Skip to main content

Posts

Showing posts from 2022
    ‘ ಈ ಪರಿಯ ಸೊಬಗು ’ ಇನ್ನಾವ ಬಸವನಹುಳುವಿನಲ್ಲಿದೆ ?   ರೂಪವೇ ಸರ್ವಸ್ವವಲ್ಲ . ಅದುವೇ ಮುಖ್ಯವಲ್ಲ . ಸೌಂದರ್ಯದ ಆಕರ್ಷಣೆ ಕ್ಷಣಿಕ . ಗುಣ , ಸ್ವಭಾವ , ನಡತೆ , ಪ್ರತಿಭೆ ಇವುಗಳೆದುರು ಬಾಹ್ಯ ಸೌಂದರ್ಯ ಗೌಣವೆನಿಸುತ್ತದೆ . ಇವೆಲ್ಲಾ ತಿಳಿದಿದ್ದರೂ ರೂಪಕ್ಕೆ ಮರುಳಾಗದವರು ವಿರಳ . ಗಲ್ಲಿ ಗಲ್ಲಿಗಳಲ್ಲೂ ತಲೆಯೆತ್ತಿರುವ ಬ್ಯೂಟಿ ಪಾರ್ಲರ್ ‍ ಗಳು ಇದಕ್ಕೆ ಒಂದು ಉತ್ತಮ ಸಾಕ್ಷಿ . ಸೌಂದರ್ಯದ ಮೋಹಪಾಶ ಋಷಿ , ಮುನಿಗಳನ್ನೂ ಬಿಟ್ಟಿಲ್ಲ . ಮೊದಲ ನೋಟದಲ್ಲೇ ಮೊಳಕೆಯೊಡೆಯುವ ತರುಣ ತರುಣಿಯರ ನಡುವಿನ ಪ್ರೇಮ ಬಾಹ್ಯ ಸೌಂದರ್ಯದ ಕೈವಾಡ . ‘ ಪೆಹಲಾ ನಶ ’ ಇಳಿದು ವಾಸ್ತವ ಸ್ಪಷ್ಟವಾದಾಗ ಪ್ರೇಮದ ಸಮಾಧಿಯಾಗಿರುತ್ತದೆ . ಆದರೆ ಆ ಮಧುರ ಅನುಭವ ಜೀವನಪೂರ್ತಿ ಚೇತೋಹಾರಿಯಾಗಿ ಕಾಡುತ್ತಿರುತ್ತದೆ , ಮನವನು ಉಲ್ಲಾಸಗೊಳಿಸುತ್ತದೆ . ರೂಪ , ಲಾವಣ್ಯದ ಕರಾಮತ್ತು ಅದು .                 ಸೌಂದರ್ಯಾನುಭೂತಿಗೆ ಏನೋ ಒಂದು ಉದ್ದೇಶ ಇದೆ . ಪ್ರಕೃತಿದತ್ತವಾದ ಹೂವು , ಪಕ್ಷಿ , ಪತಂಗ , ಮಳೆಬಿಲ್ಲುಗಳ ವರ್ಣಸಂಯೋಜನೆ , ವಿನ್ಯಾಸ , ಚಿತ್ತಾರಗಳಿಂದ ಸಮ್ಮೋಹಗೊಳ್ಳದಿರುವುದು ಅಸಾಧ್ಯ . ಈ ಪವಾಡವೇ ಇರಬೇಕು , ದೇವರ ಸ್ವಂತ ನಾಡೆಂದು ಕರೆ À ಯಲಾಗುವ , ಪ್ರಕೃತಿ ತು...