ಗುರು ದಕ್ಷಿಣೆ ಬರೆಯುವುದನು ಕಲಿಸಿರುವೆ ನೀನೆನಗೆ ಗುರುವೆ ಬದುಕುವುದನಲ್ಲ, ಯಾಕೆಂದು ಅರಿಯೆ ಗುರುವಾಗಿಯೇ ಬದುಕಿ ಬಲ್ಲ ನಿನಗೆ ಗುರುವಾಗಿ ಅಲ್ಲದೆ ಬದುಕಿ ಅರಿವಿದೆಯೆ? ಗುರುವಾಗಿಯೇ ಬಾಳಿದೆ ಹೇಳದೆ ಗುರುವಾಗುವುದೆಂದು ಬಾಳೇ ಕೊನೆಗೆ ಬರೆದಂತೆ ಬದುಕಲ್ಲ ತೆರೆದಂತೆ ಬೆಳಕಲ್ಲ ಅರಿವಾಗಲು ಬಾಳು ಅರ್ಧ ಕಳೆಯಿತಲ್ಲ? ಕರಿಹಲಗೆಯ ಪರದೆಯಲಿ ಸರಿದಾಡಿದ ಪಾತ್ರ ಕೈಹಿಡಿದು ನಡೆಯಿಸಿತು, ಕಳೆದಾಗ ನೇತ್ರ ಬೆತ್ತ ಹಿಡಿದ ಭಂಗಿ ಚಿತ್ತವನು ತುಂಬಿ ಎಚ್ಚರಿಸುವುದಿದೆ ಈಗಲೂ ಎಡವಿಬೀಳದಂತೆ ನಡೆಯು ಲೆಕ್ಕವಿದೆಯೇ ಚಾಕುಪುಡಿ ಶಾಯಿ, ಸಮಯ ನಿನ್ನುದರ ಸೇರಿದುದರ? ಎದುರಿಂದ ವಂದಿಸಿ ಹಿಂದಿಂದ ನಿಂದಿಸಿದವರ ನರಿ ಯದವನಂತೆ ನಟಿಸಿ ಹಿಗ್ಗಿ ಹರಸಿದುದರ? ಅಡ್ಡಹೆಸರಿಟ್ಟು ಕರೆದವರ ಹೆಸರನೂ ಅಕ್ಕರೆಯಿಂದ ನೆನೆದುದರ? ದ್ವೇಷವನು ಕೊಂದ ದೇಶದ ತಂದೆ ನಿಮ್ಮಲ್ಲಿ ನಾನು ಕಂಡುಕೊಂಡೆ ಬ್ರಹ್ಮ, ವಿಷ್ಣು, ಮಹೇಶ್ವರರಂತಾದರೂ ದೂರವಾಗದೆ ನಿಂದೆ ಇರುವುದಂತೆ ಪ್ರಭೆ ದೇವರ ಹಿಂದೆ ಅದರಿಂದ ಯಾರಿಗೇನು ಲಾಭ? ಹಂಚಿದೆ ನೀನು ಅಂಥ ಜ್ಞಾನವನು ಮಾಡಿ ಎಲ್ಲರಿಗೂ ಸಮ ಭಾಗ ಮುನಿಸಿಕೊಳ್ಳುವ ಹಕ್ಕನು ಕಸಿದುಕೊಳ್ಳದೆ ಹೋದೆ ಉತ್ತರಗಳನು ಬರೆಸಿ ಬರೆಸಿ ಪ್ರಶ್ನಿಸುವ ಮನವನು ಅಳಿಸಿದೆಯೋ ಹೇಗೆ, ಕರಿಹಲಗೆಯನು ಒರೆಸಿದ ಹಾಗೆ? ಗುರುವಾಗುವ ಕಷ್ಟದಿಂದ ಹೇಗೋ ತಪ್ಪಿಸಿಕೊಂಡ ನಾನು ಗುರುಗಳಿಲ್ಲದ ಬಾಳಲಿ ಇದೋ ಹೀಗೆ ಸಿಕ್ಕ...
I write therefore I am. It is no holds barred. World is the page I crawl on. At the end of the day I want the readers to wonder 'what is in store for us next?' If in the due course I succeed in discovering myself, I would feel gratified.