Skip to main content

Posts

Showing posts from October, 2017
ಅಮ್ಮಾ, ಹೆಡೆದೆಯೇಕೆ ನೀನೆನ್ನ ಹೊರೆಯೆಂದುಕೊಂಡೇ? ನೊಂದುಕೊಂಡೇ ನೋವನುಂಡೆ ಹೆಡೆದೊಡನೆ ಅತ್ತವನ ಕಂಡು ಆನಂದಗೊಂಡೇ? ಅಷ್ಟೊಂದು ನೋಯಿಸಿ ಹೊರಬರಬೇಕೆಂಬ ಹಟ ನನಗಂತೂ ಇರಲಿಲ್ಲ ನೀನು ಕೇಳಬೇಕಲ್ಲ! ಕಣ್ಣುಕುಕ್ಕುವ ಈ ನಿತ್ಯ ನರಕ ಬೆಳಕಿಗಿಂತ ಕಣ್ಣು ಮುಚ್ಚಿದಂತಿರುವ ನಿನ್ನೊಡಲ ಕತ್ತಲು ಆಪ್ಯಾಯಮಾನವಾಗಿತ್ತು ಅಲ್ಲೇ ಬಾಳು ಸವೆಸುವ ಆಸೆಯಿತ್ತು ಅದಕಾಗಿ ಅತ್ತೆ ನೀನಾದರೋ ನೋವನೆಲ್ಲ ಮರೆತೆ ಯಾಕೆ ಕಡಿಯಲು ಬಿಟ್ಟೆ ಹೊಕ್ಕುಳ ಬಳ್ಳಿ? ಅಗಲುವುದು ಅಭ್ಯಾಸವಾಯಿತು ಅಲ್ಲೇ ಮೊದಲಲ್ಲಿ