‘ ಈ ಪರಿಯ ಸೊಬಗು ’ ಇನ್ನಾವ ಬಸವನಹುಳುವಿನಲ್ಲಿದೆ ? ರೂಪವೇ ಸರ್ವಸ್ವವಲ್ಲ . ಅದುವೇ ಮುಖ್ಯವಲ್ಲ . ಸೌಂದರ್ಯದ ಆಕರ್ಷಣೆ ಕ್ಷಣಿಕ . ಗುಣ , ಸ್ವಭಾವ , ನಡತೆ , ಪ್ರತಿಭೆ ಇವುಗಳೆದುರು ಬಾಹ್ಯ ಸೌಂದರ್ಯ ಗೌಣವೆನಿಸುತ್ತದೆ . ಇವೆಲ್ಲಾ ತಿಳಿದಿದ್ದರೂ ರೂಪಕ್ಕೆ ಮರುಳಾಗದವರು ವಿರಳ . ಗಲ್ಲಿ ಗಲ್ಲಿಗಳಲ್ಲೂ ತಲೆಯೆತ್ತಿರುವ ಬ್ಯೂಟಿ ಪಾರ್ಲರ್ ಗಳು ಇದಕ್ಕೆ ಒಂದು ಉತ್ತಮ ಸಾಕ್ಷಿ . ಸೌಂದರ್ಯದ ಮೋಹಪಾಶ ಋಷಿ , ಮುನಿಗಳನ್ನೂ ಬಿಟ್ಟಿಲ್ಲ . ಮೊದಲ ನೋಟದಲ್ಲೇ ಮೊಳಕೆಯೊಡೆಯುವ ತರುಣ ತರುಣಿಯರ ನಡುವಿನ ಪ್ರೇಮ ಬಾಹ್ಯ ಸೌಂದರ್ಯದ ಕೈವಾಡ . ‘ ಪೆಹಲಾ ನಶ ’ ಇಳಿದು ವಾಸ್ತವ ಸ್ಪಷ್ಟವಾದಾಗ ಪ್ರೇಮದ ಸಮಾಧಿಯಾಗಿರುತ್ತದೆ . ಆದರೆ ಆ ಮಧುರ ಅನುಭವ ಜೀವನಪೂರ್ತಿ ಚೇತೋಹಾರಿಯಾಗಿ ಕಾಡುತ್ತಿರುತ್ತದೆ , ಮನವನು ಉಲ್ಲಾಸಗೊಳಿಸುತ್ತದೆ . ರೂಪ , ಲಾವಣ್ಯದ ಕರಾಮತ್ತು ಅದು . ಸೌಂದರ್ಯಾನುಭೂತಿಗೆ ಏನೋ ಒಂದು ಉದ್ದೇಶ ಇದೆ . ಪ್ರಕೃತಿದತ್ತವಾದ ಹೂವು , ಪಕ್ಷಿ , ಪತಂಗ , ಮಳೆಬಿಲ್ಲುಗಳ ವರ್ಣಸಂಯೋಜನೆ , ವಿನ್ಯಾಸ , ಚಿತ್ತಾರಗಳಿಂದ ಸಮ್ಮೋಹಗೊಳ್ಳದಿರುವುದು ಅಸಾಧ್ಯ . ಈ ಪವಾಡವೇ ಇರಬೇಕು , ದೇವರ ಸ್ವಂತ ನಾಡೆಂದು ಕರೆ À ಯಲಾಗುವ , ಪ್ರಕೃತಿ ತು...
I write therefore I am. It is no holds barred. World is the page I crawl on. At the end of the day I want the readers to wonder 'what is in store for us next?' If in the due course I succeed in discovering myself, I would feel gratified.