Skip to main content

Posts

Showing posts from May, 2022
  ಮಾರ್ಚ್ 15 ( ರವಿ ಬೆಳಗೆರೆ ಅವರ ಜನ್ಮ ದಿನದಂದು ) 2022 ರ   ' ವಿಶ್ವವಾಣಿ ' ದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಬರೆಹದ ಮೂಲ ಪ್ರತಿ ( ಅನ್ - ಎಡಿಟೆಡ್ ) ಇಲ್ಲಿದೆ . ಇದು ಪ್ರಕಟವಾದದ್ದು ' ಕಡು ದಿಗಂತದಲ್ಲಿ ಬೆಳಕಿನ ಗೆರೆ ಆಗಿದ್ದ ರವಿಯ ಜನ್ಮದಿನದ ಹೊತ್ತಲ್ಲಿ . . .'  ಎಂಬ ಶೀರ್ಷಿಕೆಯಡಿಯಲ್ಲಿ . ಸಂಪಾದಕರು , ಉಪ ಸಂಹಾರದ   ಕೊನೆಯ ವಾಕ್ಯವನ್ನು , ‘ ರ ಬೆ’ ಅವರ ಜನ್ಮ ದಿನಕ್ಕೆ ತಕ್ಕಂತೆ ಬದಲಿಸಿದ್ದರು.        ನಾನು ನೀಡಿದ ಶೀರ್ಷಿಕೆ : ರೈಲ್ವೇ ಹಳಿ ಮೇಲೆ ತಾನಿಟ್ಟ ನಾಣ್ಯ ಜಜ್ಜಿ ಹೋಗಿರುವುದನ್ನು ಕಂಡು ಅವನು ಸಂಭ್ರಮಪಡುತ್ತಿದ್ದ !   ‘ ಹಳದಿ ’ ಪತ್ರಿಕೆಯಿಂದ ಹೆಸರು ಮಾಡಿ ಆ ಹೆಸರಿಗೆ ಒಂದಿಷ್ಟು ಕೆಸರು ಮೆತ್ತಿಸಿಕೊಂಡ , ಅಕ್ಷರ ತಪಸ್ವಿ ರವಿ ಬೆಳಗೆರೆ ಅವರನ್ನು , ‘ ನೀಲಿ ’ ಚಿತ್ರಗಳ ಮೂಲಕ ( ಕು ) ಪ್ರಸಿದ್ಧಳಾದ ಸನ್ನಿ ಲಿಯೋನ್ ಅಂಥವಳಿಗೆ ಅಗ್ನಿ s ಶ್ರೀಧರ್ ಹೋಲಿಸಿದ್ದು - ನೂರಕ್ಕೆ ನೂರು ಸರಿ . ಅಥವಾ ಅಲ್ಲ !   ಏಕೆಂದರೆ ನನಗೆ ಎಷ್ಟೋ ಬಾರಿ ಅನಿಸಿದ್ದಿದೆ -‘ ಈ ಸನ್ನಿ ಲಿಯೋನ್ ಲಕ್ಷಣವಾಗಿ ಸೀರೆ ಉಟ್ಟು ಪೋಸ್ ಕೊಟ್ಟರೆ , ಆಕೆ ನೋಡಲು ( ಮುಖವನ್ನು ಎಂದು ತಿದ್ದಿಕೊಂಡು ಓದುವುದು ) ಎಷ್ಟು ಸುಂದರಿಯಾಗಿ ಕಾಣಿಸಬಹುದು ’ ಎಂದು !...