Skip to main content

Posts

Showing posts from 2018
            ಗುರು ದಕ್ಷಿಣೆ  ಬರೆಯುವುದನು ಕಲಿಸಿರುವೆ ನೀನೆನಗೆ ಗುರುವೆ ಬದುಕುವುದನಲ್ಲ, ಯಾಕೆಂದು ಅರಿಯೆ ಗುರುವಾಗಿಯೇ ಬದುಕಿ ಬಲ್ಲ ನಿನಗೆ ಗುರುವಾಗಿ ಅಲ್ಲದೆ ಬದುಕಿ ಅರಿವಿದೆಯೆ? ಗುರುವಾಗಿಯೇ ಬಾಳಿದೆ ಹೇಳದೆ ಗುರುವಾಗುವುದೆಂದು ಬಾಳೇ ಕೊನೆಗೆ ಬರೆದಂತೆ ಬದುಕಲ್ಲ ತೆರೆದಂತೆ ಬೆಳಕಲ್ಲ ಅರಿವಾಗಲು ಬಾಳು ಅರ್ಧ ಕಳೆಯಿತಲ್ಲ? ಕರಿಹಲಗೆಯ ಪರದೆಯಲಿ ಸರಿದಾಡಿದ ಪಾತ್ರ ಕೈಹಿಡಿದು ನಡೆಯಿಸಿತು, ಕಳೆದಾಗ ನೇತ್ರ ಬೆತ್ತ ಹಿಡಿದ ಭಂಗಿ ಚಿತ್ತವನು ತುಂಬಿ ಎಚ್ಚರಿಸುವುದಿದೆ ಈಗಲೂ ಎಡವಿಬೀಳದಂತೆ ನಡೆಯು ಲೆಕ್ಕವಿದೆಯೇ ಚಾಕುಪುಡಿ ಶಾಯಿ, ಸಮಯ ನಿನ್ನುದರ ಸೇರಿದುದರ? ಎದುರಿಂದ ವಂದಿಸಿ ಹಿಂದಿಂದ ನಿಂದಿಸಿದವರ ನರಿ ಯದವನಂತೆ ನಟಿಸಿ ಹಿಗ್ಗಿ ಹರಸಿದುದರ? ಅಡ್ಡಹೆಸರಿಟ್ಟು ಕರೆದವರ ಹೆಸರನೂ ಅಕ್ಕರೆಯಿಂದ ನೆನೆದುದರ? ದ್ವೇಷವನು ಕೊಂದ ದೇಶದ ತಂದೆ ನಿಮ್ಮಲ್ಲಿ ನಾನು ಕಂಡುಕೊಂಡೆ ಬ್ರಹ್ಮ, ವಿಷ್ಣು, ಮಹೇಶ್ವರರಂತಾದರೂ ದೂರವಾಗದೆ ನಿಂದೆ ಇರುವುದಂತೆ ಪ್ರಭೆ ದೇವರ ಹಿಂದೆ ಅದರಿಂದ ಯಾರಿಗೇನು ಲಾಭ? ಹಂಚಿದೆ ನೀನು ಅಂಥ ಜ್ಞಾನವನು ಮಾಡಿ ಎಲ್ಲರಿಗೂ ಸಮ ಭಾಗ ಮುನಿಸಿಕೊಳ್ಳುವ ಹಕ್ಕನು ಕಸಿದುಕೊಳ್ಳದೆ ಹೋದೆ ಉತ್ತರಗಳನು ಬರೆಸಿ ಬರೆಸಿ ಪ್ರಶ್ನಿಸುವ ಮನವನು ಅಳಿಸಿದೆಯೋ ಹೇಗೆ, ಕರಿಹಲಗೆಯನು ಒರೆಸಿದ ಹಾಗೆ? ಗುರುವಾಗುವ ಕಷ್ಟದಿಂದ ಹೇಗೋ ತಪ್ಪಿಸಿಕೊಂಡ ನಾನು ಗುರುಗಳಿಲ್ಲದ ಬಾಳಲಿ ಇದೋ ಹೀಗೆ ಸಿಕ್ಕ...
ಪ್ರಾರ್ಥನೆ ಹರಳಲ್ಲಿ ಹರನ ಹುಳದಲ್ಲಿ ನರನ ಜೀವಕಣಗಳಲಿ ತಾರಾಗಣ ಪಾಡ್ದನಗಳಲಿ ಸೂಕ್ತಿಯ ಘನ ಹರಿದ್ವನಗಳಲಿ ಸ್ವರ್ಗ ಹುದುಗಿರುವುದನ ಕಾಂಬ ಕಂಗಳನು ಇರುವುದೆಲ್ಲವನೂ ಇರುವಂತೇ ನೋಡದಿರುವ ಅರಿವನು ಕರುಣಿಸೆನಗೆ ದೇವಾ ನಾನೆಂಬ ನೆರಳ ಬೀಳಿಸುವ ನೀನೆಂಬ ಬೆಳಕನು ಒಂದು ಮಾಡೆಯಾ ಈ ಕಸವನೂ ಆಗಸವನೂ? ಇರುವೆಯಾ ಇಲ್ಲದಿರುವೆಯಾ ಹುಡುಕುವುದನು ಬಿಟ್ಟಿರುವೆ ನಾನಂತೂ ಇರುವೆ ಸಾಕೆನಗೆ ಸಣ್ಣದುದರಲ್ಲೇ ಸಾರ್ಥಕತೆ ನೀ ತರುವೆ! ಸುರೆಯೋ ಸೆರೆಯೋ? ನೀನೆನ್ನ ಪೊರೆಯೋ! ಹಾಲೋ ಹಾಲಾಹಲವೋ? ಕುಡಿಸಿ ಮಡಿಸುವೆ ಹರಿಯೆ ಯಾಕೆಂದು ಅರಿಯೆ ಬರಸಿಡಿಲಾದರೂ ಸರಿ ಬೆಳಕಲ್ಲವೇನು ಹರಿ? ಕರಿನೆರಳಾದರೂ ಬರಿ ಬೀಳುವುದೇ ಇಲ್ಲದಿರೆ ಬೆಳಕು ಈ ಪರಿ? ಇಲ್ಲದುದರ ಮೇಲೆ ಇರುವ ನಿಷ್ಠೆ ಇರುವುದರ ಮೇಲೆ ಅಷ್ಟಕ್ಕಷ್ಟೆ ಅನ್ನದ ಹಾಗೆ ಮೂಢನಾಗುವಷ್ಟು ಗಾಢವಾಗಿ ಯಾವುದನೂ, ಕೊನೆಗೆ ನಿನ್ನನೂ ನಂಬದ ಹಾಗೆ ಬೇಕು ಬೇಕು ಅನ್ನುವುದಕೇ ಬದುಕಬೇಕು ಅನ್ನಿಸದ ಹಾಗೆ ಮಾಡು ನೀ ನನ್ನನು ನೆನಪಿಸು ತಾ ಬರೆಯುವುದೆಂದರೆ ನಿನ್ನ ಮೇಲೆ ಬರೆದಂತೆ ನಂಬಿಕೆಯ ಮೇಲೆ ಎಂಬುದನು
An edited version of this article was published in the Sunday supplement of Udayavani dated 26-11-2017 ರಾಮಾಯಣದ ದೇಶಗಳು ಹಾಗೂ ಲಂಕಾದಹನ ಪ್ರಸಂಗಗಳು ಅಲ್ಲಿ ಬಾಂಬ್ ದಾಳಿ ನಡೆಯಿತು. ವಿಶೇಷವೇನೆಂದರೆ ಆ ಬಾಂಬ್ ದಾಳಿಗಳಿಂದ ಮನುಷ್ಯರಂತೂ ಯಾರೂ ಸಾಯಲಿಲ್ಲ. ಆ ದಾಳಿಯ ಗುರಿ ಮನುಷ್ಯರು ಅಲ್ಲವೇ ಅಲ್ಲ. ವಿನಾಶವೂ ಅಲ್ಲ! ಮಾತ್ರವಲ್ಲ, ಆ ಬಾಂಬ್‍ಗಳಿಂದ ಬೆಂಕಿ ಭುಗಿಲೇಳಲಿಲ್ಲ. ಏಕೆಂದರೆ, ಅವು ಜಲ ಬಾಂಬ್‍ಗಳು ಮತ್ತು ಅವುಗಳ ಗುರಿ, ಅಲ್ಲಿ ಹಬ್ಬಿರುವ ಬೆಂಕಿಯ ಕೆನ್ನಾಲಿಗೆಗಳು. ಅವುಗಳ ಹುಟ್ಟಡಗಿಸಲು ಎಸೆದಿರುವ ಬಾಂಬ್‍ಗಳು ಅವು.  ಆ ಬೆಂಕಿ ಸುಟ್ಟ ವನಸಿರಿ, ಅದು ಕಾರಿದ ಹೊಗೆ, ಅದು ತಂದೊಡ್ಡಿದ ರಾಷ್ಟ್ರೀಯ ವಿಪತ್ತು. . . ಇದು ಇಂಡೋನೇಷ್ಯಾದ ಗೋಳು. ದ್ವೀಪಮಯ ದೇಶಗಳಲ್ಲೇ ಅತಿ ದೊಡ್ಡದು ಎನ್ನುವ ಹೆಗ್ಗಳಿಕೆ ಬಿಟ್ಟರೆ ರಿಪಬ್ಲಿಕ್ ಆಫ್ ಇಂಡೋನೇಷ್ಯಾದ ಸಾಧನೆ ಗಣನೀಯವೇನೂ ಅಲ್ಲ, ಗಮನಾರ್ಹವೂ ಅಲ್ಲ. ಈ ದೇಶ ಏನಾದರೂ ಸುದ್ದಿ ಮಾಡಿದರೆ ಅದು ಒಳ್ಳೆಯ ಕಾರಣಗಳಿಗೆ ಆಗಿರುವುದು ತೀರಾ ಅಪರೂಪ. ಪ್ರಳಯಾಂತಕ ಸುನಾಮಿಯಿಂದ, ಭೂಕಂಪದಿಂದ, ಭಯೋತ್ಪಾದನೆಯಿಂದ ಆಗೊಮ್ಮೆ ಈಗೊಮ್ಮೆ ‘ನಾನಿಲ್ಲಿದ್ದೇನೆ’ ಎಂದು ಜಗತ್ತಿಗೆ ಕೂಗಿ ಹೇಳುವ ಈ ದೇಶ, ತನ್ನ  ಗರುಡ ಚಿತ್ರದ ಲಾಂಛನ ಹಾಗೂ ಗರುಡ  ಹೆಸರಿನ ವಿಮಾನ ಯಾನ ಸೇವೆ, ತನ್ನ ಕರೆನ್ಸಿಯಲ್ಲಿ ಅವತರಿಸಿದ ಗಣಪ- ಇವೆಲ್ಲವುಗಳಿಂದ ಭಾರತದ ಹತ್ತಿರದ ಸಂಬಂಧಿ ಅನಿಸಿದರೂ ...
ಒಂದು ( ಮಾಡಿದ ) ಮಳೆ ಸುರಿದದ್ದು ಒಂದೇ ಒಂದು ಮಳೆ ತುಂಬಿ ಹರಿದವು ಎಷ್ಟೊಂದು ತೊರೆ ತುಂಬಿದ ಮೋರಿ ಅಗಲವಾಯಿತು ಬೀದಿ ಎಂಬಂತೆ ತೋರಿ ಹರಿದು ಹೋದವೆಷ್ಟು ನೀರು ಖೀರು , ಸಿಪ್ಪೆ , ಗುಪ್ಪೆ , ಹಿಕ್ಕೆ , ಪುಕ್ಕ , ಉಂಡದ್ದು , ಉಗಿದದ್ದು ಕೊಳೆತದ್ದು , ಎಸೆದದ್ದು , ಮಸೆದದ್ದು ಎಲ್ಲ ಸೇರಿ ತಿಂದು ಬಿಟ್ಟದ್ದು , ತಿನ್ನಲಾಗದ್ದಕ್ಕೆ ಜೋಡಿ ಕಣ್ಣೆದುರೆ ತೇಲುವ ಕಣ್ಮರೆಯಾದರೆ ಮುಳುಗುವ ಮಾಗದ ಕನಸುಗಳ ಕಾಗದದ ದೋಣಿಗಳು ಕೂಡಿ ಮುಟ್ಟಾದವರು , ಮುಟ್ಟಲಾಗದವರು , ಮೈಮಾರುವವರು , ಮೈಮರೆತವರು ಬಣ್ಣಬಣ್ಣದವರು , ಕಣ್ಣು ಕಾಣದವರು ಕಂಡೂ ಕಾಣದವರು ಎಂಥೆಂಥವರೆಲ್ಲ ಒಂದೇ ಸೂರಿನಡಿ ಮೆತ್ತಗಾಗಿ ಇದೇ ಮಳೆಗಾಗಿ ಮಾಡಿದ್ದೆವು ತಪ , ಪರ್ಜನ್ಯ ಜಪ ಹೋಮ , ಹವನ , ಯಾಗ , ಕಪ್ಪೆಗಳ , ಕತ್ತೆಗಳ ಮದುವೆ ಹೂತಿಟ್ಟ ಪಾಂಡು ರೋಗಿಯ ಶವವನು ತೆಗೆದಿದ್ದೆವು ಹೊರಗೆ ಎಂಬುದನೆಲ್ಲಾ ಮರೆತೇ ಮರೆತು ಒಮ್ಮೆ ಮುಗಿದರೆ ಸಾಕೆಂದು ಹಾಕಿದ ಹಿಡಿಶಾಪದ ಮಳೆಗೆ ಬೇಸತ್ತು ಕೈಕೊಡಲು ವಿದ್ಯುತ್ತು ಸಿಡಿಲ ಒಡಲಲಿರಿಸಿಕೊಂಡೇ ಮಿಂಚಿ ಕೃತಾರ್ಥವಾದ ಮುಗಿಲ ಜೋಡಿ ಒಂದಾದ ಎಲ್ಲರನೂ , ಎಲ್ಲವನೂ ಒಮ್ಮೆ ಬೆಳಗಿ ಇಳೆಗೆ ಸಾಧ್ಯವಾಗದ್ದು ಮಳೆಗೆ ಸಾಧ್ಯವಾಯಿತು ಎಂದು ಬೀಗಿ ನೀರು ನೀರೆಂಬುದ ಮರೆತು ಕಲಸು ಮೇಲ...
ಜೀವತಳೆವಜ್ಜ ಸೀನಿದ ಅಜ್ಜ ಹಾಗನಿಸುವಂತ ಜೀವಂತ ನಶ್ಯದ ಡಬ್ಬ ಒಳಗಿವೆ ಹುಡಿ ಹುಡಿ ನೆನಹುಗಳು ಕಾಲಾತೀತ ಅವನು ಮುಟ್ಟಿದ್ದೆಲ್ಲ ಕತೆ ಹೇಳಲು ಕುಳಿತಿವೆ ಉಳಿದದ್ದೆಲ್ಲ ಬಾಳ ಸಂಜೆ ಕೈ ಹಿಡಿದ ಸಂಗಾತಿ ಊರು ಗೋಲಿಗೆ ಸದಾ ನೇತಾಡುವ ಪಾಡು ಗಟ್ಟಿ ಗೋಡೆಗೆ ಹೊಡೆದ ಚಿಕ್ಕ ಗೂಟಕೆ ಅವನು ಓದಿದ್ದೆಲ್ಲಾ ತಲೆಗೆ ಹತ್ತಿದ ಹಾಗೆ ಧೂಳು ಮೆತ್ತಿದ ಚಾಳೀಸಿಗೆ ಜ್ಞಾನ ವೃದ್ಧನ ಗಾಂಭೀರ್ಯ ‘ಎಲ್ಲಿಟ್ಟೆ? ಅಲ್ಲಿಟ್ಟೆ! ಇಲ್ಲೇಕಿಟ್ಟೆ?’ ಅರಸುತಾ ಕಣ್ಣಲ್ಲೇ ಧರಿಸಿದವ  ತರಿಸಿದ ನಗೆಯಲೆ ಕಣ್ಮುಚ್ಚಿದ ಕಣ್ಣ ಮುಚ್ಚಾಲೆ ಆರಾಮ ಕುರ್ಚಿಗೆ ಆ ಶ್ರೀರಾಮನ ಪಾದ ಸೀತೆ ನೀವುತ್ತಿದ್ದ ನೆನಪಿನನಂಟು ಅಜ್ಜಿಯ ನಿಟ್ಟುಸಿರು ತುಂಬಿ ತುಳುಕಿದ ಕಂಡು ಕೇಳರಿಯದ ಕಾಡಿನ ಕಂಡೂ ಕಾಣದ ಮರದ  ನಿರುತ್ತರ ಕಾಂಡ  ಸಮರಸವೇ ಜೀವನವೆಂದು ಸಾರಿದ ವೀಳೇಯದ ಕೆಂಪುಗುಳಿನ ರಸ ಜಗಲಿ ತುಂಬಾ ಗಲೀಜು ಸದಾ ಸ್ವಚ್ಛ ಅಂಗಳದಲಿ ರಂಗವಲ್ಲಿಯ ಬೊಚ್ಚು ಮಂದಹಾಸ  ಆವಾಹಿಸಿದ ಹಾಗಿದೆ ಅವನ ಆತ್ಮ ಇವೆಲ್ಲವುಗಳ ಒಳಗೆ ಬಾಳ ಸಂಜೆಯಲಿ ನಾವಲ್ಲ ಇವೆಲ್ಲ ಅವನಿಗೆ ಆಪ್ತವಾಗಿದ್ದ ಹಾಗೆ
‘ತುಷಾರ’ದಲ್ಲಿ ಪ್ರಕಟವಾದ ನನ್ನ ಲೇಖನ    ಆಲಸಿಯೊಬ್ಬ ಕಾರ್ - ಕರ್ತನಾದ ಕತೆ   ಅವನೊಬ್ಬ ಉದಾಸಿನದ ಮುದ್ದೆ . ಎಳವೆಯಿಂದಲೇ ಹಾಗೇನೆ ! ಮೈಮುರಿದು ದುಡಿಯುವ ಬದಲು ಮೈಮುರುಟಿ ಮಲಗುವುದರಲ್ಲಿ ಅವನು ಮುಂದು . ಅವನು ಜನಿಸಿದ್ದು 1863 ರ ಜುಲೈ 30 ರಂದು ಯು ಎಸ್ ನ ಮಿಶಿಗನ್ ‍ ನ ವೇಯ್ನ್ ಕೌಂಟಿ ಎಂಬ ಹಳ್ಳಿಯೊಂದರಲ್ಲಿ . ಅವನ ಬಾಳಿನಲ್ಲಿ ಮಹತ್ವದ ತಿರುವಿಗೆ ಕಾರಣವಾದದ್ದು ಒಂದು ಪುಟ್ಟ ಗಡಿಯಾರ . 13 ವರ್ಷದ ಬಾಲಕನಾಗಿದ್ದಾಗ ಅವನ ತಂದೆ ನೀಡಿದ ಅಕ್ಕರೆಯ ಉಡುಗೊರೆಯದು . ಆದರೆ ಅವನು ಆ ಪಾಕೆಟ್ ‍ ವಾಚ್ ‍ ನ ಮರ್ಮ ಭೇದಿಸಿದ . ಅದನ್ನು ಬಿಚ್ಚಿ , ಅದರ ಹಂದರವನ್ನು ಬಿಡಿಸಿ , ಹಾಗೇ ಮರು ಜೋಡಣೆ ಮಾಡಿ ಬಂಧು ಬಳಗದ , ನೆರೆಕರೆಯವರ ಹುಬ್ಬೇರುವಂತೆ ಮಾಡಿದ . ಅವರಾದರೋ , ತಮ್ಮ ಟೈಂಪೀಸ್ ಇತ್ಯಾದಿಗಳನ್ನು ಅವನಿಗೆ ಕೊಟ್ಟು ರಿಪೇರಿ ಮಾಡಿಸಿಕೊಳ್ಳಲು ಶುರುಮಾಡಿದರು . ಅಲ್ಲಿಂದ ಅವನಿಗೆ ಅದೊಂದು ಗೀಳಾಯಿತು . ಮತ್ತದು ಅವನ ಪಾಲಿಗೆ ವರವಾಯಿತು . ಲಿಯನಾರ್ಡೊ ಡಾ ವಿಂಚಿ ಹೇಗೆ ಕಪ್ಪೆ , ಜಿರಳೆಗಳನ್ನು ಕತ್ತರಿಸಿ ಅವುಗಳ ದೇಹರಚನೆಯನ್ನು ತಿಳಿಯಲು ಪ್ರಯತ್ನಿಸಿದ್ದನೋ ಅದೇ ರೀತಿ ಈ ಬಾಲಕ ಯಂತ್ರಗಳನ್ನು ಬಿಚ್ಚಿ ಬಿಚ್ಚಿ ಜೋಡಿಸಿಟ್ಟು ರಿಪೇರಿ ಕೆಲಸಗಳಿಗೂ ಮುಂದಾದ . ಅದರಲ್ಲಿ ಸೈ ಎನಿಸಿಕೊಂಡ . ಆದರೇನು ಫಲ...