಯುವುದು ಜೀನು ಕಣಾ  ಎಂದೋ ಸ್ಫೋಟಿಸಿತು ಒಂದೇ ಒಂದು ಕಣ ಇಂದೋ ಅಗಣಿತ ತಾರಾಗಣ ಇಲ್ಲಿ ನಾನಾರು ನೀನಾರು  ಬಿರಿದುದುರಿ ಹೋಗುವ  ಬರಿಯೊಂದು ಕಣ ಕಣಾ ಕಾಣಲಾರದ ಕಣಗಳೆದುರು ಸೋಲುವುದು  ನೂರಾನೆಗಳ ಬಲದ ಬಣವು ಕಣಾ ಕಣದ ಚರಣಕೆರಗುವುದು ನಮ್ಮ ಹಣೆಬರಹವು ಕಣಾ  ಕಣಗಳನು ಹೋರಾಡಿ ಮಣಿಸಬಲ್ಲ ರಣ ವಿಕ್ರಮ ಇನ್ನೂ ಹುಟ್ಟಿಲ್ಲ ಕಣಾ ಕಣದ ಗುಣ ನಮ್ಮನು ಬಿಡದು ಕಣಾ ಕಣಗಳಿಗೆ ಲೆಕ್ಕವಿಲ್ಲ ಗಣಗಳಂತೆ ಲಕ್ಷ್ಯವಿಲ್ಲ ಕಣಗಳಿಲ್ಲವಾದರೆ ಜಗವು ಬಣಬಣ  ಕಣಗಳಿಂದಲೇ ಬಾಳು ಝಣ ಝಣ  ಕಣಗಳನು ಕಾಂಬ ತಂತ್ರಜ್ಞಾನ  ಕರಗತವು ಕಣಾ  ಕಣಗಳ ಮರ್ಮವನರಿಯುವ ತತ್ತ್ವಜ್ಞಾನ ಪರಿಮಿತವು ಕಣಾ  ಕಣಗಳೊಳಗಿನ ಒಗ್ಗಟ್ಟು ಮುರಿದ ದಿನ ಜಗವು ಇನ್ನಿಲ್ಲವಾಗುವುದು ಕಣಾ ಇದ್ದರೂ ಇರಲಾರದದು  ಈ ಪರಿಯಲಿ ಕಣಾ ('ತುಷಾರ' , ಜೂನ್ 2023 ರಲ್ಲಿ ಪ್ರಕಟ) 
                         ಸುತ್ತ - ಮುಕ್ತ ಅಂಕಣ                     ಹೊಡೆತ , ಸವೆತ ಸಹಿಸುವ ಭೂಮಾತೆಗೆ ನಮಿಸುತಾ . . .   ಅಂದು ದೈತ್ಯ , ಭೀಭತ್ಸ ಮೃಗಗಳಾದ ಡೈನೋಸಾರ್ ‍ ಗಳು , ತಮ್ಮ ವಿನಾಶದ ಯಾವ ಮುನ್ಸೂಚನೆಯೂ ಇಲ್ಲದೆ ಭೂಲೋಕವನ್ನು ಆಳಿದ್ದವು , ನಮ್ಮ ಹಾಗೆ . 66 ದಶಲಕ್ಷ ವರ್ಷಗಳ ಹಿಂದಿನ ಮಾತು . ಸುಮಾರು 10 ಕಿ ಮೀ ವ್ಯಾಸದಷ್ಟು ಭಾರಿ ಗಾತ್ರದ ಒಂದು ಆಸ್ಟರಾಯ್ಡ್ / ಧೂಮಕೇತು , ಇಂದು ಮೆಕ್ಸಿಕೋ ದೇಶದ್ದೆಂದು ಬಗೆಯಲಾಗುವ ಜಾಗವನ್ನು ಅಪ್ಪಳಿಸಿ ಊಹಾತೀತ ಅನಾಹುತ ಮಾಡುತ್ತದೆ . ಕ್ಷಣಾರ್ಧದಲ್ಲಿ ಪರ್ವತಗಳು ಮೇಲೇಳುತ್ತವೆ . ಅದು ಬಡಿದೆಬ್ಬಿಸಿದ ಸುನಾಮಿಗೆ ಜೀವಸಂಕುಲಗಳು ಆಹುತಿಯಾಗುತ್ತವೆ . ಹೊಡೆತಕ್ಕೆ ಮುನ್ನ ಸಿಡಿದ ಅದರ ಅವಶೇಷಗಳ ಮಳೆ ಬೀಳುತ್ತದೆ . ಜ್ವಾಲಾಮುಖಿಗಳು ಈ ವಿನಾಶಕ್ಕೆ ಕೈಜೋಡಿಸುತ್ತವೆ . ಭಾರಿ ಧೂಳು , ಬೂದಿಯ ಭರಪೂರವನ್ನೆಬ್ಬಿಸಿದ ಆ ಹೊಡೆತ ಭೂಮಿಯನ್ನು ಸುಮಾರು ಎರಡು ವರ್ಷಗಳ ವರೆಗೆ ಕತ್ತಲೆಯಲ್ಲಿರಿಸುತ್ತದೆ , ವಿಪರೀತ ತಂಪಾಗಿರಿಸುತ್ತದೆ . ಡೈನೋಸಾರ್ ಮತ್ತಿತರ ಜೀವಿಗಳು ನಿರ್ನಾಮವಾಗುತ್ತವೆ .   ಆ ಆಸ್ಟರಾಯ್ಡ್...