Skip to main content

Posts

Showing posts from April, 2020
  ಆ ಮಿದುಳಲ್ಲಿ ಅಡಗಿತ್ತೆ ಬ್ರಹ್ಮಾಂಡದ ರಹಸ್ಯ ? ( ‘ ಐನ್ ‍ ಸ್ಟೈನ್ ‍ ನ ಮಿದುಳು ಮತ್ತು ಇತರ ಸಂಗತಿಗಳು ’ ಎಂಬ ತಲೆಬರಹದೊಂದಿಗೆ , ಮಾರ್ಚ್ 2020 ರ ‘ ತುಷಾರ ’ ದಲ್ಲಿ ಪ್ರಕಟವಾದ ನನ್ನ ಲೇಖನದ ಅನ್ ‍ ಎಡಿಟೆಡ್ ಆವೃತ್ತಿ)     ಮಿದುಳು ಅಂದರೇನು ? ಮನುಷ್ಯ ಮಿದುಳಿನ ಮರ್ಮವನ್ನು ಭೆದಿಸುವುದು ಹೇಗೆ ? ಯಾವುದರಿಂದ ? ಮಿದುಳನ್ನು ಮಿದುಳಿನಿಂದಲೇ ಅರಿಯಬೇಕಷ್ಟೆ ! ಒಂದು ವೇಳೆ , ಮಿದುಳನ್ನು ಮೀರಿಸುವ ಕಂಪ್ಯೂಟರ್ ‍ ನ್ನು ಮಾನವ ಆವಿಷ್ಕರಿಸಿದರೂ ಕೂಡಾ ,  ಕೊಟ್ಟ ಕೊನೆಯಲ್ಲಿ ಅದು ಮನುಷ್ಯನ ಸೃಷ್ಟಿ ಅಲ್ಲವೇ ? ಅದು ಮಿದುಳಿನ ರಹಸ್ಯವನ್ನು ಬಯಲು ಮಾಡಿದ್ದೇ ಆದಲ್ಲಿ ,  ಬಯಲಾದ ಆ ರಹಸ್ಯ ವಸ್ತುನಿಷ್ಠವಾಗಿರಲು ಹೇಗೆ ಸಾಧ್ಯ ? ಪರೋಕ್ಷವಾಗಿ , ಅದು ಮಿದುಳನ್ನು ಮಿದುಳು ಅರಿತಂತೆ ಅಲ್ಲವೇ ?  ( ಈ ಲೇಖನದ ಉದ್ದಕ್ಕೂ   ಮಿದುಳು ಎಂಬ ಪದವನ್ನು ‘ ಮನುಷ್ಯನ ಮಿದುಳು ’ ಎಂಬ ಅರ್ಥದಲ್ಲಿ ಬಳಸಲಾಗಿದೆ . ಮಿದುಳು ಹೆಚ್ಚಿನ ಜೀವ ಪ್ರಭೇದಗಳಗೆ ಇವೆ , ಮನುಷ್ಯರಿಗೆ ಮಾತ್ರವಲ್ಲ ಆದುದರಿಂದ ಈ ಒಕ್ಕಣೆ ಮತ್ತು ಮಿದುಳು ಇಲ್ಲದವರಂತೆ ಬಾಳುವ ಮನುಷ್ಯರೂ ಇದ್ದಾರೆ - ಅಷ್ಟೇಕೆ ಈ ಲೋಕಲ್ಲಿರುವುದು ಅವರದ್ದೇ ಬಾಹುಳ್ಯ ಅನ್ನುವುದು ಬೇರೆ ಮಾತು !) ಮಿದುಳಿನ ಮೇಲೊಂದು ಇಣುಕು ನೋಟ ಮೊದಲಿಗೆ , ಮ...