Skip to main content

Posts

Showing posts from October, 2023
    ಇದು ಸದ್ದಡಗಿದ ರಣಹದ್ದುಗಳ ಕಥೆ ಯಾವ ವೇತನವನ್ನೂ ಪಡೆಯದೆ , ಪ್ರಕೃತಿ ತಮಗೆ ಒದಗಿಸಿದ ಜಾಡಮಾಲಿಯ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪಕ್ಷಿಗಳು ಈ ರಣಹದ್ದುಗಳು . ಪುರಾತನ ವಿಶ್ವದ್ದು , ನೂತನ ವಿಶ್ವದ್ದು ಎಂದು ವಿಂಗಡಿಸಲಾದ ಮತ್ತು 23 ವಿವಿಧ ಜೀವಂತ ಪ್ರಭೇದಗಳಿರುವ , ರಣಹದ್ದುಗಳ ಫೇವರಿಟ್ ಆಹಾರ ಕೊಳೆತ ಮಾಂಸ . ಕೊಳೆತದ್ದನ್ನು ತಿಂದ ಮೇಲೆ ತಲೆ ಸ್ವಚ್ಛವಾಗಿರಬೇಕಲ್ಲ ? ಹೀಗಾಗಿ ರಣಹದ್ದುಗಳದ್ದು ಬಕ್ಕತಲೆ ! ಅವುಗಳ ತಲೆಮೇಲೆ ಗರಿಗಳಿಲ್ಲ . ಅಷ್ಟು ಮಾತ್ರವಲ್ಲ , ವಾತಾವರಣದ ತಾಪಮಾನದ ಏರು ಪೇರಿಗೆ ಹೊಂದಿಕೊಳ್ಳಲು ಅದಕ್ಕೆ ಈ ಬಕ್ಕತಲೆ À ನೆರವಾಗುತ್ತದಂತೆ . ತನ್ನ ಮೇಲೆ ತಾನೇ ಮೂತ್ರ ಮಾಡುವುದು , ಅವು ತಲೆತರಾಂತರದಿಂದ ಕಂಡುಕೊಂಡ ಸರಳ ಕೂಲಿಂಗ್ ತಂತ್ರಜ್ಞಾನ ! ನಿತ್ಯ ಸ್ನಾನ ಮಾಡುವ , ಪ್ರತಿ ಗರಿಯನ್ನೂ ಸ್ವಚ್ಛವಾಗಿಡುವ ಅವುಗಳ ನೈರ್ಮಲ್ಯ ಪ್ರಜ್ಞೆಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು . ಆಹಾರ ದೊರೆತಾಗ , ಸಸ್ತನಿಗಳಲ್ಲಿ ಸಾಮಾನ್ಯವಾಗಿ ಹಠಮಾರಿಗಳಿಗೆ ಮೊದಲ ಆದ್ಯತೆ . ದುರ್ಬಲರ ಸರದಿ ಆಮೇಲೆ . ರಣಹದ್ದುಗಳಲ್ಲಿ ಈ ನಿಯಮ ಉಲ್ಟಾ ಆಗುತ್ತದೆ . ಅಲ್ಲಿ ಹಸಿದವರಿಗೆ ಮೊದಲ ಮಣೆ ! ಅವು ಸಿಕ್ಕಿದ್ದನ್ನು ಹರಿದು ಮುಕ್ಕಿ ಗಬಗಬನೆ ತಿಂದು ಮುಗಿಸುತ್ತವೆ . ಅವುಗಳ , ಅದರಲ್ಲೂ ಮುಖ್ಯವಾಗಿ ಜಿಪ್ಸ್ ಹೆಸರಿನ ತಳ...