(ಡಿಸೆಂಬರ್ 11, 2016ರ ‘ಉದಯವಾಣಿ-ಸಾಪ್ತಾಹಿಕ ಸಂಪದ’ದಲ್ಲಿ ಪ್ರಕಟವಾದ ನನ್ನ ಕಥೆ) ವಿಂಟೇಜ್ ಬದುಕು ಓದುವುದು, ಭಾವುಕಳಾಗುವುದು, ಸಿಡಿದೇಳುವುದು, ಅಸಹಕಾಯತೆಗೆ ಮರುಗುವುದು ಬೇರಿನ್ನೇನೂ ಮಾಡಲು ತೋಚದೆ ಬರೆಯುವುದು---ಅಂಥವಳು ಪತ್ರಕರ್ತೆಯಾಗದೆ ಬೇರಿನ್ನೇನು ಮಾಡುವುದು? ಹಾಗಂದುಕೊಳ್ಳುತ್ತಲೇ, ನಡು ನಡುವೆ ಏನೇನೋ ವೃತ್ತಿಯಲ್ಲಿ ತೊಡಗಿ, ಕೊನೆಗೂ ಅಂತರಾಳದ ದನಿಗೆ ಓಗೊಟ್ಟು, ಪತ್ರಕರ್ತೆಯಾದ ಸರ್ವಸ್ವ-ಆ ಮನೆಯ ಗೇಟು ತೆರೆಯುವ ಮುನ್ನ ಗೇಟನ್ನು ಅಲುಗಾಡಿಸಿ ಠಣ ಠಣ ಸದ್ದು ಮಾಡಿ ನಾಯಿ ಕಟ್ಟಿ ಹಾಕಿರುವುದನ್ನು ಖಚಿತಪಡಿಸಿಕೊಳ್ಳಲು ಮರೆಯಲಿಲ್ಲ. ‘ಸದಾ ಎಚ್ಚರವಾಗಿರು.’ ಗುರುಗಳು ಹೇಳಿದ ಪಾಠ. ಅಂಗಳದೊಳಗೆ ಕಾಲಿಡುತ್ತಿದ್ದಂತೆ, ಓಡೋಡಿ ಬಂದ ಸೆಕ್ಯೂರಿಟಿಯವ ಅವಳ ಹೆಸರನ್ನು ತಪ್ಪು ತಪ್ಪಾಗಿ ಹೇಳಿ (ಹೆಚ್ಚಿನವರು ತನ್ನ ಹೆಸರನ್ನು ಏನೇನೋ ಹೇಳಿ ಸರಿಪಡಿಸಿಕೊಳ್ಳುವುದು ಅವಳಿಗೆ ಅಭ್ಯಾಸವಾಗಿ ಹೋಗಿದೆ) ‘ಸಾಹೇಬ್ರು ನಿಮ್ಮನ್ನೇ ವೇಟ್ ಮಾಡ್ತಿದ್ದಾರೆ’ ಅಂದು ತೆರೆದ ಬಾಗಿಲಿನೆಡೆಗೆ ಕೈತೋರಿದ. ಅಲ್ಲಿ ಜುಬ್ಬ ಪೈಜಾಮ ಧರಿಸಿದ ಓರ್ವ ಅರುವತ್ತರ ಆಸುಪಾಸಿನ ವ್ಯಕ್ತಿ ‘ಹಲೋ’ ಅನ್ನುತ್ತಾನೆ---ಎಂದು ಅಂದುಕೊಂ...
I write therefore I am. It is no holds barred. World is the page I crawl on. At the end of the day I want the readers to wonder 'what is in store for us next?' If in the due course I succeed in discovering myself, I would feel gratified.