Shame on the people who are celebrating the demise of UR Ananthamurthy! This is why I never identify myself with the saffron brigade. Even our PM has condoled his death. Shocked to hear about the sad demise of Dr UR Anantha Murthy. RIP ಅವರು ನಮ್ಮ ನಿಮ್ಮ ಹಾಗೆ, ಕಿಡ್ನಿ, ಶ್ವಾಸಕೋಶ, ಅದು ಇದು ಎಂಬ ಸಣ್ಣ ಸಂಗತಿಗಳಲ್ಲಿ ಬದುಕುತ್ತಿದ್ದರು ಎಂದು ನಂಬುವುದು ನನಗೇಕೊ ಕಷ್ಟವಾಗುತ್ತಿದೆ. ಅವರೆಂದರೆ ನನ್ನ ಪಾಲಿಗೆ 'ಸಂಸ್ಕಾರ'. ನಾನು ಐದನೆಯ ತರಗತಿಯಲ್ಲಿದ್ದಾಗ, ಓದಿದ ಮೊತ್ತಮೊದಲ ಕಾದಂಬರಿ. ವಿಸ್ಮಯ, ಬೆರಗು ಗಳೊಂದಿಗೆ ಅವರು ಅನಾವರಣ ಗೊಳಿಸಿದ ಅಗ್ರಹಾರದ ಪ್ರಪಂಚಕ್ಕೆ ನನ್ನ ಅಂಬೆಗಾಲು. ಇನ್ನೊಮ್ಮೆ, ಪದವಿ ಮುಗಿಸಿದ ಬಳಿಕ ಮತ್ತೊಮ್ಮೆ ಓದಿದ ನೆನಪು. ಓದಿದ ಹಾಗೆ, ಅರಿವಿನಾಳಗಳಿಗೆ ಇಳಿದ ಹಾಗೆ ನನ್ನಲ್ಲೇ ಮರು ಹುಟ್ಟು ಪಡೆದ ಪ್ರಾಣೇಶಾಚಾರ್ಯರ ವ್ಯಕ್ತಿತ್ವ, ಪರೋಕ್ಷ ಮನದಲ್ಲೆಲ್ಲೋ 'ವಂಶ ವೃಕ್ಷ' ದ ಶ್ರೀನಿವಾಸ ಶ್ರೋತ್ರಿ ಯವರೊಂದಿಗೆ ತುಲನೆ. ಭೈರಪ್ಪ, ಶಿವರಾಮ ಕಾರಂತ, ಚಿತ್ತಾಲ, ಪೂಚಂತೇ ಯವರ ಹಾಗೆ ಮನದೊಳಗಿನ ಶಾಲೆಯಲ್ಲಿ ಕನ್ನಡ ಕಲಿಸಿದ ಇಂಗ್ಲಿಷ್ ಮಾಷ್ಟ್ರು! ಈಗಷ್ಟೇ 'ಸೂರ್ಯ' ಇನ್ನೇನು ಮುಳುಗಿ ಮರೆಯಾದ ಅನ್ನುವಷ್ಟರಲ್ಲಿ, ಸಿಡಿಲೇ ಇಲ್ಲದೆ ಸುರಿದ ಮಳೆಯ ನು ಹಿಂಬಾಲಿಸಿ ಬಂದೆರಗಿದ್ದು ಅವರು 'ಮೌನಿ' ಆದರು ...
I write therefore I am. It is no holds barred. World is the page I crawl on. At the end of the day I want the readers to wonder 'what is in store for us next?' If in the due course I succeed in discovering myself, I would feel gratified.