https://www.upayuktha.com ಕೈಗೊಂಡಿರುವ ʼಶ್ರೀರಾಮ ಕಥಾ ಲೇಖನ ಅಭಿಯಾನʼದಲ್ಲಿ ಬೆಳಕು ಕಂಡ ನನ್ನ ಕೊಡುಗೆ ರಾಮಾಯಣದಲ್ಲಿ ವಚನಬದ್ಧತೆ ‘ನ ಭೀತೋ ಮರಣದಾಸ್ಮಿ ಕೇವಲಂ ದೂಷಿತೋ ಯಶಃ’- ಶ್ರೀ ರಾಮಚಂದ್ರ ( ನನಗೆ ಮರಣದ ಭೀತಿ ಇಲ್ಲ. ನನಗೆ ಭೀತಿ ಇರುವುದು ಕೇವಲ ಕಳಂಕ ಅಂಟಿರುವ ಯಶಸ್ಸಿನದ್ದು.) ಸೂರ್ಯ ವಂಶಿ, ಸೀತಾವಲ್ಲಭ, ಮರ್ಯಾದಾ ಪುರುಷೋತ್ತಮನಿಗೆ ಕಳಂಕದ ಭೀತಿಯೇ? ಹೌದು! ಆದರೆ ಆ ಭೀತಿ ಜನಸಾಮಾನ್ಯರಿಗೆ ಇರುವಂಥಹಾ ಪುಕ್ಕಲುತನ ಅಲ್ಲ. ಅದು ವಿವೇಕಿಗೆ ಇರುವ ಜಾಗೃತ ಮನಸ್ಥಿತಿ. ಶ್ರೀರಾಮ ತನ್ನಸುತ್ತ ತಾನೆ ಹಾಕಿಕೊಂಡಂತೆ ಒಂದು ಲಕ್ಷ್ಮಣ ರೇಖೆ! ಮತ್ತು ಅದರಲ್ಲೇ ಅಡಗಿರುವುದು ಶ್ರೀರಾಮನ ಶ್ರೇಷ್ಠತನ! ಅವನನ್ನು ಕಳಂಕ ಲೇಪಿತ ಯಶಸ್ಸಿನಿಂದ ದೂರವಿಟ್ಟದ್ದು ಆ ಎಚ್ಚರ, ಆ ಪರಿವೆ. ಯಶಸ್ಸನ್ನು ಹೇಗಾದರೂ ಪಡೆಯಬಹುದು ಮತ್ತು ಜಗದ ಕಣ್ಣಿಗೆ ಕಾಣುವುದು ಕೇವಲ ಯಶಸ್ಸು, ಯಶಸ್ಸು ಮತ್ತು ಯಶಸ್ಸು ಮಾತ್ರ! ಯಶಸ್ಸಿನಿಂದ ಪ್ರಸಿದ್ಧಿ, ಕೀರ್ತಿ ಪ್ರಸಿದ್ಧಿಯಿಂದ ಹೆಸರು, ಪ್ರಚಾರ. ಇದು ಸರಪಳಿ ಕ್ರಿಯೆಯ ಹಾಗೆ ಮುಂದುವರಿದು, ಯಶಸ್ವೀ ವ್ಯಕ್ತಿಗಳಲ್ಲಿ ಅಹಂಕಾರದ ಮದ ಏರುವಂತೆ ಮಾಡುತ್ತದೆ. ಸಮಾಜವಾದರೂ ಅಷ್ಟೇ. ಅದಕ್ಕೆ ಯಶಸ್ಸು ಮುಖ್ಯ. ಯಶಸ್...
I write therefore I am. It is no holds barred. World is the page I crawl on. At the end of the day I want the readers to wonder 'what is in store for us next?' If in the due course I succeed in discovering myself, I would feel gratified.