Skip to main content

Posts

Showing posts from August, 2016
ನಿಜ ಜೀವನದಲ್ಲಿ ಅನಂತ್ ನಾಗ್ ಎಂಬ ಪಾತ್ರ ವನ್ನು ನಿರ್ವಹಿಸುವ ವೆಂಕೋಬ ರಾವ್ ಎಂಬ 'ಗೋಧಿ ಬಣ್ಣ ಸಾಧಾರಣ ಮೈಕಟ್ಟಿ'ನ ಅಸಾಧಾರಣ ವಯಸ್ಕ ವ್ಯಕ್ತಿಯನ್ನು ನಿನ್ನೆ ನೋಡಿದೆ. ಮನದ ಬೆಳ್ಳಿಪರದೆಯಲ್ಲಿ ನಿನ್ನೆಯಿಂದ ನೋಡುತ್ತಲೇ ಇದ್ದೇನೆ! 23 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ 29 ವರ್ಷಗಳ ಶಿಶುವಾಗಿ ಅಂಬೆಗಾಲಿಡುತ್ತಾ ಕಳೆದೇ ಹೋದೆ ಅಂದುಕೊಂಡು ಭಯಪಟ್ಟಿದ್ದ ಇದೇ ಬಸವನಗುಡಿಯವರಂತೆ ಅವರು! ಅವರು ಇನ್ನೊಮ್ಮೆ ಕಾಣೆಯಾದರೆ, ನನಗೆಲ್ಲಾದರೂ ದಾರಿಯಲ್ಲಿ ಸಿಗುವಂತಾ ದರೆ ... ಎಂಬ ಆಸೆ ಶುರುವಾಗಿದೆ! ಹಾಗಾದರೆ ಅವರ ಕೈ ಹಿಡಿದು ಮನೆ ಮುಟ್ಟಿಸುವ ನೆವದಲ್ಲಿ ಅವರ ಮನಮುಟ್ಟುವಂತೆ ನನ್ನ ಅಪ್ಪನ ಬಗ್ಗೆ ಹೇಳಿ ಗಳಗಳನೆ ಅಳುವಾಸೆ!