Skip to main content

Posts

Showing posts from February, 2023
  ಮಂಕು ತಿಮ್ಮನ ರಸ್ತೆ   ನಡೆಯುತ್ತೇನೆ ಮಂಕು ಕವಿದ   ವನ    ಹಾಗೆ ಮಂಕು ತಿಮ್ಮನ ರಸ್ತೆಯಲಿ   ಇದು ಗಾಂಧಿ ಬಜಾರು   ಹಿಂದೆ ಇಲ್ಲಿ ಎದುರಾಗುತ್ತಿದ್ದರು ನಡೆದಾಡುವ ಕಾವ್ಯ ನಿಸಾರರು ಧುತ್ತನೆ ಮತ್ತದೇ ಬೇಜಾರು ಕಳೆಯಲು ಸಂಜೆ ಬರುತಿದ್ದವರು   ಠಾಕು ಠೀಕು ಅದೇ ಕೋಟು ಪ್ಯಾಂಟು ಅವರದ್ದು ಇಂಗ್ಲಿಷು ಕಾವ್ಯ ಸುರಿಸುವ ದಿರಿಸು ನಗು ಬೀರುವ ಕನ್ನಡ ಮನಸು ಗಾಂಧಿ ಬಜಾರು   ಮಾಸದ ಲಾಸ್ಯದ ನಿತ್ಯೋತ್ಸವದ ಕವಿಗೆ ತೆರಳಿದ ಬಾಹ್ಯಲೋಕವೂ   ಅರಳುವ ಕಾವ್ಯಲೋಕವು   ಇನ್ನೂ ಹಿಂದೆ ಶಿಸ್ತಿನಿಂದ ನಿತ್ಯ ನಡೆದು ಬಂದ ಕನ್ನಡದ ಚರಾಸ್ತಿ ಮಾಸ್ತಿಯವರ ಪಾದಸ್ಪರ್ಶಕೆ ಪಾವನವಾದ ಪುಳಕಗೊಂಡ ರಸ್ತೆಯಿದು   ಅವರ ಕೈಗೆ ಕೊಡೆಯ ನಂಟು ಕಂಡ ಕಂಡ ಮಕ್ಕಳಿಗೆ ಕೊಡಲು ಅವರ ಜೇಬಲ್ಲಿ ಪೆಪ್ಪರುಮಿಂಟು   ಅವರ ನಡಿಗೆಯ ಧನ್ಯದೃಶ್ಯ ಕಾಣದವರಿಗೂ ಅಡಿಗಡಿಗೆ ಕಲ್ಪನೆಯಲಿ ಅದು ಬರುವುದುಂಟು   ಅವರು ನಡೆಯದ ದಿನ ರಸ್ತೆಯೂ ಅಳುವುದನ ಕಂಡವರುಂಟು ಗಾಂಧಿ ಸಾಹಿತಿ ಆದಂತೆ ಒಂದು ದಂತ ಕತೆ ಮಾಸ್ತಿ ಅನಿಸುವುದುಂಟು   ಸುಮ್ಮನಲ್ಲ ಅವರು ಹೆಜ್ಜೆಹಾಕಿದ ಬಡಾವಣೆ ಗಾಂಧಿ ಬಜಾರು ಖಾದಿ ...
  ಪ್ರಾಣದಾನ ಮಾಡಿದವನ ಜೀವನಗತಿ ಬದಲಿಸಿದ ಶ್ವಾನ     ಮಾನವನ ಪರಮಾಪ್ತ ಮಿತ್ರ ಶ್ವಾನಗಳ ಲೋಕ , ಮಾನವ ಸಮಾಜದ ಹಾಗೆ ಶ್ರೇಣಿಕೃತ . ಟಿಬೆಟನ್ ಮಾಸ್ಟಿಫ್ ‍ ನಂತಹಾ ಶ್ರೇಷ್ಠ ತಳಿಯ ನಾಯಿಗಳ ಬೆಲೆ ರೂ 18 ಕೋಟಿ . ಅವುಗಳದ್ದು ಸದಾ ರಾಜ / ರಾಣಿ ವೈಭೋಗ . ಸತ್ತರೆ ಅದ್ಧೂರಿ ಅಂತ್ಯ ಕ್ರಿಯೆ . ಹಾಗಿದ್ದಲ್ಲಿ ‘ ಮಾನವ ಜನ್ಮ ಬಲು ದೊಡ್ಡದು ಎಂಬುದಕ್ಕೆ ಏನರ್ಥ ?’ ಅನ್ನಬೇಡಿ . ನಾಯಿಗೆ ಬೆಲೆ ಕಟ್ಟುವುದು ಮಾನವ ತಾನೆ ? ಅಪರಾಧ ಪತ್ತೆಯಲ್ಲಿ ಬಳಸಲಾಗುವ ಶ್ವಾನದಳಕ್ಕೆ ಅದೆಂಥಾ ರಾಜ ಮರ್ಯಾದೆ ! ಅಂಚೆ ಚೀಟಿಯಲ್ಲೂ ರಾರಾಜಿಸುವ ಭಾಗ್ಯ ಪಡೆದಿರುವ ಚುರುಕು , ಚಾಣಾಕ್ಷ , ಬಲಶಾಲಿ , ಪರಮ ನಿಷ್ಠಾವಂತ ,   ನಿಪುಣ ಬೇಟೆ ನಾಯಿ ‘ ಮುಧೋಳ್ ಹೌಂಡ್ ’ ಕನ್ನಡಿಗರ ಹೆಮ್ಮೆ . ಸೇನೆ , ಸಿಆರ್ ಪಿ ಎಫ್ . ಪೊಲೀಸ್ ಇಲಾಖೆ ಇತ್ಯಾದಿಗಳಲ್ಲಿ ‘ ಉದ್ಯೋಗ ’ ಗಿಟ್ಟಿಸಿಕೊಂಡ ಈ ಶ್ರೇಷ್ಠ ತಳಿಯ ಶ್ವಾನವನ್ನು ಮುಧೋಳದ ಸುಮಾರು 750 ಕುಟುಂಬಗಳು ಸಾಕಣಿಕೆ ಮಾಡುತ್ತವೆ . ಆದರೇನಂತೆ ಈ ಅಮೂಲ್ಯ ತಳಿ ನಾಯಿಗಳ ಬೆಲೆ ಏನೆಂಬುದು ಅವುಗಳಿಗೇ ಗೊತ್ತಿಲ್ಲ . ಅಂದ ಹಾಗೆ , ಪ್ರಾಣಿಗಳು ಮಾನವನಿಗೆ ಬೆಲೆ ಕಟ್ಟುವುದಿದ್ದರೆ ಅವುಗಳ ಮಾರುಕಟ್ಟೆಯಲ್ಲಿ ನಮ್ಮ ಬೆಲೆ ಎಷ್ಟಿರಬಹುದು ? ‘ ಹೀಗೇಕೆ ನಿನಗೆ ಏಕಾಂಗಿ ಬದುಕು . . .’ ಹಾಡಿನ ಸಾಲು...