Skip to main content

Posts

Showing posts from August, 2023
     ಸುತ್ತ-ಮುಕ್ತ ಅಂಕಣ         ಹೀಗೊಂದು ‘ಒಂಟೆ’ ದನಿ! ಗೊರಸುಗಳುಳ್ಳ ಪ್ರಾಣಿಗಳ ಪೈಕಿ, ಒಂಟೆಗಳು ‘ಸಮಸಂಖ್ಯೆಯ ಕಾಲ್ಬೆರಳುಗಳುಳ್ಳ ಪ್ರಾಣಿ’ ಗಳ ವರ್ಗಕ್ಕೆ ಸೇರುತ್ತವೆ. ಭೂಮಿಯಲ್ಲಿ 94% ನಷ್ಟಿರುವುದು ‘ಅರೇಬಿಯನ್ ಕ್ಯಾಮೆಲ್’ ನಾಮಾಂಕಿತ, ಒಂದು ಡುಬ್ಬದ ಒಂಟೆಗಳಾದರೆ, ಎರಡು ಡುಬ್ಬಗಳುಳ್ಳ ಒಂಟೆಗಳ ಅನುಪಾತ ಕೇವಲ 6%. ಒಂಟೆಗಳ ಎಲ್ಲಾ ಏಳು ಪ್ರಭೇದಗಳನ್ನು ಒಟ್ಟು ಸೇರಿಸಿ ‘ಕ್ಯಾಮೆಲಿಡಾಯೆ’ ಎನ್ನಲಾಗುತ್ತದೆ ಮತ್ತು ಇವುಗಳಲ್ಲಿ ಉಳಿದಿರುವ ಮೂರು ಪ್ರಭೇದಗಳಲ್ಲಿ ಒಂದಂತೂ ಈಗಾಗಲೇ ನಶಿಸಿಹೋಗುತ್ತಿರುವ ಸಂತತಿಗಳ ಪಟ್ಟಿಗೆ ಸೇರಿದೆ. ಮಾಂಸಕ್ಕೆ. ಹಾಲಿಗೆ ಮತ್ತು ಉಣ್ಣೆಗಾಗಿ ಸಾಕಾಣಿಕೆ ಮಾಡುವ ಒಂಟೆಗಳ ಓಟದ ಸ್ಪರ್ಧೆಯೂ ನಡೆಯುತ್ತದೆ. ಆದರೆ 2005ರವರೆಗೆ ಈ ಒಂಟೆ ರೇಸ್ ಹೆಸರಿನಲ್ಲಿ ಒಂಟೆಗಳ ತವರೂರು ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ನಡೆಯುತ್ತಿದ್ದದ್ದು ಮಾತ್ರ ತೀರಾ ಅಮಾನುಷ ಕೃತ್ಯ. ಒಂಟೆಗಳ ರೇಸ್‍ನಲ್ಲಿ ಜಾಕಿಗಳ ಭಾರ ಕಮ್ಮಿಯಾದಷ್ಟೂ, ಅವುಗಳು ಹೆಚ್ಚು ಚುರುಕಾಗುತ್ತವೆ, ಹೆಚ್ಚು ವೇಗವಾಗಿ ಓಡುತ್ತವೆ ಎಂಬುದನ್ನು ಅರಿತ ಅಲ್ಲಿನ ಒಂಟೆ ಮಾಲೀಕರು, ಹತ್ತು ವರ್ಷಕ್ಕಿಂತಲೂ  ಕಡಿಮೆ ವಯಸ್ಸಿನವರನ್ನು, ಹಸುಳೆಗಳನ್ನು ಜಾಕಿಯಾಗಿ ದುಡಿಸುತ್ತಿದ್ದರು. ಭಾರತ ಮತ್ತು ಬಡರಾಷ್ಟ್ರಗಳಾದ ಬಾಂಗ್ಲಾ ದೇಶ, ಪಾಕಿಸ್ಥಾನ ಹಾಗೂ ಸುಡಾನ್‍ನಿಂದ ಕೆಲಸಕ್ಕೆ ಎಂದು ಸುಳ್ಳು ಹೇಳಿ ಮಕ್ಕಳನ್ನು ಯು ಎ ಇಗೆ ತ...