Skip to main content

Posts

Showing posts from December, 2017
ಪುಳಿಯೋಗರೆ ಮಾಡಿ ಹೋಗಿದ್ದಾಳೆ !   ಬಾಳನ್ನು ಪುಳಿಯೋಗರೆ ಮಾಡಿ ಹೋಗಿದ್ದಾಳೆ ತವರು ಮನೆಗೆ ಆಕೆ ಎಷ್ಟಾದರೂ ಮನೆ ಯಾಕೆ ‘ ಅಕ್ಕನಂತೆ , ಕೆಲವೊಮ್ಮೆ ಅಮ್ಮನಂತೆ ತರುವಳವಳು ತಣ್ಣನೆಯ ಭಾವ ಕಾಣುವುದು ಹೇಗೆ ಹೆಣ್ಣಂತೆ ? ಇರುವವಳ ಬಗ್ಗೆ ಮನೆಯೊಳಗೇ ಮೋಹಗೊಳ್ಳುವುದು ಹೇಗೆ ? ಈ ಸತಿ ಸಾವಿತ್ರಿಯರಿಗೆ ಏನು ಗೊತ್ತು ರಾವಣರ ಜಗತ್ತು ?’ ಅನ್ನುವವನಿಗೆ ಕಲಿಸಿದ್ದಾಳೆ ಇನ್ನು ಮರೆಯಲಾಗದ ಪಾಠ ಇಲ್ಲದಿರುವಾಗ ಅರಿವಾಗುವುದು ಇರುವುದರ ಮಹತ್ವ ಅರೆಪಾವು ಸಮಯ ಸಿಕ್ಕರೆ ಸಾಕು ಅವರೆಕಾಯಿ ಸುಲಿಯುತ್ತಾ ಕುಳಿತುಕೊಳ್ಳುವವಳಿಗೆ ಹಿಡಿಗಾತ್ರದ ಪ್ರಸಾದ ಸಿಕ್ಕರೆ ಸಾಕು ದೇವರ ಕಂಡಂತೆ ನಲಿವವಳಿಗೆ “ ಎಲ್ಲಿದ್ದಾನೆ ದೇವರು ?” ಅಂದರೆ “ ಇಲ್ಲಿದ್ದಾನೆ ನನ್ನೆದುರು !” ಅನ್ನುವವಳಿಗೆ ನನ್ನ ಕಾವ್ಯ , ಬರಹ , ಓದು ಈ ಜಗದ ಸಕಲ ಸಮಸ್ಯೆಗಳನೂ ಆವಾಹಿಸಿದ ದಾರ್ಶನಿಕನ ಸೋಗು ಈ ವಯಸ್ಸಿನಲ್ಲೂ ಕಾಡುವ ಮಹತ್ವಾಕಾಂಕ್ಷೆಗಳ ಜಂಜಡ ಇದಾವುದೂ ಬೇಡ ಮನಸ್ಸು ಮಾಡಿದರೂ ದೇಹ ಮಾಡದ ಹಾದರ ದಾಂಪತ್ಯವೆಂದರೆ ಇದೇನೋ ? ದುರಂತ ಕಾವ್ಯವಿದು ಹಲವರ ಹರಹರಾ … ಯಾರದೋ ಒಂದು ಕಿರುನಗೆ , ಕುಡಿನೋಟ ಮಾಡುವುದಿದೆ ಮನವನು ಈಗಲೂ ಹಳಹಳ ಉಸುರಬೇಕೆನಿಸುತ್ತದೆ ಕಿವಿಗಳಲಿ ಅವರ “ ಆದರೂ ಬಿಟ್ಟಿರಲಾರೆ ನಾನು ನನ...