Skip to main content

Posts

Showing posts from 2023
  ( ನವೆಂಬರ್ 2022 ರ   ' ತುಷಾರ ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ) ‘ ದೀಪವು ನಮ್ಮದೇ , ಕೈಗಳು ನಮ್ಮವೇ . . .’   “ ಮಾತೃಭಾಷೆಯನ್ನು ಬಿಟ್ಟ ಮನುಷ್ಯ ಮನೆ ಬಿಟ್ಟ ಮಗನ ಹಾಗೆ ಸದಾ ಅತಂತ್ರನಾಗಿರುತ್ತಾನೆ ”- ಕೆ ವಿ ತಿರುಮಲೇಶ್ ಬೆಂಗಳೂರಿಗೆ ಬಂದ ಹೊಸತರಲ್ಲಿ ನಾನು ಒಂದು ಮಾರ್ಕೆಟಿಂಗ್ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದೆ . ಅದರ ಮುಖ್ಯಸ್ಥ ಒಬ್ಬ ಪಕ್ಕಾ ಅಮೇರಿಕನ್ . ಒಂದು ದಿನ   ತರಬೇತಿಯ ವೇಳೆ , ಬೋರ್ಡ್ ಮೇಲೆ ‘ ಫೀಲಿಂಗ್ ’ ಎಂಬ ಪದವನ್ನು ಬರೆಯಬೇಕಾದ ಸಂದರ್ಭ ಅವನಿಗೆ ಒದಗಿ ಬಂತು . ಸದಾ ‘ ನಾನು ಹೆಚ್ಚು ಓದಿದವನಲ್ಲ , ನಾನೊಬ್ಬ ಕಾಲೆಜ್ ಡ್ರಾಪ್‍ಔಟ್ . ಆದರೆ ಮಾತನಾಡಬಲ್ಲೆ . ಮಾತೇ ನನ್ನ ಬಂಡವಾಳ . ಹೀಗಾಗಿ ಮಾರಾಟದ ಕಲೆ ನನಗೆ ಒಲಿದಿದೆ ’ ಎಂದು ಬಡಬಡಿಸುತ್ತಿದ್ದ ಅವನು , ನಮ್ಮ ( ಮತ್ತು ಅವನ ) ನಿರೀಕ್ಷೆಯಂತೆ ‘ ಫೀಲಿಂಗ್ ’ ಸ್ಪೆಲ್ಲಿಂಗ್‍ನ್ನು ತಪ್ಪಾಗಿ ಬರೆದ . ಅದನ್ನು ಕಂಡು ನಾವೆಲ್ಲ ‘ ಓ ‘ ಎಂದು ಉದ್ಗರಿಸಿದ ತಕ್ಷಣ ಅವನಿಗೆ ತನ್ನ ತಪ್ಪಿನ ಅರಿವಾಯಿತು . ಸರಿಯಾದ ಸ್ಪೆಲ್ಲಿಂಗ್‍ನ್ನು ನಮ್ಮ ಬಳಿ ಕೇಳಿ ತಿಳಿದುಕೊಂಡು , ತಪ್ಪನ್ನು ತಿದ್ದಿ ಬರೆದಮೇಲೆ ‘ ನೀವು ಭಾರತೀಯರು ಅದು ಹೇಗೆ ಅಷ್ಟೊಂದು ಚೆನ್ನಾಗಿ , ತಪ್ಪಿಲ್ಲದೆ ಇಂಗ್ಲಿಶ್ ಮಾತನಾಡುತ್ತೀರಿ ? ಇಂಗ್ಲಿಶ್‍...