Skip to main content

Posts

Showing posts from May, 2018
ಜೀವತಳೆವಜ್ಜ ಸೀನಿದ ಅಜ್ಜ ಹಾಗನಿಸುವಂತ ಜೀವಂತ ನಶ್ಯದ ಡಬ್ಬ ಒಳಗಿವೆ ಹುಡಿ ಹುಡಿ ನೆನಹುಗಳು ಕಾಲಾತೀತ ಅವನು ಮುಟ್ಟಿದ್ದೆಲ್ಲ ಕತೆ ಹೇಳಲು ಕುಳಿತಿವೆ ಉಳಿದದ್ದೆಲ್ಲ ಬಾಳ ಸಂಜೆ ಕೈ ಹಿಡಿದ ಸಂಗಾತಿ ಊರು ಗೋಲಿಗೆ ಸದಾ ನೇತಾಡುವ ಪಾಡು ಗಟ್ಟಿ ಗೋಡೆಗೆ ಹೊಡೆದ ಚಿಕ್ಕ ಗೂಟಕೆ ಅವನು ಓದಿದ್ದೆಲ್ಲಾ ತಲೆಗೆ ಹತ್ತಿದ ಹಾಗೆ ಧೂಳು ಮೆತ್ತಿದ ಚಾಳೀಸಿಗೆ ಜ್ಞಾನ ವೃದ್ಧನ ಗಾಂಭೀರ್ಯ ‘ಎಲ್ಲಿಟ್ಟೆ? ಅಲ್ಲಿಟ್ಟೆ! ಇಲ್ಲೇಕಿಟ್ಟೆ?’ ಅರಸುತಾ ಕಣ್ಣಲ್ಲೇ ಧರಿಸಿದವ  ತರಿಸಿದ ನಗೆಯಲೆ ಕಣ್ಮುಚ್ಚಿದ ಕಣ್ಣ ಮುಚ್ಚಾಲೆ ಆರಾಮ ಕುರ್ಚಿಗೆ ಆ ಶ್ರೀರಾಮನ ಪಾದ ಸೀತೆ ನೀವುತ್ತಿದ್ದ ನೆನಪಿನನಂಟು ಅಜ್ಜಿಯ ನಿಟ್ಟುಸಿರು ತುಂಬಿ ತುಳುಕಿದ ಕಂಡು ಕೇಳರಿಯದ ಕಾಡಿನ ಕಂಡೂ ಕಾಣದ ಮರದ  ನಿರುತ್ತರ ಕಾಂಡ  ಸಮರಸವೇ ಜೀವನವೆಂದು ಸಾರಿದ ವೀಳೇಯದ ಕೆಂಪುಗುಳಿನ ರಸ ಜಗಲಿ ತುಂಬಾ ಗಲೀಜು ಸದಾ ಸ್ವಚ್ಛ ಅಂಗಳದಲಿ ರಂಗವಲ್ಲಿಯ ಬೊಚ್ಚು ಮಂದಹಾಸ  ಆವಾಹಿಸಿದ ಹಾಗಿದೆ ಅವನ ಆತ್ಮ ಇವೆಲ್ಲವುಗಳ ಒಳಗೆ ಬಾಳ ಸಂಜೆಯಲಿ ನಾವಲ್ಲ ಇವೆಲ್ಲ ಅವನಿಗೆ ಆಪ್ತವಾಗಿದ್ದ ಹಾಗೆ
‘ತುಷಾರ’ದಲ್ಲಿ ಪ್ರಕಟವಾದ ನನ್ನ ಲೇಖನ    ಆಲಸಿಯೊಬ್ಬ ಕಾರ್ - ಕರ್ತನಾದ ಕತೆ   ಅವನೊಬ್ಬ ಉದಾಸಿನದ ಮುದ್ದೆ . ಎಳವೆಯಿಂದಲೇ ಹಾಗೇನೆ ! ಮೈಮುರಿದು ದುಡಿಯುವ ಬದಲು ಮೈಮುರುಟಿ ಮಲಗುವುದರಲ್ಲಿ ಅವನು ಮುಂದು . ಅವನು ಜನಿಸಿದ್ದು 1863 ರ ಜುಲೈ 30 ರಂದು ಯು ಎಸ್ ನ ಮಿಶಿಗನ್ ‍ ನ ವೇಯ್ನ್ ಕೌಂಟಿ ಎಂಬ ಹಳ್ಳಿಯೊಂದರಲ್ಲಿ . ಅವನ ಬಾಳಿನಲ್ಲಿ ಮಹತ್ವದ ತಿರುವಿಗೆ ಕಾರಣವಾದದ್ದು ಒಂದು ಪುಟ್ಟ ಗಡಿಯಾರ . 13 ವರ್ಷದ ಬಾಲಕನಾಗಿದ್ದಾಗ ಅವನ ತಂದೆ ನೀಡಿದ ಅಕ್ಕರೆಯ ಉಡುಗೊರೆಯದು . ಆದರೆ ಅವನು ಆ ಪಾಕೆಟ್ ‍ ವಾಚ್ ‍ ನ ಮರ್ಮ ಭೇದಿಸಿದ . ಅದನ್ನು ಬಿಚ್ಚಿ , ಅದರ ಹಂದರವನ್ನು ಬಿಡಿಸಿ , ಹಾಗೇ ಮರು ಜೋಡಣೆ ಮಾಡಿ ಬಂಧು ಬಳಗದ , ನೆರೆಕರೆಯವರ ಹುಬ್ಬೇರುವಂತೆ ಮಾಡಿದ . ಅವರಾದರೋ , ತಮ್ಮ ಟೈಂಪೀಸ್ ಇತ್ಯಾದಿಗಳನ್ನು ಅವನಿಗೆ ಕೊಟ್ಟು ರಿಪೇರಿ ಮಾಡಿಸಿಕೊಳ್ಳಲು ಶುರುಮಾಡಿದರು . ಅಲ್ಲಿಂದ ಅವನಿಗೆ ಅದೊಂದು ಗೀಳಾಯಿತು . ಮತ್ತದು ಅವನ ಪಾಲಿಗೆ ವರವಾಯಿತು . ಲಿಯನಾರ್ಡೊ ಡಾ ವಿಂಚಿ ಹೇಗೆ ಕಪ್ಪೆ , ಜಿರಳೆಗಳನ್ನು ಕತ್ತರಿಸಿ ಅವುಗಳ ದೇಹರಚನೆಯನ್ನು ತಿಳಿಯಲು ಪ್ರಯತ್ನಿಸಿದ್ದನೋ ಅದೇ ರೀತಿ ಈ ಬಾಲಕ ಯಂತ್ರಗಳನ್ನು ಬಿಚ್ಚಿ ಬಿಚ್ಚಿ ಜೋಡಿಸಿಟ್ಟು ರಿಪೇರಿ ಕೆಲಸಗಳಿಗೂ ಮುಂದಾದ . ಅದರಲ್ಲಿ ಸೈ ಎನಿಸಿಕೊಂಡ . ಆದರೇನು ಫಲ...