Skip to main content

Posts

Showing posts from July, 2018
ಪ್ರಾರ್ಥನೆ ಹರಳಲ್ಲಿ ಹರನ ಹುಳದಲ್ಲಿ ನರನ ಜೀವಕಣಗಳಲಿ ತಾರಾಗಣ ಪಾಡ್ದನಗಳಲಿ ಸೂಕ್ತಿಯ ಘನ ಹರಿದ್ವನಗಳಲಿ ಸ್ವರ್ಗ ಹುದುಗಿರುವುದನ ಕಾಂಬ ಕಂಗಳನು ಇರುವುದೆಲ್ಲವನೂ ಇರುವಂತೇ ನೋಡದಿರುವ ಅರಿವನು ಕರುಣಿಸೆನಗೆ ದೇವಾ ನಾನೆಂಬ ನೆರಳ ಬೀಳಿಸುವ ನೀನೆಂಬ ಬೆಳಕನು ಒಂದು ಮಾಡೆಯಾ ಈ ಕಸವನೂ ಆಗಸವನೂ? ಇರುವೆಯಾ ಇಲ್ಲದಿರುವೆಯಾ ಹುಡುಕುವುದನು ಬಿಟ್ಟಿರುವೆ ನಾನಂತೂ ಇರುವೆ ಸಾಕೆನಗೆ ಸಣ್ಣದುದರಲ್ಲೇ ಸಾರ್ಥಕತೆ ನೀ ತರುವೆ! ಸುರೆಯೋ ಸೆರೆಯೋ? ನೀನೆನ್ನ ಪೊರೆಯೋ! ಹಾಲೋ ಹಾಲಾಹಲವೋ? ಕುಡಿಸಿ ಮಡಿಸುವೆ ಹರಿಯೆ ಯಾಕೆಂದು ಅರಿಯೆ ಬರಸಿಡಿಲಾದರೂ ಸರಿ ಬೆಳಕಲ್ಲವೇನು ಹರಿ? ಕರಿನೆರಳಾದರೂ ಬರಿ ಬೀಳುವುದೇ ಇಲ್ಲದಿರೆ ಬೆಳಕು ಈ ಪರಿ? ಇಲ್ಲದುದರ ಮೇಲೆ ಇರುವ ನಿಷ್ಠೆ ಇರುವುದರ ಮೇಲೆ ಅಷ್ಟಕ್ಕಷ್ಟೆ ಅನ್ನದ ಹಾಗೆ ಮೂಢನಾಗುವಷ್ಟು ಗಾಢವಾಗಿ ಯಾವುದನೂ, ಕೊನೆಗೆ ನಿನ್ನನೂ ನಂಬದ ಹಾಗೆ ಬೇಕು ಬೇಕು ಅನ್ನುವುದಕೇ ಬದುಕಬೇಕು ಅನ್ನಿಸದ ಹಾಗೆ ಮಾಡು ನೀ ನನ್ನನು ನೆನಪಿಸು ತಾ ಬರೆಯುವುದೆಂದರೆ ನಿನ್ನ ಮೇಲೆ ಬರೆದಂತೆ ನಂಬಿಕೆಯ ಮೇಲೆ ಎಂಬುದನು
An edited version of this article was published in the Sunday supplement of Udayavani dated 26-11-2017 ರಾಮಾಯಣದ ದೇಶಗಳು ಹಾಗೂ ಲಂಕಾದಹನ ಪ್ರಸಂಗಗಳು ಅಲ್ಲಿ ಬಾಂಬ್ ದಾಳಿ ನಡೆಯಿತು. ವಿಶೇಷವೇನೆಂದರೆ ಆ ಬಾಂಬ್ ದಾಳಿಗಳಿಂದ ಮನುಷ್ಯರಂತೂ ಯಾರೂ ಸಾಯಲಿಲ್ಲ. ಆ ದಾಳಿಯ ಗುರಿ ಮನುಷ್ಯರು ಅಲ್ಲವೇ ಅಲ್ಲ. ವಿನಾಶವೂ ಅಲ್ಲ! ಮಾತ್ರವಲ್ಲ, ಆ ಬಾಂಬ್‍ಗಳಿಂದ ಬೆಂಕಿ ಭುಗಿಲೇಳಲಿಲ್ಲ. ಏಕೆಂದರೆ, ಅವು ಜಲ ಬಾಂಬ್‍ಗಳು ಮತ್ತು ಅವುಗಳ ಗುರಿ, ಅಲ್ಲಿ ಹಬ್ಬಿರುವ ಬೆಂಕಿಯ ಕೆನ್ನಾಲಿಗೆಗಳು. ಅವುಗಳ ಹುಟ್ಟಡಗಿಸಲು ಎಸೆದಿರುವ ಬಾಂಬ್‍ಗಳು ಅವು.  ಆ ಬೆಂಕಿ ಸುಟ್ಟ ವನಸಿರಿ, ಅದು ಕಾರಿದ ಹೊಗೆ, ಅದು ತಂದೊಡ್ಡಿದ ರಾಷ್ಟ್ರೀಯ ವಿಪತ್ತು. . . ಇದು ಇಂಡೋನೇಷ್ಯಾದ ಗೋಳು. ದ್ವೀಪಮಯ ದೇಶಗಳಲ್ಲೇ ಅತಿ ದೊಡ್ಡದು ಎನ್ನುವ ಹೆಗ್ಗಳಿಕೆ ಬಿಟ್ಟರೆ ರಿಪಬ್ಲಿಕ್ ಆಫ್ ಇಂಡೋನೇಷ್ಯಾದ ಸಾಧನೆ ಗಣನೀಯವೇನೂ ಅಲ್ಲ, ಗಮನಾರ್ಹವೂ ಅಲ್ಲ. ಈ ದೇಶ ಏನಾದರೂ ಸುದ್ದಿ ಮಾಡಿದರೆ ಅದು ಒಳ್ಳೆಯ ಕಾರಣಗಳಿಗೆ ಆಗಿರುವುದು ತೀರಾ ಅಪರೂಪ. ಪ್ರಳಯಾಂತಕ ಸುನಾಮಿಯಿಂದ, ಭೂಕಂಪದಿಂದ, ಭಯೋತ್ಪಾದನೆಯಿಂದ ಆಗೊಮ್ಮೆ ಈಗೊಮ್ಮೆ ‘ನಾನಿಲ್ಲಿದ್ದೇನೆ’ ಎಂದು ಜಗತ್ತಿಗೆ ಕೂಗಿ ಹೇಳುವ ಈ ದೇಶ, ತನ್ನ  ಗರುಡ ಚಿತ್ರದ ಲಾಂಛನ ಹಾಗೂ ಗರುಡ  ಹೆಸರಿನ ವಿಮಾನ ಯಾನ ಸೇವೆ, ತನ್ನ ಕರೆನ್ಸಿಯಲ್ಲಿ ಅವತರಿಸಿದ ಗಣಪ- ಇವೆಲ್ಲವುಗಳಿಂದ ಭಾರತದ ಹತ್ತಿರದ ಸಂಬಂಧಿ ಅನಿಸಿದರೂ ...
ಒಂದು ( ಮಾಡಿದ ) ಮಳೆ ಸುರಿದದ್ದು ಒಂದೇ ಒಂದು ಮಳೆ ತುಂಬಿ ಹರಿದವು ಎಷ್ಟೊಂದು ತೊರೆ ತುಂಬಿದ ಮೋರಿ ಅಗಲವಾಯಿತು ಬೀದಿ ಎಂಬಂತೆ ತೋರಿ ಹರಿದು ಹೋದವೆಷ್ಟು ನೀರು ಖೀರು , ಸಿಪ್ಪೆ , ಗುಪ್ಪೆ , ಹಿಕ್ಕೆ , ಪುಕ್ಕ , ಉಂಡದ್ದು , ಉಗಿದದ್ದು ಕೊಳೆತದ್ದು , ಎಸೆದದ್ದು , ಮಸೆದದ್ದು ಎಲ್ಲ ಸೇರಿ ತಿಂದು ಬಿಟ್ಟದ್ದು , ತಿನ್ನಲಾಗದ್ದಕ್ಕೆ ಜೋಡಿ ಕಣ್ಣೆದುರೆ ತೇಲುವ ಕಣ್ಮರೆಯಾದರೆ ಮುಳುಗುವ ಮಾಗದ ಕನಸುಗಳ ಕಾಗದದ ದೋಣಿಗಳು ಕೂಡಿ ಮುಟ್ಟಾದವರು , ಮುಟ್ಟಲಾಗದವರು , ಮೈಮಾರುವವರು , ಮೈಮರೆತವರು ಬಣ್ಣಬಣ್ಣದವರು , ಕಣ್ಣು ಕಾಣದವರು ಕಂಡೂ ಕಾಣದವರು ಎಂಥೆಂಥವರೆಲ್ಲ ಒಂದೇ ಸೂರಿನಡಿ ಮೆತ್ತಗಾಗಿ ಇದೇ ಮಳೆಗಾಗಿ ಮಾಡಿದ್ದೆವು ತಪ , ಪರ್ಜನ್ಯ ಜಪ ಹೋಮ , ಹವನ , ಯಾಗ , ಕಪ್ಪೆಗಳ , ಕತ್ತೆಗಳ ಮದುವೆ ಹೂತಿಟ್ಟ ಪಾಂಡು ರೋಗಿಯ ಶವವನು ತೆಗೆದಿದ್ದೆವು ಹೊರಗೆ ಎಂಬುದನೆಲ್ಲಾ ಮರೆತೇ ಮರೆತು ಒಮ್ಮೆ ಮುಗಿದರೆ ಸಾಕೆಂದು ಹಾಕಿದ ಹಿಡಿಶಾಪದ ಮಳೆಗೆ ಬೇಸತ್ತು ಕೈಕೊಡಲು ವಿದ್ಯುತ್ತು ಸಿಡಿಲ ಒಡಲಲಿರಿಸಿಕೊಂಡೇ ಮಿಂಚಿ ಕೃತಾರ್ಥವಾದ ಮುಗಿಲ ಜೋಡಿ ಒಂದಾದ ಎಲ್ಲರನೂ , ಎಲ್ಲವನೂ ಒಮ್ಮೆ ಬೆಳಗಿ ಇಳೆಗೆ ಸಾಧ್ಯವಾಗದ್ದು ಮಳೆಗೆ ಸಾಧ್ಯವಾಯಿತು ಎಂದು ಬೀಗಿ ನೀರು ನೀರೆಂಬುದ ಮರೆತು ಕಲಸು ಮೇಲ...