An edited version of this article was published in the Sunday supplement of Udayavani dated 26-11-2017
ರಾಮಾಯಣದ ದೇಶಗಳು ಹಾಗೂ ಲಂಕಾದಹನ ಪ್ರಸಂಗಗಳು
ಅಲ್ಲಿ ಬಾಂಬ್ ದಾಳಿ ನಡೆಯಿತು. ವಿಶೇಷವೇನೆಂದರೆ ಆ ಬಾಂಬ್ ದಾಳಿಗಳಿಂದ ಮನುಷ್ಯರಂತೂ ಯಾರೂ ಸಾಯಲಿಲ್ಲ. ಆ ದಾಳಿಯ ಗುರಿ ಮನುಷ್ಯರು ಅಲ್ಲವೇ ಅಲ್ಲ. ವಿನಾಶವೂ ಅಲ್ಲ! ಮಾತ್ರವಲ್ಲ, ಆ ಬಾಂಬ್‍ಗಳಿಂದ ಬೆಂಕಿ ಭುಗಿಲೇಳಲಿಲ್ಲ.
ಏಕೆಂದರೆ, ಅವು ಜಲ ಬಾಂಬ್‍ಗಳು ಮತ್ತು ಅವುಗಳ ಗುರಿ, ಅಲ್ಲಿ ಹಬ್ಬಿರುವ ಬೆಂಕಿಯ ಕೆನ್ನಾಲಿಗೆಗಳು. ಅವುಗಳ ಹುಟ್ಟಡಗಿಸಲು ಎಸೆದಿರುವ ಬಾಂಬ್‍ಗಳು ಅವು.
ಆ ಬೆಂಕಿ ಸುಟ್ಟ ವನಸಿರಿ, ಅದು ಕಾರಿದ ಹೊಗೆ, ಅದು ತಂದೊಡ್ಡಿದ ರಾಷ್ಟ್ರೀಯ
ವಿಪತ್ತು. . . ಇದು ಇಂಡೋನೇಷ್ಯಾದ ಗೋಳು.
ದ್ವೀಪಮಯ ದೇಶಗಳಲ್ಲೇ ಅತಿ ದೊಡ್ಡದು ಎನ್ನುವ ಹೆಗ್ಗಳಿಕೆ ಬಿಟ್ಟರೆ ರಿಪಬ್ಲಿಕ್ ಆಫ್ ಇಂಡೋನೇಷ್ಯಾದ ಸಾಧನೆ ಗಣನೀಯವೇನೂ ಅಲ್ಲ, ಗಮನಾರ್ಹವೂ ಅಲ್ಲ. ಈ ದೇಶ ಏನಾದರೂ ಸುದ್ದಿ ಮಾಡಿದರೆ ಅದು ಒಳ್ಳೆಯ ಕಾರಣಗಳಿಗೆ ಆಗಿರುವುದು ತೀರಾ ಅಪರೂಪ. ಪ್ರಳಯಾಂತಕ ಸುನಾಮಿಯಿಂದ, ಭೂಕಂಪದಿಂದ, ಭಯೋತ್ಪಾದನೆಯಿಂದ ಆಗೊಮ್ಮೆ ಈಗೊಮ್ಮೆ ‘ನಾನಿಲ್ಲಿದ್ದೇನೆ’ ಎಂದು ಜಗತ್ತಿಗೆ ಕೂಗಿ ಹೇಳುವ ಈ ದೇಶ, ತನ್ನ ಗರುಡ ಚಿತ್ರದ ಲಾಂಛನ ಹಾಗೂ ಗರುಡ ಹೆಸರಿನ ವಿಮಾನ ಯಾನ ಸೇವೆ, ತನ್ನ ಕರೆನ್ಸಿಯಲ್ಲಿ ಅವತರಿಸಿದ ಗಣಪ- ಇವೆಲ್ಲವುಗಳಿಂದ ಭಾರತದ ಹತ್ತಿರದ ಸಂಬಂಧಿ ಅನಿಸಿದರೂ ನಮಗೂ ಆ ದೇಶಕ್ಕೂ ಅಂತಾ ಅವಿನಾಭಾವ ಸಂಬಂಧವೇನೂ ಇಲ್ಲ.ನಮ್ಮಲ್ಲಿರುವ ಹಾಗೆ ನೂರಾರು ಜನಾಂಗೀಯ ಗುಂಪುಗಳು, ನೂರಾರು ಭಾಷೆಗಳು ಅಲ್ಲಿವೆ.
ಅಲ್ಲೂ ನಮ್ಮ ಹಾಗೆ ರಾಮಾಯಣ ಇದೆ ಮತ್ತು ‘ಇದೊಳ್ಳೇ ರಾಮಾಯಣ ಆಯ್ತಲ್ಲ’ ಅನ್ನುವಂತಾ ಪ್ರಸಂಗಗಳೂ ಅಲ್ಲಿ ನಡೆಯುತ್ತಿರುತ್ತವೆ! ಹಸಿರು ಮನೆ ಅನಿಲಗಳನ್ನು ಹೊರಸೂಸುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಇಂಡೋನೇಷ್ಯಾ ಪಡೆದಿದೆ ಅಂದರೆ ಅಲ್ಲಿ ರಾಮಾಯಣವನ್ನು ನೆನಪಿಸುವಂತಾ ಮತ್ತು ಆ ಪುರಾಣದ ಲಂಕಾದಹನವನ್ನು ಮೀರುವಂತದೇನೋ ನಡೆದಿದೆ ಎಂದು ಊಹಿಸಬಹುದು! ಬೆಂಕಿ ಇಲ್ಲದೆ ಹುಟ್ಟುವ ಹೊಗೆ ಎಲ್ಲಾದರೂ ಇದೆಯೆ?
ಹೊಗೆ ಎಂದೊಡನೆ ಅದಕ್ಕೆ ಕೈಗಾರಿಕೆ ಅಥವಾ ವಾಹನಗಳು ಕಾರಣವಿರಬಹುದು ಎಂದು ಊಹಿಸುವುದು ಸಹಜ. ಆದರೆ ಇಲ್ಲಿ ಸಮಸ್ಯೆಯ ಮೂಲ ಕೃಷಿ ಅಂದರೆ ಆಶ್ಚರ್ಯವಾಗಬಹುದು.
ಕೃಷಿಯಲ್ಲಿ ತೊಡಗದ ದೇಶವಿಲ್ಲ ಮತ್ತು ಇಂಡೋನೇಷ್ಯಾ ಇದಕ್ಕೆ ಹೊರತಲ್ಲ. ಕೃಷಿಕರು ತಲತಲಾಂತರದಿಂದ ಅನುಸರಿಸುತ್ತಾ ಬಂದ ಪದ್ಧತಿಯನ್ನು ಆ ದೇಶದಲ್ಲೂ ಪಾಲಿಸಲಾಗಿದೆ.ಇದನ್ನು ‘ಸ್ಲಾಶ್ & ಬರ್ನ್’ ( ಕಡಿ ಮತು ಸುಡು) ಎನ್ನಲಾಗುತ್ತದೆ. ಶತ ಶತಮಾನಗಳ ಹಿಂದೆ ಅರಣ್ಯ ಭೂಮಿಯನ್ನು, ಹುಲ್ಲುಗಾವಲುಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು, ಅರಣ್ಯವನ್ನು ಕಡಿದು ಉಳಿದದ್ದನ್ನು ಸುಟ್ಟು ಸಾಗುವಳಿಗೆ ಸಿದ್ಧಪಡಿಸುತ್ತಿದ್ದರು. ಇದೇ ಪದ್ಧತಿ ಜಗತ್ತಿನ ಎಲ್ಲೆಡೆ ಇಂದಿಗೂ ಚಾಲ್ತಿಯಲ್ಲಿದೆ ಮತ್ತು ಇಂದು ಇದನ್ನು ಭೂಗಳ್ಳರು ಎಗ್ಗಿಲ್ಲದೆ ಪಾಲಿಸುತ್ತಿದ್ದಾರೆ ಎಂಬುದು ಬೇರೆ ಮಾತು. (ಇಂಡೋನೇಷ್ಯಾದಲ್ಲಿ ಕೂಡಾ ಅವರ ಕೈಚಳಕ ಕೆಲಸ ಮಾಡಿದೆ ಎಂಬ ಒಂದು ಅಂಬೋಣವಿದೆ.)
ಸಾವಿರಾರು ಅಗ್ನಿಪರ್ವತಗಳಿಂದಲೇ ಹುತ್ತಗಟ್ಟಿದ ದೇಶ ಈ ಇಂಡೋನೇಷ್ಯಾ! ಈ ದೇಶಕ್ಕೆ ಬೆಂಕಿಯೊಂದಿಗೆ ಸರಸವಾಡುವುದು ಹೊಸತೇನು? ಪ್ರತೀ ವರ್ಷವೂ ಅಲ್ಲಿನ ಪೂರ್ವ ಸುಮಾತ್ರದ ರಿಯವು ಪ್ರಾವಿನ್ಸ್ ನಲ್ಲಿ, ದಕ್ಷಿಣ ಸುಮಾತ್ರದಲ್ಲಿ, ಇಂಡೋನೇಷಿಯನ್ ಬೊರ್ನಿಯೋ ಮೇಲಿನ ಕಲಿಮಂಟನ್‍ನ ಕೆಲವು ಭಾಗಗಳಲ್ಲಿ ಈ ರೀತಿಯ ‘ಬೇಸಾಯದ ಬೆಂಕಿ’ ಕಾಣಿಸುವುದು ಸರ್ವೇ ಸಾಮಾನ್ಯವಂತೆ! ಸಣ್ಣ ಹಿಡುವಳಿದಾರರಿಂದ ಹಿಡಿದು ಕೃಷಿಯನ್ನು ಅವಲಂಬಿಸಿದ ಕೈಗಾರಿಕೆ (ತಾಳೆ ಎಣ್ಣೆ, ಪಲ್ಪ್, ಹಾಗೂ ಕಾಗದ ತಯಾರಿಕೆ) ವರೆಗೆ ಎಲ್ಲರೂ ಅನುಸರಿಸುವ ವಿಧಾನ-ಕಡಿ ಮತ್ತು ಸುಡು.
ಇದೊಂದು ವಿಷ ವರ್ತುಲ. ಹೀಗೆ ಸುಟ್ಟ ನೆಲ ಇನ್ನಷ್ಟೂ ಒಣಗಿರುತ್ತದೆ ಮತ್ತು ಇನ್ನೊಂದು ಬಾರಿ ಕಡಿದು ಸುಡಲು ಹೊರಟಾಗ ಬೆಂಕಿಯ ರುದ್ರ ನರ್ತನಕ್ಕೆ ಇನ್ನೂ ಉತ್ತಮ ವೇದಿಕೆಯಾಗುತ್ತದೆ ಆ ಒಣ ನೆಲ! ಮಾತ್ರವಲ್ಲ, ಅಲ್ಲಿ ಹಬ್ಬಿರುವ ಒಣ ಪಾಚಿಯ ಕಾರಣ, ಭೂ ಗರ್ಭದಲ್ಲಿ ತಿಂಗಳುಗಟ್ಟಲೆ ಕಾಲ ಆ ಬೆಂಕಿ ಜೀವಂತವಾಗಿರುತ್ತದೆ ಎನ್ನಲಾಗಿದೆ. ಭೂ ಗರ್ಭದಲ್ಲಿ ಎಲ್ಲೋ ಒಂದೆಡೆ ಹರಡಿದ್ದು, ಇನ್ನೊಂದೆಡೆ ಭುಗಿಲೇಳುತ್ತದಂತೆ! ಹೀಗಾಗಿ ಅದನ್ನು ಆರಿಸುವುದು ಅಷ್ಟು ಸುಲಭವಲ್ಲ. ಹೀಗೆ ಆರಿಸಲು ಹೊರಟರೆ ಭಾರೀ ಪ್ರಮಾಣದ ನೀರು ಪೋಲಾಗುತ್ತದೆ ಎನ್ನುವುದು ಇನ್ನೊಂದು ಆತಂಕಕಾರಿ ಸಂಗತಿ.
ಕೈಗಾರಿಕೆ ಅಂದರೆ ವಿಸ್ತರಣೆಯ ಮಹತ್ವಾಕಾಂಕ್ಷೆ ಅದಕ್ಕಾಗಿ ಹೆಚ್ಚಿನ ಲಾಭsದ ಗುರಿ ಇವೆಲ್ಲಾ ಸಾಮಾನ್ಯ ಮತ್ತು ಮಾನ್ಯ ಅನಿಸುತ್ತದೆ. ಅಲ್ಲಿನ ತಾಳೆ ಎಣ್ಣೆ ಕೈಗಾರಿಕೆ ಇಲ್ಲಿಯವರೆಗೆ ಈ ರೀತಿ ನಾಶ ಮಾಡಿದ ಅರಣ್ಯ ಬರೋಬ್ಬರಿ 18 ದಶಲಕ್ಷ ಹೆಕ್ಟೇರ್‍ಎನ್ನಲಾಗಿದೆ! ಪಾಪ ಅಲ್ಲಿನ ಜಗತ್ಪ್ರಸಿದ್ಧ ದೈತ್ಯ ಹಲ್ಲಿ (ಡ್ರಾಗನ್) ಗಳು, ಉರಾಂಗ್ ಉಟಾನ್‍ಗಳು ‘ಅರಣ್ಯ ಇದ್ದಷ್ಟೇ ಅಲೆದಾಡು’ ಎಂದು ರಾಜಿ ಮಾಡಿಕೊಂಡು ಜೀವಿಸುವಂತಾಯಿತು, ಈ ಕಾಡು-ಬಾಕರ ದೆಸೆಯಿಂದ! ಅಗ್ನಿಯ ಬೇಗೆಯಲ್ಲಿ ಇದ್ದ ಅಷ್ಟಿಷ್ಟು ಕಾಡು, ಜೊತೆಗೆ ಮಾನವೀಯತೆಯು ಬೆಂದು ಹೋಗಲು ಆ ಮೂಕ ಪ್ರಾಣಿಗಳು ಏನು ತಾನೇ ಮಾಡಬಲ್ಲುವು?
ಹಾಗಿತ್ತು ಗೊಂಬೆಯಾಟಕ್ಕೆ ಹೆಸರಾದ ದೇಶದಲ್ಲಿ ವಿಧಿಯಾಟ! ತಾಳೆ ಎಣ್ಣೆ ಉತ್ಪಾದನೆಯಲ್ಲಿ ತೊಡಗಿರುವ ಬೃಹತ್ ಕೈಗಾರಿಕೆಯೊಂದು 2015ರಲ್ಲಿ ಈ ರೀತಿ ‘ಇರುವುದನ್ನು ಕಡಿದು, ಉಳಿದದ್ದನ್ನು ಸುಡುತ್ತಾ’ ಸಾಗಿತು. ಆ ಬಾರಿ ಮಾತ್ರ ಬೆಂಕಿಯಲೆಗಳು ಛೆಂಗಿಸ್ ಖಾನ್‍ನಿಂದ ಸ್ಫೂರ್ತಿ ಪಡೆದ ಹಾಗೆ ಎಲ್ಲೆ ಮೀರಿ ಸುತ್ತಮುತ್ತ ವ್ಯಾಪಿಸಿದವು. ಅದು ರಾಷ್ಟ್ರೀಯ ಉದ್ಯಾನವನಗಳನ್ನು ಸುಟ್ಟು ಹಾಕಿದ್ದು ಮಾತ್ರವಲ್ಲ, ರಕ್ಷಿತಾರಣ್ಯವನ್ನು ಕೂಡಾ ಬಿಡಲಿಲ್ಲ!
‘ಈ ಬೆಂಕಿಯಾಟ ಏನು ಹೊಸತೆ? ಯಾವಾಗಲೂ ಇದ್ದದೇ’ ಅಂದುಕೊಂಡು ತೆಪ್ಪಗಿದ್ದ ರಿಪಬ್ಲಿಕ್ ಆಫ್ ಇಂಡೋನೇಷ್ಯಾ ಸರಕಾರಕ್ಕೆ ಕೊನೆಗೂ ಅದರ ಬಿಸಿ ಮುಟ್ಟಿತು. ಕೆಲವು ವಾರ ಏಕಾಂಗಿಯಾಗಿ ಹೋರಾಡಿ ಸೋಲೊಪ್ಪಿಕೊಂಡ ಬಳಿಕ, ಆ ಬೆಂಕಿಯನ್ನು ಮಣಿಸಲು ಅದು ಅಕ್ಷರಶಃ ಸಮರೋಪಾದಿಯಲ್ಲಿ ಸನ್ನದ್ಧವಾಯಿತು.
‘ಮನುಕುಲದ ಮೇಲಿನ ಕ್ರೌರ್ಯ’ ಎಂಬ ಹಣೆಪಟ್ಟಿ ಹಚ್ಚಿಕೊಂಡ ಈ ಅಗ್ನಿ ತಾಂಡವವನ್ನು ಹತೋಟಿಗೆ ತರಲು, ತನ್ನ ಚರಿತ್ರೆಯಲ್ಲೇ ಅತ್ಯಂತ ಬೃಹತ್ ಪ್ರಮಾಣದ ಮಿಷನ್‍ಗೆ ವಿದೇಶಿ ನೆರವಿನೊಂದಿಗೆ ಇಂಡೋನೇಷ್ಯಾ ಮುಂದಾಯಿತು. ಸಾವಿರಾರು ಸಂಖ್ಯೆಯಷ್ಟು ಸೇನಾಪಡೆ, ಫೈಟರ್ ಜೆಟ್ ಗಳು, ಹೆಲಿಕಾಪ್ಟರ್‍ಗಳು, ಯುದ್ಧನೌಕೆಗಳು ಎಲ್ಲವೂ ತಾವೇ ಹುಟ್ಟಿಸಿದ ಈ ಭಸ್ಮಾಸುರನ ವಿರುದ್ಧದ,ಯುದ್ಧವಲ್ಲದ ಯುದ್ಧದಲ್ಲಿ ತೊಡಗಿದವು. ಸಿಂಗಾಪುರ್, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ಕೂಡಾ ವಿಮಾನಗಳು, ಅಗ್ನಿಶಾಮಕ ರಾಸಾಯನಿಕಗಳು ಹಾಗೂ ತಜ್ಞರನ್ನು ರವಾನಿಸಿ ಇಂಡೋನೇಷ್ಯಾದ ನೆರವಿಗೆ ಧಾವಿಸಿದವು.
‘ಎಲ್ ನಿನೋ’ ಎಂಬ ನೈಸರ್ಗಿಕ ಖಳನಾಯಕನ ಕೈಚಳಕದಿಂದ ತೀವ್ರಗೊಂಡ ಒಣ ಹವೆ ಮಾಮೂಲು ಅಂದುಕೊಂಡಿದ್ದ ‘ಬೇಸಾಯ ಬೆಂಕಿ’ಯನ್ನು ಪ್ರಳಯ ಸದೃಶ ಪ್ರಕೋಪನ್ನಾಗಿಸಿತು.ಒಟ್ಟು 35 ದಳ್ಳುರಿಗಳನ್ನು ಅಲ್ಲಲ್ಲಿ ಹಾಗೂ ಹೀಗೂ ನಂದಿಸಿದ್ದಾಯಿತು. ಅದು ಮತ್ತೂ ಮತ್ತೂ ಭುಗಿಲೇಳುತ್ತಲೇ ಇತ್ತು ಎನ್ನುವುದು ಬೇರೆ ಮಾತು!
ಹೊಗೆಗೆ ದೇಶ, ಭಾಷೆ, ಜನಾಂಗಗಳ ಗಡಿ ಇಲ್ಲವಷ್ಟೆ? ಅದು ನೆರೆ ರಾಷ್ಟ್ರಗಳಾದ ಮಲೇಷಿಯಾ, ಸಿಂಗಾಪುರ ಹಾಗೂ ಥೈಲಾಂಡ್ ವರೆಗೆ ವ್ಯಾಪಿಸಿತು ಮತ್ತು ಅಲ್ಲೂ ಸಾವಿರಾರು ಮಂದಿ ಉಸಿರಾಟದ ತೊಂದರೆಗೆ ವೈದ್ಯಕೀಯ ನೆರವು ಪಡೆಯುವಂತಾಯಿತು. ಅಂತೂ ಈ ದಟ್ಟ ಹಾಗೂ ಸಾಂದ್ರ ಹೊಗೆ ಆಗ್ನೇಯ ದೇಶಗಳ ಉಸಿರು ಕಟ್ಟಿಸಿತು.
ಈ ಬೆಂಕಿಗೆ ಮೊದಲು ಆಹುತಿಯಾದ ಮಾನವ ಜೀವಗಳು (ಅಗ್ನಿಶಾಮಕ ದಳದವರೂ ಸೇರಿ) 19 ಎನ್ನಲಾಗಿದೆ.ಆದರೆ ಹೊಗೆ ತಂದ ಉಸಿರಾಟದ ತೊಂದರೆಗೆ ಸಿಲುಕಿಕೊಂಡವರ ಅಂಕಿ ಸಂಖ್ಯೆ, ಅಂದಾಜಿನ ಮೇರೆಗೆ ಇದೆ.
ಹೊಗೆಯಿಂದ ಕೂಡಿದ ಈ ಮಬ್ಬು (ಹೇeóï)ವಿನಿಂದಾಗಿ ಅಲ್ಲಿ ವಿಮಾನಯಾನವನ್ನು ಸ್ಥಗಿತಗೊಳಿಸಲಾಯಿತು. ಶಾಲೆಗಳಿಗೆ ರಜೆ ಸಾರಲಾಯಿತು. ಸಭೆ ಸಮಾರಂಭಗಳು ರದ್ದಾದವು. ಉಸಿರಾಟದ ಸೋಂಕಿನ ಪ್ರಕರಣಗಳು ಐದು ಲಕ್ಷದ ಗಡಿ ದಾಟಿದವು.
ಮಾಲಿನ್ಯ ಮಾನದಂಡ ಸೂಚ್ಯಾಂಕ (Poಟಟuಣioಟಿ Sಣಚಿಟಿಜಚಿಡಿಜ Iಟಿಜex) ಪಿ ಎಸ್ ಐ ನ್ನು 300 ರವರೆಗೆ ಸುರಕ್ಷಿತ ಎಂದು ಬಗೆಯಲಾಗುತ್ತದೆ. ಅಲ್ಲಿ ಈ ಧೂಮ ಕಾಂಡ ಶುರುವಾದ ಮೇಲೆ ಅದು ತಲುಪಿದ್ದು 2000ದ ಗೆರೆ!ಉಸಿರಾಟದ ತೀವ್ರ ಸೋಂಕಿನ ಪ್ರಕರಣಗಳು ಸರಿಪಡಿಸಲಾಗದಷ್ಟು ಹದಗೆಟ್ಟಿದ್ದವು! ಹೊಗೆ ಮಾತ್ರವಲ್ಲ, ಪಿ ಎಮ್ ( ಪರ್ಟಿಕ್ಯೂಲೆಟ್ ಮ್ಯಾಟರ್) 2.5 ಎಂದು ಗುರುತಿಸಲಾದ ಮಾಲಿನ್ಯಕಾರಕ ಅತಿ ಸೂಕ್ಷ್ಮ ಕಣಗಳು ಅತ್ಯಂತ ಅಪಾಯಕಾರಿಯಾಗಿದ್ದು, ಇವು ಶ್ವಾಸಕೋಶದ ಆಳಕ್ಕೆ ಇಳಿದು ಉಸಿರಾಟದ ಖಾಯಿಲೆ ಉಂಟುಮಾಡಬಲ್ಲವು ಮತ್ತು ಶ್ವಾಸಕೋಶಕ್ಕೆ ಹಾನಿ ಮಾಡಬಲ್ಲವು. ಸಿಂಗಾಪುರ್‍ನ ಅಧಿಕಾರಿಗಳು ಈ ಕಣಗಳನ್ನು ಸೋಸಬಲ್ಲ ವಿಶೇಷ ಮಾಸ್ಕ್‍ಗಳನ್ನು ಧರಿಸುವಂತೆ ಅಲ್ಲಿನ ನಿವಾಸಿಗಳಿಗೆ ಸಲಹೆ ನೀಡಿದರು
ಯು ಎಸ್ ಮೂಲದ ಪರಿಸರ ಸಂಶೋಧನಾ ಸಂಸ್ಥೆ ‘ವಲ್ರ್ಡ್ ರಿಸೋರ್ಸ್ ಇನ್ಸ್ಟಿಟ್ಯೂಟ್’ ಪ್ರಕಾರ, ಅಮೇರಿಕಾದ ಇಡೀ ಆರ್ಥಿಕತೆ ಪ್ರತಿ ದಿನ ಹೊರಸೂಸುವ ಸರಾಸರಿ ವಾಯು ಮಾಲಿನ್ಯವನ್ನುಇಂಡೋನೇಷ್ಯಾದ ಈ ಹೊಗೆಮೀರಿಸಿದೆಯಂತೆ.ಹಾಗಂದರೆ ಇದರ ಅಗಾಧತೆಯನ್ನು ಊಹಿಸಬಹುದು. ಬಾಹ್ಯಾಕಾಶದಿಂದ ವೀಕ್ಷಿಸಿದರೆ ನಾಸಾಗೆ ಈ ಧೂಮ ಲೀಲೆ ಒಂದು ದೊಡ್ಡ ಪದರದಂತೆ ಕಾಣುತ್ತಿತ್ತಂತೆ!
ಎ ಎಫ್ ಪಿ 2016 ರ ಸೆಪ್ಟೆಂಬರ್ 20 ರಂದು ಒಂದು ಆತಂಕಕಾರಿ ವರದಿಯನ್ನು ಪ್ರಕಟಿಸಿದೆ. ಅದರಂತೆ ಈ ಮಹಾ ಮಾರಿ ಮಬ್ಬು, ಸುಮಾರು ಒಂದು ಲಕ್ಷ ಅಕಾಲಿಕ ಮರಣಗಳಿಗೆ ಕಾರಣವಾಗಿದೆ. ಯು ಎಸ್ ನ ಕೊಲಂಬಿಯಾ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯಗಳ ಸಂಶೋಧಕರು ಕೆಲವು ಸಂಕೀರ್ಣ ವಿಶ್ಲೇಷಣಾ ಮಾದರಿಗಳನ್ನು ಬಳಸಿ ಈ ಅಂದಾಜು ಮಾಡಿದ್ದಾರೆ. ಇದು ಪರಿಮಿತ (ಕನ್ಸರ್ವೇಟಿವ್) ಅಂದಾಜು ಎನ್ನಲಾಗಿದೆ. ಹಾಗಿದ್ದರೆ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚು ಎಂದಂತಾಯಿತು. ಇನ್ನು ಈ ಧೂಮ ರಕ್ಕಸನ ಲೀಲೆ, ಅಂಬೆಗಾಲಿಡುತ್ತಿರುವ ಕಂದಮ್ಮಗಳ ಆರೋಗ್ಯದ ಮೇಲೆ ಮಾಡಿರುವ ಪರಿಣಾಮ-ಊಹಾತೀತ!
ಈ ದಾವನಲ ನುಂಗಿ ಹಾಕಿದ್ದು ಜವುಗು ನೆಲದಲ್ಲಿ ಕಂಡು ಬರುವ ಅಂಗಾರದಿಂದ ಸಂಪದ್ಭರಿತವಾದ ಹಳೆಯ ಸಂಪನ್ಮೂಲವಾದ ಒಣಪಾಚಿಯನ್ನು. ಕೇವಲ ಬೆಂಕಿ ತಂದೊಡ್ಡಿದ ನಾಶ ನಷ್ಟ ಬರೋಬ್ಬರಿ 1400 ಕೋಟಿ ಡಾಲರ್‍ಗಳು ಮತ್ತು ಈ ಮೊತ್ತದಲ್ಲಿ ದಶಕಗಳ ಬಳಿಕವಷ್ಟೇ ಸರಿ ಪಡಿಸಬಹುದಾದ ಪರಿಸರಸಕ್ಕಾದ ಹಾನಿಯನ್ನು ಪರಿಗಣಿಸಿಲ್ಲ. ಹೀಗಿರುವಾಗ ಅವರಿಗೆ ಉಳಿದಿರುವ ದಾರಿ ‘ಇದು ಬರಿ ಹೊಗೆಯಲ್ಲೋ ಅಣ್ಣ’ ಎಂದು ಉದ್ಗರಿಸುವುದಷ್ಟೆ!
ಹೊಣೆಗೇಡಿತನ, ಉಡಾಫೆ, ಅದು ತಂದ ದುರಂತ, ಕರುಣಿಸಿದ ಮಾಲಿನ್ಯ, ನಾಶ ನಷ್ಟದ ಕತೆ ಹೀಗಿದೆಯಾದರೆ ಅದಕ್ಕೆ ಕಾರಣರಾದವರನ್ನು ಗುರುತಿಸಿ ಶಿಕ್ಷಿಸಿದ ಪರಿ ಇನ್ನೊಂದು. ಇಲ್ಲಿ ಎಲ್ಲವೂ ಗೋಜಲು ಗೋಜಲು. ಈ ದುರಂತದ ಹಿಂದಿರುವ ಯಾರನ್ನೂ ಬಂಧಿಸಿ ಜೈಲಿಗಟ್ಟಿದ ವರದಿಗಳಂತೂ ಎಲ್ಲೂ ಸ್ಪಷ್ಟವಾಗಿ ದಾಖಲಾಗಿಲ್ಲ.
ಒಂದು ವರದಿಯಂತೆ ಹಲವು ವರ್ಷಗಳಿಂದ ಅಲ್ಲಿನ ಸರ್ಕಾರವು ನೀಡುತ್ತಾ ಬಂದ ಭರವಸೆ ಅನುಸರಿಸಿ ಅಧ್ಯಕ್ಷರ ಉಸ್ತುವಾರಿಯಲ್ಲಿ ಕೊನೆಗೂ ನೇಮಿಸಿದ ಜಾರಿ ಸಮಿತಿ 10 ಕಂಪನಿಗಳನ್ನು ಸಂಶಯಿತ ಆರೋಪಿಗಳು ಎಂದು ಹೆಸರಿಸಿತು ಮತ್ತು 100 ಮಂದಿಯನ್ನು ತನಿಖೆಗೆ ಒಳಪಡಿಸಿತು.
2002 ರಲ್ಲೇ ಆಗ್ನೇಯ ಏಷ್ಯಾದ ಎಲ್ಲಾ ದೇಶಗಳು, ಹೆಚ್ಚಿನ ಉಸ್ತುವಾರಿ ಮತ್ತು ಸುರಕ್ಷಿತ ಅಭಿವೃದ್ಧಿಗೆ ಇಂಬು ನೀಡಿ, ಈ ಸಮಸ್ಯೆಯನ್ನು ಪರಿಹರಿಸಲು ಒಂದು ಒಡಂಬಡಿಕೆಗೆ ಸಹಿಹಾಕಿದವು. ಅಷ್ಟೆ-ಸಹಿ ಹಾಕುವುದರಲ್ಲಿ ತೋರಿದ ಉತ್ಸಾಹ ಅದನ್ನು ಕಾರ್ಯಗತಗೊಳಿಸುವುದರಲ್ಲಿ ಇಲ್ಲದಾಯಿತು.
ಸುಮ್ಮನಲ್ಲ, ಬಿಬಿಸಿ ಗೆ ನೀಡಿದ ಸಂದರ್ಶನದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ‘ಈ ಹೊಗೆಯನ್ನು ಮಣಿಸಲು ನಮ್ಮ ದೇಶಕ್ಕೆ ಕಡೇ ಪಕ್ಷ ಮೂರು ವರ್ಷ ತಗಲಬಹುದು, ಅಷ್ಟೊಂದು ಬೇಗನೆ ಪರಿಹಾರವಾಗಬಲ್ಲ ಸಮಸ್ಯೆ ಇದಲ್ಲ’ ಅಂದದ್ದು.
ಈ ದಾರುಣ ಧೂಮ ಕಾಂಡದಿಂದ ಬೇಸತ್ತು ಹೋದ ನೆರೆಯ ರಾಷ್ಟ್ರಗಳು ಯಾಕೆ ತೆಪ್ಪಗಿವೆ? ಅವುಗಳು ಇಂಡೋನೇಷ್ಯಾಕ್ಕೆ ಎಚ್ಚರಿಕೆ ನೀಡಿಲ್ಲವೆ? ಹೋಗಲಿ, ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಸರುವಾಸಿಯಾದ ಸಿಂಗಾಪುರ ಸುಮ್ಮನಿದ್ದುದೇಕೆ? ಇತ್ಯಾದಿ ಪ್ರಶ್ನೆಗಳು ಏಳುವುದು ಸಹಜ.
ಆದರೆ ಇಂಡೋನೇಷ್ಯಾ ಹಾಗೂ ಅಲ್ಲಿನ ಪರಿಸರವಾದಿಗಳು ಹೇಳುವ ಕಥೆಯೇ ಬೇರೆ. ಸ್ವಾರಸ್ಯವಿರುವುದು ಅಲ್ಲೇ! ಅವರನ್ನುತ್ತಾರೆ ‘ಇಡೀ ಆರೋಪ ನಮ್ಮ ಮೇಲೆ ಹೊರಿಸುವುದಲ್ಲ. ಏಕೆಂದರೆ, ಹೀಗೆ ಕಾನೂನು ಬಾಹಿರವಾದ ಸುಡುವಿಕೆಯಲ್ಲಿ ನಿರತವಾಗಿರುವ ಕೆಲವು ಕಂಪನಿಗಳ ಹೂಡಿಕೆದಾರರು ಮಲೇಷ್ಯಾ ಹಾಗೂ ಸಿಂಗಾಪುರದವರು!’
ಇನ್ನು ಈ ಹೂಡಿಕೆದಾರರೊಂದಿಗೆ ಸರ್ಕಾರಗಳಿಗೆ ಅಪವಿತ್ರ ಮೈತ್ರಿ ಇದ್ದಲ್ಲಿ, ಆ ಸರ್ಕಾರಗಳ ಕೈ ಕಟ್ಟಿ ಹಾಕಿದಂತಾಗದೆ? ಕೋಟಿ ಕೋಟಿ ಡಾಲರ್ ವ್ಯವಹಾರಗಳಲ್ಲಿ ಮುಳುಗಿರುವವರಿಗೆ ಹೊಗೆಯಂತಹಾ ‘ಕ್ಷುಲ್ಲಕ’ ವಿಷಯಗಳಿಗೆ ಮೀಸಲಿಡಲು ಸಮಯವೆಲ್ಲಿದೆ, ವ್ಯವಧಾನವೆಲ್ಲಿದೆ?
ಸಿಂಗಾಪುರ ತೆಪ್ಪಗೆ ಕುಳಿತಿತ್ತು ಎನ್ನವಂತೆಯೂ ಇಲ್ಲ. ಅದು 2014 ರಲ್ಲೆ ಈ ಬಗ್ಗೆ ಕಾನೂನು ಜಾರಿಗೊಳಿಸಿತ್ತು ಎನ್ನಲಾಗಿದೆ. ಈ ಕಾನೂನಿನಂತೆ, ಇಂಥಾ ಹೊಗೆಗೆ ಕಾರಣವಾಗುವ ವ್ಯಕ್ತಿ ಹಾಗೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು ಸರಕಾರಕ್ಕೆ ಇದೆ. ಮಾತ್ರವಲ್ಲ ಕೆಲವು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಅದು ಮುಂದಾಗಿತ್ತು ಕೂಡಾ! ಇದು ಸತ್ಯವೇ ಆಗಿದ್ದಲ್ಲಿ, 2015ರಲ್ಲಿ ಈ ಹೊಗೆ ಹೀಗೇ ಭೂತಾಕಾರವಾಗಿ ಕಾಡಿದ್ದರ ಹಿಂದಿರುವ ರಹಸ್ಯವೇನು? ಸರಕಾರಗಳ ಕಣ್ಣಿಗೆ ಕತ್ತಲೆ ಬರಿಸಿದ್ದು ಯಾವ ಹೊಗೆ?
ಈ ಕಾನೂನು ಅಕ್ಷರವಾಗಿ ಉಳಿಯಿತು, ಅನುಷ್ಠಾನದಲ್ಲಿ ಅಲ್ಲ ಎನ್ನದೆ ವಿಧಿಯಿಲ್ಲ!
ಆದಾಗ್ಯೂ ಅಲ್ಲಿ, ಈ ಹೊಗೆಯ ಹಿಂದಿರುವ ಕಂಪನಿಗಳನ್ನು ಹೆಸರಿಸಿ ಅಪಮಾನಿಸುವ ಅಭಿಯಾನ ಕೈಗೊಳ್ಳಲಾಯಿತು ಮತ್ತು ಅಂಥಹಾ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಲಾಯಿತು ಎನ್ನುವುದು, ಅಲ್ಲಿನ ಜನತೆಯಂತೂ ತೆಪ್ಪಗಿರಲಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಇಂಡೋನೇಷ್ಯಾದಲ್ಲಿಏಲ್ಲೋ ಹುಟ್ಟಿ ಮರೆಯಾದ ಹೊಗೆಯ ಉಸಬಾರಿ ಇಂಡಿಯನ್ನರಾದ ನಮಗೇಕೆ ಅನಿಸುವುದು ಸಹಜ. ಆದರೆ ನಮ್ಮನ್ನು ಆಘಾತಕ್ಕೆ ಈಡು ಮಾಡುವಂಥಾ ವಿಷಯವೊಂದು ಇದಕ್ಕೆ ಸಂಬಂಧಿಸಿದಂತೆ ಬೆಳಕಿಗೆ ಬಂದಿದೆ ಮತ್ತು ಇದು ಪ್ರಕಟವಾದದ್ದು ‘ದ ಇಂಟರ್‍ನ್ಯಾಷನಲ್ ನ್ಯೂ ಯಾರ್ಕ್ ಟೈಮ್ಸ್’ ನಲ್ಲಿ ಎನ್ನವುದು ಅಷ್ಟೇ ಆತಂಕಕಾರಿ ಕೂಡಾ.
ನಮ್ಮ ದೇಶದ ರಾಜಧಾನಿ ದೆಹಲಿ ಮಾಡುವ ರಾಜಕೀಯ ಮಾಲಿನ್ಯ ನಮಗೆಲ್ಲಾ ಗೊತ್ತೇ ಇದೆ. ಇದಲ್ಲದೆ ವಾಯು ಮಾಲಿನ್ಯದಲ್ಲಿ ವಿಶ್ವದಾಖಲೆ ಮಾಡಿದ ಹೆಗ್ಗಳಿಕೆ ಇದೆ ಈ ನಗರಕ್ಕೆ.
ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದಂತೆ ವಿಶ್ವದ ಅತ್ಯಂತ ಮಲಿನ ನಗರಗಳಲ್ಲಿ ದೆಹಲಿಗೆ 2ನೇ ಸ್ಥಾನ. ಅಧಿಕಾರದ ಗದ್ದುಗೆ ಏರಿದಾಗ ಮೊದಲಿಗೆ ಆಮ್ ಆದ್ಮಿ ಸರ್ಕಾರವನ್ನು ಕಾಡಿದ ಸಮಸ್ಯೆಗಳಲ್ಲಿ ಇದೂ ಒಂದು. ಸಮ ಸಂಖ್ಯೆ ವಾಹನಗಳಿಗೆ ಒಂದು ದಿನ, ಬೆಸ ಸಂಖ್ಯೆ ವಾಹನಗಳಿಗೆ ಅದರ ಮರುದಿನ ಎಂಬಂತಹಾ ಕ್ರಿಯೇಟಿವ್ ಐಡಿಯಾಗಳಿಗೂ ಈ ಧೂಮ ಇಂಬು ನೀಡಿತು. ಆದರೆ ದೆಹಲಿಯ ಮಾಲಿನ್ಯ ಇದ್ಯಾವುದಕ್ಕೂ ಜಗ್ಗಲಿಲ್ಲ. ಏಕೆಂದರೆ ಅಲ್ಲಿ ವಾಹನ, ಕೈಗಾರಿಕೆಗಳ ಮಾಲಿನ್ಯದ ಜೊತೆ ಸದ್ದಿಲ್ಲದೆ ಕೈಜೋಡಿಸಿತ್ತು ನೆರೆಯ ರಾಜ್ಯಗಳ ರೈತರ ಕೊಡುಗೆ! ಅದು ಬಯಲಾದದ್ದು, ಠುಸ್ ಆದ ಪಟಾಕಿಯಂತೆ ಹೆಚ್ಚು ಸದ್ದು ಮಾಡದೆ ಇದ್ದದ್ದು, 2016ರ ದೀಪಾವಳಿಯ ಸಮಯದಲ್ಲಿ.
ದೆಹಲಿಯ ನೆರೆಯ ರಾಜ್ಯಗಳಾದ ಪಂಜಾಬ್ ಹಾಗೂ ಹರಿಯಾಣದ ರೈತರು ಸಾಮಾನ್ಯವಾಗಿ ಚಳಿಗಾಲದಲ್ಲಿ ಗೋಧಿ ಉಳುಮೆಗೆ ಸಜ್ಜಾಗುತ್ತಾರೆ ಮತ್ತು ಇದಕ್ಕಾಗಿ, ಈಗಾಗಲೇ ಭತ್ತದ ಬೆಳೆ ತೆಗೆದು ಕಟಾವು ಮಾಡಿದ ಗದ್ದೆಗಳನ್ನು ಸಿದ್ಧಪಡಿಸುತ್ತಾರೆ. ಹೊಲವನ್ನು ಆವರಿಸಿರುವ ನಿಷ್ಪ್ರಯೋಜಕ ಒಣ ಹುಲ್ಲನ್ನು ಕೀಳಲು ಅವರು ಕೂಡಾ, ಇಂಡೋನೇಷ್ಯಾದ ರೈತರಂತೆ ಅನುಸರಿಸುವುದು-‘ಕಡಿ ಮತ್ತು ಸುಡು’ ಪದ್ಧತಿಯನ್ನು! ಈ ಪದ್ಧತಿ ಎಷ್ಟೊಂದು ಸಾರ್ವತ್ರಿಕ ಅನ್ನುವುದಕ್ಕೆ ಇದೊಂದು ಉದಾಹರಣೆ ಸಾಕು! ಆದರೆ ಇಲ್ಲಂತೂ ‘ಕಡಿ’ ಕಡಿಮೆ ‘ಸುಡು’ ಹೆಚ್ಚು -ಅಥವಾ ಅದುವೇ ಎಲ್ಲಾ! ಇದು ಒಂಥರಾ ಅಪ್ಪ ನೆಟ್ಟ ‘ದಾವಾನಲ’ ಕ್ಕೆ ಜೋತು ಬಿದ್ದ ಹಾಗೆ. ಸುಲಭೊಪಾಯ ಎಂದು ಅನುಸರಿಸುವ …ಅನುಸರಿಸುತ್ತಾ ಬಂದ-ವಿಧಾನ.
ಆದರೆ ಈ ಕುರಿತು ‘ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ’ (ಎನ್ ಜಿ ಟಿ) ವರುಷದ ಹಿಂದೆಯೇ ಎಚ್ಚರಿಕೆ ನೀಡಿತ್ತು ಎನ್ನುವುದು ಗಮನಾರ್ಹ.‘ರೈತರುಈ ರೀತಿ ಭತ್ತದ ಒಣ ಹುಲ್ಲಿಗೆ ಬೆಂಕಿಯಿಕ್ಕುವುದನ್ನು ತಡೆಯಿರಿ’ ಎಂದು ಅದು ಸರ್ಕಾರಕ್ಕೆ ತಾಕೀತು ಮಾಡಿತ್ತಾದರೂ ರೈತರು ಯಾರ ಮಾತಿಗೂ ಕಿವಿಗೊಡಲಿಲ್ಲ. ಇದಕ್ಕೆ ಸಾಕ್ಷಿಯಾಯಿತು, ‘ನಾಸಾ’ದ ಉಪಗ್ರಹ ಪತ್ತೆ ಹಚ್ಚಿದ ದಟ್ಟಹೊಗೆ ಸೂಸುವ ಭೂಭಾಗ. ಅವರು ಸುಟ್ಟು ಭಸ್ಮ ಮಾಡಿದ್ದು ಅಂದಾಜು 3.2 ಕೋಟಿ ಟನ್ ಒಣಹುಲ್ಲನ್ನು-ಹೀಗಿರುವಾಗ ಹೊರಹೊಮ್ಮುವ ಹೊಗೆ ಎಷ್ಟಿರಬೇಡ? ನವದೆಹಲಿಯ ಚಳಿಗಾಲದಲ್ಲಿ ತಲೆದೋರುವ ಒಟ್ಟು ವಾಯು ಮಾಲಿನ್ಯದಲ್ಲಿ, ಉತ್ತರ ಭಾರತದ ಈ ಹೊಲಗಳಿಂದ ಅಲ್ಲಿ ತಲುಪುವ ಈ ಅಪಾಯಕಾರಿ ಹೊಗೆಯ ಪಾಲು ಸುಮಾರು ಕಾಲು ಭಾಗದಷ್ಟು ಎನ್ನಲಾಗಿದೆ. (ಇದು ಗಾಳಿಯ ದಿಕ್ಕು ಹಾಗೂ ಬಲವನ್ನು ಅವಲಂಬಿಸಿದೆ ಎನ್ನುವುದನ್ನೂ ಪರಿಗಣಿಸಬೇಕು) ಆ ಹೊಗೆಯಲ್ಲಿ ದಟ್ಟವಾಗಿರುವ ಮಾರಕ 2.5 ಪಿ ಎಮ್ ಕಣಗಳು ದೆಹಲಿ ತನಕ ವ್ಯಾಪಿಸಿ ಅಲ್ಲಿನ ಪರಿಸರವನ್ನು ಹಾನಿ ಮಾಡುತ್ತವೆ. ಅಲ್ಲಿನವರ ಪುಪ್ಪುಸ ಸೇರುತ್ತವೆ. ಆ ದಿನಗಳಲ್ಲಿ ಒಂದು ರಾತ್ರೆ ದೆಹಲಿಯ ಆಸುಪಾಸಿನಲ್ಲಿ ಇಂತಹ ಕಣಗಳ ಸಾಂದ್ರತೆ ಒಂದು ಘನ ಮೀಟರ್‍ನಲ್ಲಿ 688 ಮೈಕ್ರೋ ಗ್ರಾಂ ತಲುಪಿತ್ತು. ಇದು ಕೇಂದ್ರ ಸರ್ಕಾರ ನಿಗದಿಪಡಿಸಿದ ಆರೋಗ್ಯಕರ ಮಿತಿಗಿಂತ 10 ಪಟ್ಟು ಹೆಚ್ಚು ಎನ್ನುತ್ತದೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ವೆಬ್ ಸೈಟ್. ದೆಹಲಿಯ ಆಸುಪಾಸಿನಲ್ಲಿ ದೊರೆತ ಅಂಕಿ ಅಂಶಗಳೆಲ್ಲವೂ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕಿಂತ 4 ಪಟ್ಟು ಹೆಚ್ಚಿರುವುದನ್ನು ಸೂಚಿಸುತ್ತಿದ್ದವು. ಭಾರತ ನಿಗದಿಪಡಿಸಿದ ಮಾನದಂಡಗಳು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿದ್ದಕ್ಕಿಂತ ಸಡಿಲಾಗಿವೆ ಯಂತೆ. ಅಂದರೆ ಈ ಮಾಲಿನ್ಯದ ನಿಜವಾದ ಮಟ್ಟ ಊಹಾತೀತ ಅನ್ನಬಹುದು!
ಈ ರೀತಿ ಹೊಗೆಯೆಬ್ಬಿಸುವುದು ಪರಿಸರಕ್ಕೆ ಮಾರಕವಾಗಬಲ್ಲುದು ಎಂಬುದು ಅಲ್ಲಿನ ರೈತರಿಗೆ ತಿಳಿದಿಲ್ಲವೆ? ತಿಳಿದಿದೆ! ಮಾತ್ರವಲ್ಲ ಪರ್ಯಾಯ ವಿಧಾನಗಳನ್ನು ಬಳಸಲು ತಾವೇನೋ ಸಿದ್ಧ-ಆದರೆ ಅದು ತಮ್ಮ ಕೈಗೆಟಕುವಂತದ್ದಲ್ಲ ಅನ್ನುತ್ತಾರಂತೆ ಅವರು. ಅವರ ವಾದದಲ್ಲಿ ಹುರುಳಿದೆ.“ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿ ನೋಡಿದ್ದೇವೆ. ಅದರ ಬೆಲೆಯನ್ನು ನಾವೇ ಕೈಯ್ಯಾರೆ ಪಾವತಿಸುವುದು ಅಸಾಧ್ಯ ಎಂದು ಮನಗಂಡಿದ್ದೇವೆ” ಅನ್ನುತ್ತಾನೆ ಜಸ್ವಂತ್ ಸಿಂಗ್ ಎಂಬ ಕೃಷಿಕ. ಹೆಚ್ಚಿನವರು, ಸುಡುವುದಲ್ಲದೆ ಇನ್ಯಾವುವುದೇ ಅನ್ಯ ವಿಧಾನ ತಮಗೆ ತಿಳಿಯದು ಎಂದು ಕೈ ಚೆಲ್ಲುತ್ತಾರೆ.
ಅಂದ ಹಾಗೆ ಸರ್ಕಾರ ಪ್ರೋತ್ಸಾಹಿಸಿರುವ ಪರ್ಯಾಯ ವಿಧಾನದ ಹೆಸರು ಅನ್ವರ್ಥ ನಾಮದಂತಿದ್ದು ಭಾರತದ ರೈತರ ದುಸ್ಥಿತಿಯನ್ನು ಗೇಲಿ ಮಾಡಿದಂತಿದೆ. ಏಕೆಂದರೆ ಅದರ ಹೆಸರು ‘ಹ್ಯಾಪಿ’ ಸೀಡರ್ (ಬಿತ್ತನೆ ಯಂತ್ರ) ಮತ್ತು ಅದು ಅವರ ಬಾಳಲ್ಲಿ ವಿಶೇಷ ‘ಸಂತಸ’ವನ್ನು ಬಿತ್ತಲಿಲ್ಲ ಎನ್ನುವುದು ಒಂದು ವಿಪರ್ಯಾಸ. ಸುಮಾರು 1,22,000 ರೂಪಾಯಿ ಬೆಲೆ ಬಾಳುವ ಈ ‘ಹ್ಯಾಪಿ’ ಹೆಸರಿನ ಯಂತ್ರ ರೈತರ ಪಾಲಿಗೆ, ಸಂತಸ ಅನ್ನುವುದು ಹೇಗೋ ಹಾಗೆ, ಬರೀ ಗಗನ ಕುಸುಮ! ಇದು ಒಟ್ಟಾರೆ ಭತ್ತದ ಇಳುವರಿಯಿಂದ ಅವರು ಪಡೆವ ಆದಾಯಕ್ಕೆ ಸಮಾನವಂತೆ. ಹೀಗಿರುವಾಗ ಹ್ಯಾಪಿ ಖರೀದಿಸುವುದು ಕನಸಿನ ಮಾತಷ್ಟೆ!
ಸರ್ಕಾರ ನೀಡುವ ಅರ್ಧದಷ್ಟು ಸಬ್ಸಿಡಿ ಬಳಸಿ, ಹ್ಯಾಪಿ ಖರೀದಿಸಿ ಉಪಯೋಗಿಸಿ ಹ್ಯಾಪಿ ಆಗಿರುವ ರೈತರ ಉದಾಹರಣೆಗಳು ಇಲ್ಲವೆಂದಿಲ್ಲ. ಮೂರು ವರ್ಷಗಳಿಂದ ಹ್ಯಾಪಿ ಸೀಡರ್ ನ್ನು ಬಳಸುತ್ತಾ ಬಂದಿರುವ ಹರ್ಜಿಂದರ್ ಸಿಂಗ್ ಮತ್ತು ಅವನ ಸಹೋದರ ನರಿಂದರ್ ಸಿಂಗ್, ಅದು ತೃಪ್ತಿಕರವಾಗಿ ಕಾರ್ಯವೆಸಗುತ್ತದೆ ಅನ್ನುತ್ತಾರೆ. ಅವರಿಗೆ, ಗದ್ದೆಯಲ್ಲಿ ಉಳಿದ ಒಣ ಹುಲ್ಲನ್ನು ಸುಡುವ ಅಗತ್ಯ ಬೀಳಲಿಲ್ಲ ಮಾತ್ರವಲ್ಲ ಅವರಿಗೆ ದೊರೆತ ಭತ್ತ ಹಾಗೂ ಗೋಧಿ ಎರಡರ ಇಳುವರಿಯಲ್ಲೂ ಹೆಚ್ಚಳ ಕಂಡು ಬಂತು. ಒಣ ಹುಲ್ಲನ್ನು ಹೊಲದಲ್ಲಿ ಹಾಗೇ ಬಿಟ್ಟದ್ದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಯಿತು ಎಂಬುದು ಅವರಿಗೆ ಮನವರಿಕೆಯಾಯಿತು. ತಮಗೆ ದೊರೆತಂತೆ ಸಬ್ಸಿಡಿಯ ಲಭ್ಯತೆ ಇನ್ನಷ್ಟೂ ವ್ಯಾಪಕವಾಗಿದ್ದರೆ, ಹ್ಯಾಪಿ ಸೀಡರ್ ಬಳಸಲು ಇನ್ನಷ್ಟೂ ರೈತರು ಮುಂದೆ ಬರಬಹುದು ಅನ್ನುತ್ತಾರೆ ಅವರು. ಪ್ರಸ್ತುತ ಸರ್ಕಾರವೇನಾದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆಯೆ? ಈ ಬಾರಿಯ ಚಳಿಗಾಲದ ನಂತರ ಇದು ಸ್ಪಷ್ಟವಾದೀತೇನೋ!
ಇನ್ನೊಂದು ಪರ್ಯಾಯ ವಿಧಾನ, ಹೆಚ್ಚುವರಿ ಒಣಹುಲ್ಲಿಗೆ ಒಂದು ಮಾರುಕಟ್ಟೆ ಕಂಡುಕೊಳ್ಳುವುದು ಅನ್ನುತ್ತಾರೆ, ಸುಪ್ರೀಂ ಕೊರ್ಟ್ 1988ರಲ್ಲಿ ಏರ್ಪಡಿಸಿದ ಪರಿಸರ ಮಾಲಿನ್ಯ ( ತಡೆಗಟ್ಟುವಿಕೆ ಹಾಗೂ ನಿಯಂತ್ರಣ) ಪ್ರಾಧಿಕಾರದ ಅಧ್ಯಕ್ಷ ಭುರೆ ಲಾಲ್. ಒಣಹುಲ್ಲಿನಿಂದ ವಿದ್ಯುತ್ ಉತ್ಪಾದಿಸಬಲ್ಲ ಏಳು ವಿದ್ಯುತ್ ಸ್ಥಾವರಗಳನ್ನು ಪಂಜಾಬ್ ನಲ್ಲಿ ಸ್ಥಾಪಿಸಾಗಿದೆ ಮತ್ತು ಇನ್ನೂ ಆರು ವಿದ್ಯುತ್ ಸ್ಥಾವರಗಳ ನಕ್ಷೆ ಸಿದ್ಧಪಡಿಸಲಾಗಿದೆ.ಆದರೆ ಒಂದು ವೇಳೆ ಈ ಹದಿಮೂರು ಸ್ಥಾವರಗಳು ಒಣಹುಲ್ಲು ಬಳಸಿದರು ಕೂಡಾ, ಇಡೀ ಪಂಜಾಬ್ ಉತ್ಪಾದಿಸುವ ಒಟ್ಟು ಒಣಹುಲ್ಲಿನ 10% ಗಿಂತ ಅದು ಹೆಚ್ಚಾಗಲಾರದು ಅನ್ನುತ್ತಾರೆ ನವದೆಹಲಿಯ ವಿಜ್ಞಾನ ಹಾಗೂ ಪರಿಸರ ಕೇಂದ್ರದ ಸಂಶೋಧಕ ಪೊಲಾಶ್ ಮುಖರ್ಜಿ. ಅಂದರೆ ಒಣಹುಲ್ಲಿಗೆ ಅಂಥಾ ದೊಡ್ಡ ಮಾರುಕಟ್ಟೆ ಇಲ್ಲವೆಂದಾಯಿತು.
ಒಣಹುಲ್ಲನ್ನು ಈ ವಿದ್ಯುತ್ ಸ್ಥಾವರಗಳವರೆಗೆ ತಂದು, ಸಾಗಾಣಿಕೆ ವೆಚ್ಚ ಭರಿಸಿ ನಷ್ಟ ಮಾಡಿಕೊಂಡು ಕೈಸುಟ್ಟುಕೊಳ್ಳುವ ಬದಲು ಅದನ್ನು ಹೊಲದಲ್ಲೆ ಸುಟ್ಟು ಬಿಡುತ್ತೇವೆ ಎಂದು ರೈತರಿಗೆ ಅನಿಸಿದರೆತಪ್ಪೇನು? ಒಣಹುಲ್ಲನ್ನು ಸುಡುವುದರ ಮೇಲೆ ಸರ್ಕಾರ ದಂಡ ಕೂಡಾ ವಿಧಿಸಿದೆಯಾದರೂ ರೈತರು ಅದರಿಂದ ಹಿಂಜರಿದಿಲ್ಲ.
ಇದು ಬೆಳಕಿಗೆ ಬಂದ ಹೊಗೆಯ ಪುರಾಣ. ಬೆಳಕಿಗೆ ಬಾರದ ಹೊಗೆ ಪ್ರಕರಣಗಳು ದೇಶ ವಿದೇಶಗಳಲ್ಲಿ ಇನ್ನೆಷ್ಟು ಇವೆಯೋ?
ಮಲಿನವಾದ ವಾಯು ಮನುಷ್ಯ ಮತ್ತು ಇತರ ಜೀವಿಗಳ ಶ್ವಾಸಕೋಶ ಸೇರಿ ಅನಾರೋಗ್ಯಕ್ಕೆ, ಅಕಾಲಿಕ ಸಾವಿಗೆ ಕಾರಣವಾಗುತ್ತದೆ ಎಂದು ಎಂಥವರೂ ಊಹಿಸಬಲ್ಲರು. ಆದರೆ ಇತ್ತೀಚೆಗೆ ವಿಜ್ಞಾನ ಹೊರಗೆಡಹಿದ ಮಾಹಿತಿ ಧೃತಿಗೆಡಿಸುವಂತಿದೆ. ಮಲಿನ ವಾಯುವಿನಲ್ಲಿರುವ ಹಾನಿಕಾರಕ ಕಣಗಳು ಮಿದುಳನ್ನು ಪ್ರವೇಶಿಸುತ್ತವೆಯಂತೆ! (ಇತ್ತೀಚೆಗೆ ಕೆಲವರ ವರ್ತನೆ ಕಾಣುವಾಗ ಇದು ನಿಜವಿರಬೇಕು ಅನಿಸೀತು-ಮತ್ತು ಅದು ಬೇರೆ ಮಾತು) ಇದು ಯುನೈಟೆಡ್ ಕಿಂಗ್‍ಡಮ್‍ನ ಲಾಂಕಸ್ಟರ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ಸಾರಥ್ಯದಲ್ಲಿ ನಡೆಸಿದ ಸಂಶೋಧನೆಯಿಂದ ಬೆಳಕಿಗೆ ಬಂದ ಅಂಶ.
ಇದು ಪ್ರಕಟವಾಗಿರುವುದು ಪ್ರೊಸೀಡಿಂಗ್ಸ್ ‘ಆಫ್ ದ ನ್ಯಾಷನಲ್ ಅಕಾಡೆಮಿ ಆಪ್ ಸಯನ್ಸ್' ನಲ್ಲಿ. ಮ್ಯಾಗ್ನಟೈಟ್ ಎಂದು ಕರೆಯಲಾಗುವ ಈ ಕಣಗಳು ಮಿದುಳಿನಲ್ಲಿ ನೈಸರ್ಗಿಕವಾಗಿಯೇ ಉತ್ಪತ್ತಿಯಾಗುತ್ತವೆಯಾದರೂ ಈ ಸಂಶೋಧಕರು ಹೌಹಾರುವಂತೆ ಮಾಡಿದ್ದು ಅವರಿಗೆ ತಾವು ಸಂಶೋಧಿಸಿದ ಮಿದುಳಿನ ಟಿಶ್ಯೂಗಳಲ್ಲಿ ಕಂಡು ಬಂದ ಅವುಗಳ ಮಿತಿ ಮೀರಿದ ಪ್ರಮಾಣ ಹಾಗೂ ಭಿನ್ನ ಆಕಾರ! ಉರುಟಾದ, ಮೃದುವಾದ ಇಂತಹಾ ಕಣಗಳು, ವಾಹನಗಳ ಇಂಜಿನ್ ಅಥವಾ ಬ್ರೇಕಿಂಗ್ ಸಿಸ್ಟಂನ ಅತ್ಯಧಿಕ ಉಷ್ಣತೆಯಲ್ಲಿ ಮಾತ್ರ ಸೃಷ್ಟಿಯಾಗುತ್ತವೆಯಂತೆ!
ಹೀಗಿರುವಾಗ ಇವು ಮನುಷ್ಯರ ಮಿದುಳು ಸೇರಿದ್ದು ಹೇಗೆ? ಇವುಗಳಿಂದ ಉಂಟಾಗುವ ಅಡ್ಡ ಪರಿಣಾಮಗಳೇನು? ಇವು ಅಲ್‍ಜûಮೈ ರ್ ರೋಗಕ್ಕೆ ಕಾರಣವಗುತ್ತವೆ ಎಂಬುದು ಊಹಾಪೋಹದ ನೆಲೆಯಲ್ಲೆ ನಿಂತಿದೆ. ಈ ಕುರಿತು ವಿಜ್ಞಾನಿಗಳ ನಡುವೆ ಒಮ್ಮತವಿಲ್ಲ, ಸದ್ಯ.
ಎಲ್ಲಾ ಬಿಟ್ಟು, ವಾಯು ಮಾಲಿನ್ಯದಲ್ಲಿ ಭಾರತ ಚೈನಾವನ್ನು ಹಿಂದಿಕ್ಕಿದೆ ಎನ್ನುವುದು ನಮಗೆ ಹೆಮ್ಮೆಯ ವಿಷಯವೇನೂ ಅಲ್ಲ. ನಮ್ಮ ದೇಶದ ಹಾಳು-ಗಾಳಿ ಪ್ರತಿ ವರ್ಷ 11 ಲಕ್ಷ ಅಕಾಲಿಕ ಮೃತ್ಯುವಿಗೆ ಕಾರಣವಾಗುತ್ತದೆ ಎಂಬುದು ನಮ್ಮನ್ನು ಇನ್ನು ಕೂಡಾ ಬಡಿದೆಬ್ಬಿಸುತ್ತಿಲ್ಲ. ನಾವಾದರೋ, ಒಂದು ತೀರಾ ನಗಣ್ಯವೆನಿಸುವ ವಿವಾದಿತ ಹೇಳಿಕೆಗೆ ಕೂಡಾ ಟಯರ್ ಸುಟ್ಟು ಪ್ರತಿಭಟಿಸುತ್ತೇವೆ-ನಮ್ಮ ಎಲ್ಲಾ ಸಮಸ್ಯೆಗಳಿಗೆ ಟಯರ್‍ಗಳೇ ಕಾರಣ ಅನ್ನುವ ಹಾಗೆ! ‘ಶುದ್ಧ ಗಾಳಿಯಲ್ಲಿ ವಿಹರಿಸಿದರೆ, ನಡೆದಾಡಿದರೆ ಆರೋಗ್ಯಕ್ಕೆ ಉತ್ತಮ’ ಎಂದು ಬೆಂಗಳೂರಿನ ವಿದ್ಯಾವಂತರು ನಿತ್ಯ ಬೆಳಗ್ಗೆ ಲಾಲ್ ಬಾಗ್, ಕಬ್ಬನ್ ಪಾರ್ಕ್‍ಳಿಗೆ ತಮ್ಮ ವಾಹನಗಳಲ್ಲಿ ಬಂದು ಹೋಗಿ ನಗರದ ವಾಯುಮಾಲಿನ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ. ಎಂಥಾ ವಿಪರ್ಯಾಸ!
ದೀಪಾವಳಿ ಬಂದು, ಮಾಲಿನ್ಯವನ್ನು ಬಿಟ್ಟು ಹೋಗಿದೆ. ಜೊತೆಯಲ್ಲಿ, ಕ್ಯಾಲಿಫೋರ್ನಿಯಾ, ಪೋರ್ಚುಗಲ್ ಹಾಗೂ ಸ್ಪೇನ್‍ನಲ್ಲಿ ಕಾಳ್ಗಿಚ್ಚು ಮಾಡಿರುವ ಹಾವಳಿಯ ಸುದ್ದಿಯೂ ಬೆಳಕಿಗೆ ಬಂದಿದೆ. ಈ ಬಾರಿ ಭಾರತದಲ್ಲಿ ಸುರಿದ ವರ್ಷಧಾರೆ, ಅಮೆರಿಕಾದಲ್ಲಿ ಚಂಡಮಾರುತ ತಂದ ಆಪತ್ತು ಮುಂಬರುವ ಹವಾಮಾನ ವೈಪರೀತ್ಯಕ್ಕೆ ಪೀಠಿಕೆಯಂತಿದೆ.
ಚಳಿಗಾಲದ ಜೊತೆಯಲ್ಲಿ ದಿಲ್ಲಿಯ ಹೊಗೆಯ ತಾಂಡವದ ಸುದ್ದಿ ಎಲ್ಲರನ್ನು ಕಂಗೆಡಿಸಿದೆ. ನಿಸ್ಸಹಾಯಕರಾದ ರೈತರು ಒಣಹುಲ್ಲಿಗೆ ಬೆಂಕಿಯಿಕ್ಕುವ ವಿಷಯ ಮತ್ತೆ ಎಲ್ಲರ ಗಮನ ಸೆಳೆದಿದೆ.
ಜಾಗತಿಕ ತಾಪಮಾನದ ಬೇಗೆಗೆ, ಬಿರುಸಿಗೆ ಬಾರೀ ಗಾತ್ರದ ಮಂಜುಗಡ್ಡೆಗಳು ಕರಗುತ್ತಿವೆ. ಚಲಿಸುತ್ತಿವೆ. ಕಲ್ಲು ಬಂಡೆಯಂತಾಗಿರುವ ಮಾನವ ಮನಸ್ಸುಗಳು. . . ಹಾಗೇ ಇವೆ.

Comments
Post a Comment