Skip to main content

Posts

Showing posts from April, 2023
    ಸುತ್ತ - ಮುಕ್ತ         ನವರಸಗಳ ನೆಲೆವೀಡು ಈ ನಿಸರ್ಗ   ವರುಷಗಳ ಹಿಂದೆ ತೆರೆಕಂಡ ಪ್ರಸಿದ್ಧ ‘ ಲೈಫ್ ಆಫ್ ಪೈ ’ ಚಿತ್ರದ ಒಂದು   ದೃಶ್ಯ : “ ಅದೇನು ನಿನ್ನ ಸಂಗಾತಿ ಅಂದುಕೊಂಡೆಯಾ ? ಅದೊಂದು ಮೃಗ !”   ತಾವೇ ಸಾಕಿದ ಹುಲಿಯನ್ನು , ಬೋನಿನ ಹೊರಗಿಂದ ಮಾಂಸದ ತುಣುಕು ನೀಡಿ ಒಲಿಸಿಕೊಳ್ಳಲು ನೋಡುವ ಮಗನನ್ನು ತಂದೆ ಹೀಗೆ ಗದರಿಸುತ್ತಾನೆ . ಅದು ಹುಲಿ . ಶತ್ರುವಲ್ಲ . ಹಾಗೆಂದು ಮಿತ್ರನೂ ಅಲ್ಲ . ರುದ್ರ , ರಮಣೀಯ , ರೋಚಕ , ಮಾರಕ - ನಿಸರ್ಗ ಇವೆಲ್ಲವೂ ಆಗಿರುವುದು ಕಠೋರ ವಾಸ್ತವ . ತಾವು ನತದೃಷ್ಟರು ಅಂದುಕೊಂಡಿರುವ ನಗರವಾಸಿಗಳು , ಕೊಡಗಿನ ಚೇತೋಹಾರಿ ಜನಜೀವನ ಕಂಡು ಕರುಬುತ್ತಿದ್ದರು . ಕೆಲವರಿಗೆ ಅಲ್ಲೇ ಬದುಕು ಕಂಡುಕೊಳ್ಳುವಂತಾದರೆ . . . ಎಂದು ಅನಿಸಿದ್ದುಂಟು . ಆದರೆ 2018 ರಲ್ಲಿ ಅಲ್ಲಿ ಸುರಿದ ಪ್ರಯಳ ಸದೃಶ ಮಳೆ ಹಗಲುಗನಸುಗಾರರನ್ನು ಎಚ್ಚರಿಸಿತು . ‘ ಲಂಗು ಲಗಾಮಿಲ್ಲದೆ ಬೆಳೆದ ಬೆಂಗಳೂರು ಕೂಡಾ ವರುಣನೆದುರು ಈ ಪರಿ ಸೋಲಲಿಲ್ಲ , ತಾವೇ ವಾಸಿ ’ ಅನಿಸಿರಬೇಕು ಅವರಿಗೆ .   ಪ್ರಕೃತಿ ಇರುವುದೇ ಹಾಗೆ . ಅದು ನವರಸಗಳ ನೆಲೆವೀಡು . ಹಿಮದ ಹಾಸು ಹೊರಗೆ , ಕಬ್ಬಿಣವೂ ಕರಗುವ ದಾವಾನಲ ಒಳಗೆ - ಇದದರ ಹೂರಣ . ಇದೇ ಕೊಡಗಿನಲ್ಲಿ , ಕೆಲವ...